EPFO Higher Pension : ಪಿಂಚಣಿದಾರರೇ ನಿಮ್ಮ ಕನಸು ನನಸು | ಅಧಿಕ ಪಿಂಚಣಿಗಾಗಿ ಆನ್ ಲೈನ್ ಅರ್ಜಿ ಸೇವೆ

ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಅನುಸಾರ ಕೆಲಸ ನೀಡಿರುವ ಉದ್ಯೋಗದಾತ ನಿರ್ದಿಷ್ಟ ಮೊತ್ತದ ಹಣವನ್ನು ತನ್ನ ವಂತಿಗೆಯಾಗಿ ಭರಿಸಲಾಗುತ್ತದೆ. ಉದ್ಯೋಗಿಯ ವಂತಿಗೆಗೆ ಸಮನಾದ ಮೊತ್ತದ ವಂತಿಗೆಯನ್ನು ಉದ್ಯೋಗದಾತ ಇಪಿಎಫ್ ಖಾತೆಗೆ ಸಲ್ಲಿಸಬೇಕಾಗಿದ್ದು, ಈ ಎರಡೂ ಮೊತ್ತಗಳಿಗೆ ಸರಕಾರ ತಾನು ನಿಗದಿಪಡಿಸಿದ ಬಡ್ಡಿಯನ್ನು ನೀಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇತ್ತೀಚೆಗಷ್ಟೇ ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು ಕಡ್ಡಾಯಗೊಳಿಸಿತ್ತು. ಇದೀಗ ಮತ್ತೊಂದು ಮಖ್ಯ ವಿಚಾರವನ್ನು ತಿಳಿಸಿದೆ.

ಕಳೆದ 2022ರ ನವೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಅನುಸಾರ ಇಪಿಎಫ್ ಸದಸ್ಯರಾಗಿರುವ ಉದ್ಯೋಗಿಗಳಿಗೆ ಅಧಿಕ ಪಿಂಚಣಿಯ (Higher Pension) ಸೌಲಭ್ಯದ ಅವಕಾಶ ನೀಡಲು ಇಪಿಎಫ್ಒ (EPFO) ಆನ್​ಲೈನ್ ಸೌಲಭ್ಯಕ್ಕೆ ಅನುವು ಮಾಡಿಕೊಟ್ಟಿದೆ. 2014 ಸೆಪ್ಟೆಂಬರ್ 1ರ ಮೊದಲೇ ನಿವೃತ್ತರಾಗಿರುವ ಹಾಗೂ ನಿವೃತ್ತಿಗೆ ಮುನ್ನ ಅಧಿಕ ಪಿಂಚಣಿಯನ್ನು ಆಯ್ದುಕೊಂಡಿದ್ದ ಉದ್ಯೋಗಿಗಳು ಆನ್​ಲೈನ್​​ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಇಪಿಎಫ್ಒನ ಯುಎಎನ್ ಪೋರ್ಟಲ್​​ಗೆ ಲಾಗಿನ್ ಆಗುವ ಮೂಲಕ ಈ ಪ್ರಯೋಜನ ಪಡೆಯಬಹುದು.

ಇಪಿಎಫ್ ಎಂಬುದು ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಆಗಿದ್ದು, ಅದೆ ರೀತಿ , ಇಪಿಎಸ್ ಇನ್ನುವುದು 1995ರಲ್ಲಿ ಆರಂಭಗೊಂಡ ಎಂಪ್ಲಾಯೀ ಪೆನ್ಷನ್ ಸ್ಕೀಮ್ ಆಗಿದೆ. ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಸಂಬಳದಲ್ಲಿ ನಿರ್ದಿಷ್ಟ ಪಾಲು ಇಪಿಎಫ್ ಖಾತೆಗೆ ನೇರವಾಗಿ ವರ್ಗಾವಣೆ ಯಾಗುತ್ತದೆ. ಅದೇ ರೀತಿ, ನೌಕರರ ಸಂಬಳದ ಶೇ. 8.33ರಷ್ಟು ಮೊತ್ತವನ್ನು ಕಂಪನಿಯು ಇಪಿಎಸ್ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಇಪಿಎಸ್ ಖಾತೆಯ ಹಣವನ್ನು ನೌಕರರ ನಿವೃತ್ತ ಬಳಿಕ ಪಿಂಚಣಿ ಕೊಡುವ ಸಲುವಾಗಿ ವಿನಿಯೋಗ ಮಾಡಲಾಗುತ್ತದೆ.

