Haripriya-Vasishta Simha: ಸಪ್ತಪದಿ ತುಳಿದ ಹರಿಪ್ರಿಯ ಜೋಡಿ ! ಫೋಟೋಸ್‌ ವೈರಲ್‌

ಸ್ಯಾಂಡಲ್‌ವುಡ್‌ನ ತಾರಾ ಜೋಡಿಯಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಅವರು ತಮ್ಮ ವೈವಾಹಿಕ ಜೀವನಕ್ಕೆ ಹೆಜ್ಜೆ ಕಾಲಿಟ್ಟಿದ್ದು, ಇಬ್ಬರು ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಗಣರಾಜ್ಯೋತ್ಸವ ದಿನದಂದೇ ಈ ಜೋಡಿ ಹಸೆಮಣೆ ಏರಿದ್ದು ವಿಶೇಷ! ಇದೀಗ ಮುದ್ದಾದ ಜೋಡಿಗಳ ಮದುವೆಯ ಫೋಟೋಗಳು ಈಗಾಗಲೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು ಎಲ್ಲರೂ ಶುಭಕೋರುತ್ತಿದ್ದಾರೆ.

 

ಇಂದು ಸಾಂಸ್ಕೃತಿಕ ನಗರಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಯದಲ್ಲಿ ಅದ್ಧೂರಿಯಾಗಿ ಈ ಕ್ಯೂಟ್ ಜೋಡಿಯ ವಿವಾಹ ಮಹೋತ್ಸವವು ನೆರವೇರಿದೆ. ವಿವಾಹ ಶಾಸ್ತ್ರಗಳಲ್ಲಿ ನಟಿ ಹರಿಪ್ರಿಯಾ ಅವರು ನೀಲಿ ಬಣ್ಣದ ಬಾರ್ಡರ್ ಇದ್ದಂತಹ ಕ್ರೀಂ ಕಲರ್ ಸೀರೆ ಉಟ್ಟು ಮುಖದಲ್ಲಿ ಮದುಮಗಳ ಕಳೆ ಎದ್ದು ಕಾಣುತ್ತಿದ್ದರೆ, ಪಕ್ಕದಲ್ಲೇ ನಿಂತಿದ್ದ ಮದುಮಗ ವಸಿಷ್ಠ ಸಿಂಹ ಕೂಡಾ ಸುಂದರವಾದ ಉಡುಪಿನಲ್ಲಿ, ಪೇಟವನ್ನು ಧರಿಸಿ ಸಖತ್ ಆಗಿ ಮಿಂಚುತ್ತಿದ್ದರು.

ಹಲವು ವರ್ಷಗಳಿಂದಲೂ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ ತಮ್ಮ ಪ್ರೇಮ ವಿಚಾರವನ್ನು ಗೌಪ್ಯವಾಗಿಯೇ ಇಟ್ಟಿದ್ದರು. ಆದರೆ ಕೆಲವು ತಿಂಗಳ ಹಿಂದೆ, ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ದುಬೈ ಪ್ರವಾಸ ಹೋಗಿದ್ದಾಗ ಜೊತೆಯಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. ಬೆಂಗಳೂರು ಏರ್ಪೋರ್ಟ್​ನಲ್ಲಿದ್ದ ಇವರ ಫೋಟೋ ವೈರಲ್ ಆಗಿತ್ತು. ಇದಾದ ಬಳಿಕ ಸ್ವತಃ ತಾವೇ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿ ನಿಶ್ಚಿತಾರ್ಥ ಮಾಡಿಕೊಳ್ಳುವುದರೊಂದಿಗೆ ಎಲ್ಲಾ ಗಾಸಿಪ್ ಗಳಿಗೆ ತೆರೆ ಎಳೆದಿದ್ದರು. ಸದ್ಯ ಇಂದು ಇಬ್ಬರೂ ನವ ದಂಪತಿಗಳಾಗಿದ್ದಾರೆ.

ಮೈಸೂರಿನಲ್ಲಿ ವಿವಾಹವಾಗಿರುವ ಸಿಂಹಪ್ರಿಯ ಜೋಡಿಯ ಮದುವೆಗೆ ಸ್ಯಾಂಡಲ್ ವುಡ್ ಸ್ಟಾರ್ ಗಳಾದಂತಹ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಗೆಳೆಯ ಧನಂಜಯ್ ಮತ್ತು ನಟಿ ಅಮೃತ ಸೇರಿ ಹಲವಾರು ನಟ ನಟಿಯರು ಹಾಗೂ ರಾಜಕೀಯ ರಂಗದಿಂದ ಎಸ್.ಟಿ ಸೋಮಶೇಖರ್, ರಾಮ್ ದಾಸ್, ಪ್ರತಾಪ ಸಿಂಹ ಮುಂತಾದ ಗಣ್ಯರು ಬಂದು ಶುಭಕೋರಿದ್ದರು.

ಇನ್ನೂ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಇದೇ ಜನವರಿ 28ರಂದು ಸಿನಿಮಾರಂಗದ ಸ್ನೇಹಿತರಿಗೆ, ತಮ್ಮ ಬಂಧುಗಳಿಗಾಗಿ ಹಾಗೂ ಗಣ್ಯರಿಗೋಸ್ಕರ ಬೆಂಗಳೂರಿನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದಾರೆ. ಇನ್ನೂ ಈ ನವಜೋಡಿಗೆ ಅಭಿಮಾನಿಗಳು, ಸೆಲೆಬ್ರಿಟಿ ಸ್ನೇಹಿತರು ಶುಭಹಾರೈಸುತ್ತಿದ್ದಾರೆ.

Leave A Reply

Your email address will not be published.