Traffic Rules: ವಾಹನ ಸವಾರರೇ ಎಚ್ಚರ ಎಚ್ಚರ! ಇನ್ಮುಂದೆ ಇಲ್ಲೇನಾದರೂ ಬೈಕ್ ರೈಡ್ ಮಾಡಿದ್ರೆ ಫೈನ್ ಜೊತೆಗೆ ಬೀಳುತ್ತೆ ಕೇಸ್
ಸರ್ಕಾರದ ನಿಯಮಗಳ ಪಾಲನೆ ಆಗದೆ ಇರುವುದರಿಂದ ಮತ್ತು ಸಂಚಾರ ನಿಗಮದ ಅಸ್ತವ್ಯಸ್ತತೆಯಿಂದ ವಾಹನ ಸವಾರರಿಗೆ ಈ ಹೊಸ ನಿಯಮ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ದಿನನಿತ್ಯ ಟ್ರಾಫಿಕ್ ಕಿರಿ ಕಿರಿ ಇದ್ದದ್ದೇ. ಈ ಕಾರಣವಾಗಿ ಬೆಂಗಳೂರು ನಗರದ ಫುಟ್ಪಾತ್ ಮೇಲೆ ವಾಹನ ಚಲಾಯಿಸುವುದು ಸಹಜವಾಗಿದೆ. ಸದ್ಯ ಫುಟ್ಪಾತ್ ಮೇಲೆ ವಾಹನ ಚಲಾಯಿಸುವುದರಿಂದ ನೀವು ಕೋರ್ಟ್ ಕೇಸ್ ಎಂದು ಅಲೆದಾಡುವ ಪರಿಸ್ಥಿತಿ ಬರಬಹುದು.
ಹೌದು ಜನರು ಸಿಗ್ನಲ್ ಸಮಸ್ಯೆಯಿಂದ ಪಾರಾಗಲು ಫುಟ್ಪಾತ್ ಮೇಲೂ ಬೈಕ್ ಹತ್ತಿಸಿಕೊಂಡು ಹೋಗುತ್ತಾರೆ. ಆದರೆ ಇನ್ಮುಂದೆ ಆ ರೀತಿ ಫುಟ್ಪಾತ್ ಮೇಲೆ ವಾಹನ ಚಲಾಯಿಸಿದರೆ ಪೊಲೀಸರು ದಂಡದ ಜೊತೆ ಪ್ರಕರಣವನ್ನು ದಾಖಲು ಮಾಡಿ ಕೋರ್ಟ್ಗೆ ತಲುಪಿಸುತ್ತಾರೆ. ಅಲ್ಲದೇ ಪ್ರಕರಣ ದಾಖಲಿಸಿ ನಿಮ್ಮವಾಹನವನ್ನು ಸ್ಥಳದಲ್ಲೇ ಸೀಜ್ ಮಾಡಲಾಗುತ್ತಿದೆ. ಬೆಂಗಳೂರಿನ ಫುಟ್ ಪಾತ್ ಮೇಲೆ ವಾಹನ ಚಲಾಯಿಸುವುದು, ಪಾರ್ಕಿಂಗ್ ಮಾಡುವುದು ತಡೆಯಲು ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಈ ಕುರಿತಾಗಿ ಸಂಚಾರಿ ಪೋಲಿಸ್ ಇಲಾಖೆ ವಿಶೇಷ ಆಯುಕ್ತರಾದ ಡಾ ಎಂ.ಎ ಸಲೀಂ ಅವರು ಮಾಹಿತಿ ಪ್ರಕಾರ ಫುಟ್ಪಾತ್ ಮೇಲೆ ವಾಹನ ಚಲಾಯಿಸುವುದು ಬಹಳ ಅನಾಗರಿಕ ವರ್ತನೆ ಆಗಿದೆ. ಇದರಿಂದ ಪಾದಚಾರಿಗಳಿಗೆ ಬಹಳ ಸಮಸ್ಯೆ ಆಗುತ್ತದೆ. ಅಲ್ಲದೇ ಪ್ರಾಣಹಾನಿ ಆಗುವ ಸಂಭವ ಹೆಚ್ಚು. ಆದ್ದರಿಂದ ಕಠಿಣ ಕ್ರಮದ ಭಾಗವಾಗಿ ಎಫ್ಐಆರ್ ಮಾಡಿ ಕೋರ್ಟಿಗೆ ಕಳುಹಿಸುತ್ತಿದ್ದೇವೆ. ಅಲ್ಲದೇ ವಾಹನ ಸೀಜ್ ವಶಕ್ಕೆ ಪಡೆದಕೊಂಡು ಕೋರ್ಟ್ ವಶಕ್ಕೆ ನೀಡುತ್ತಿದ್ದೇವೆ. ಕೋರ್ಟಿನಿಂದಲೇ ಮಾಲೀಕರು ವಾಹನ ಬಿಡುಗಡೆ ಮಾಡಿಕೊಳ್ಳಬೇಕು ಎಂದು ಆದೇಶ ನೀಡಿದ್ದಾರೆ.
ಅದಲ್ಲದೆ ಫುಟ್ಪಾತ್ ಮೇಲೆ ವಾಹನ ನಿಲ್ಲಿಸಿದರೆ ಅಥವಾ ಚಲಾಯಿಸಿದರೆ ವಾಹನ ಸೀಝ್ ಮಾಡಿ ಸೆಕ್ಷನ್ 283 ಅಡಿಯಲ್ಲಿ FIR ದಾಖಲು ಮಾಡಲಾಗುತ್ತೆ. ಮೋಟಾರ್ ಸೈಕಲ್ ಆಕ್ಟ್ ಆಡಿ ಫೈನ್ ಹಾಕದೇ ಗಾಡಿಯನ್ನು ಸೀಝ್ ಮಾಡಲಾಗುತ್ತದೆ. ಬೇರೆ ಕೇಸ್ಗಳ ರೀತಿಯಲ್ಲೇ ಕೋರ್ಟ್ಗೆ ಹೋಗಿ ಫೈನ್ ಕಟ್ಟಬೇಕಾಗುತ್ತದೆ. ಕಳೆದ 2 ತಿಂಗಳಲ್ಲಿ 3,500 ಕೇಸ್ ದಾಖಲು ಆಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಎರಡು ತಿಂಗಳಿನಿಂದ ಈ ಮೇಲಿನ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಅನಾವಶ್ಯಕ ಚಾಲನೆ ಮತ್ತು ಫುಟ್ಪಾತ್ ಪಾದಚಾರಿಗಳ ಸುರಕ್ಷಿತ ದೃಷ್ಟಿಯಿಂದ, ಪಾದಾಚಾರಿಗಳ ಸುರಕ್ಷತೆಗೆ ಈ ಮೇಲಿನ ನಿಯಮ ಜಾರಿಗೆ ತರಲಾಗಿದೆ ಎಂದು ಸಂಬಂಧ ಪಟ್ಟ ಅಧಿಕಾರಿ ಮಾಹಿತಿ ನೀಡಿದ್ದಾರೆ.