1995ರ ಉದ್ಯೋಗಿ ಪಿಂಚಣಿ ಯೋಜನೆಯ ನಿಯಮಾವಳಿಯ ಅನುಸಾರ ಉದ್ಯೋಗಿಯ ವೇತನ 5000/6500 ರೂ ಮೀರಬಾರದು. ಇದರ ಜೊತೆಗೆ ಹೆಚ್ಚಿನ ವೇತನ ಇರುವವರು ಹೆಚ್ಚಿನ ಪಿಂಚಣಿ ಕೊಡುಗೆಗೆ ಕಂಪನಿ ಜೊತೆ ಜಂಟಿಯಾಗಿ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿತ್ತು. 2014ರಲ್ಲಿ ಕಾನೂನು ತಿದ್ದುಪಡಿ ಮಾಡಿದ ಬಳಿಕ ಈ ಅವಕಾಶ ನಿರಾಕರಿಸಲಾಗಿದ್ದು, 2022ರಲ್ಲಿ ಸುಪ್ರೀಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಈ ತಿದ್ದುಪಡಿಯನ್ನು ಎತ್ತಿಹಿಡಿಯಿತಾದರೂ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ನಿರ್ದೇಶನ ಮಾಡಿದೆ. ಹೀಗಾಗಿ , ತಾವು ಕೆಲಸ ಮಾಡುತ್ತಿದ್ದ ಕಂಪನಿ ಜೊತೆ ಜಂಟಿಯಾಗಿ ಅರ್ಜಿ ಸಲ್ಲಿಕೆ ಮಾಡದೇ ಇರುವ ಉದ್ಯೋಗಿಗಳೂ 2023 ಮಾರ್ಚ್ 3ರವರೆಗೆ ಸಮಯ ಒದಗಿಸಬೇಕೆಂದು ಸೂಚಿಸಲಾಗಿದೆ.

ಇಪಿಎಸ್ ನಿಯಮದ ಪ್ರಕಾರ ನೌಕರರು ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ್ದರೆ ನಿವೃತ್ತಿ ನಂತರದ ಪಿಂಚಣಿಗೆ ಅರ್ಹರಾಗುತ್ತಾರೆ. ಅವರ ಸಂಬಳ ಮತ್ತು ಕಂಪನಿಯ ಕೊಡುಗೆಯ ಆಧಾರದ ಮೇಲೆ ಪಿಂಚಣಿಯನ್ನು ಲೆಕ್ಕ ಮಾಡಲಾಗುತ್ತದೆ. ಅರ್ಹ ಪಿಂಚಣಿದಾರರು ಆನ್​ಲೈನ್​​ನಲ್ಲಿ ಮಾತ್ರವಲ್ಲದೇ ಇಪಿಎಫ್ಒ ಕಚೇರಿಗೆ ಭೇಟಿ ನೀಡುವ ಮುಖಾಂತರ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಇಪಿಎಫ್ ಸ್ಕೀಮ್​ನ ಪ್ಯಾರಾ 26(6) ಅಡಿಯಲ್ಲಿ ಜಂಟಿ ಆಯ್ಕೆ ಮಾಡಿಕೊಂಡಿರುವುದನ್ನು ಕಂಪನಿಯಿಂದ ವೆರಿಫೈ ಆಗಿರುವುದೂ ಸೇರಿ ಕೆಲವಾರು ದಾಖಲೆಗಳು ಬೇಕಾಗುತ್ತವೆ.

2022ರ ಡಿಸೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಸರ್ಕಾರ ಸುತ್ತೋಲೆ ಹೊರಡಿಸಿದ್ದು ಹೀಗಾಗಿ, ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಿದವರಿಂದ ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಮತ್ತೊಮ್ಮೆ ಅನುವು ಮಾಡಿಕೊಡಲಾಗಿತ್ತು. ಆದರೆ, ಇದು 2014 ಸೆಪ್ಪೆಂಬರ್ 1ಕ್ಕೂ ಮೊದಲೇ ಕಂಪನಿಯ ಜೊತೆಗೆ ಜಂಟಿಯಾಗಿ ಅರ್ಜಿ ಸಲ್ಲಿಸಿದವರು ಹಾಗೂ ಈಗಾಗಲೆ ನಿವೃತ್ತರಾದ ಉದ್ಯೋಗಿಗಳಿಗೆ ಮಾತ್ರ ಈ ಅವಕಾಶ ಕಲ್ಪಿಸಲಾಗಿದೆ ಎಂಬುದನ್ನು ಗಮನಿಸಬೇಕು. ಜಂಟಿಯಾಗಿ ಘೋಷಣೆ ಮಾಡದ ಉದ್ಯೋಗಿಗಳಿಗೂ ಮತ್ತೊಮ್ಮೆ ಅವಕಾಶ ನೀಡಬೇಕೆಂಬ ಸುಪ್ರೀಂ ನಿರ್ದೇಶನದ ಕುರಿತಾಗಿ ಸರ್ಕಾರ ತನ್ನ ನಿರ್ಧಾರ ಬಹಿರಂಗಪಡಿಸಿಲ್ಲ.

ಇಲ್ಲಿ 2014, ಸೆಪ್ಟೆಂಬರ್ 1ಕ್ಕೆ ಮುನ್ನ ಉದ್ಯೋಗಿ ಪಿಂಚಣಿ ಯೋಜನೆಯ (EPS- Employee Pension Scheme) ಪ್ಯಾರಾ 11(3) ಅಡಿಯಲ್ಲಿ ಉದ್ಯೋಗಿಯು ತಾನು ಕೆಲಸ ಮಾಡುವ ಕಂಪನಿಯ ಜೊತೆ ಜಂಟಿಯಾಗಿ ಅಧಿಕ ಪಿಂಚಣಿಯ ಆಯ್ಕೆಯನ್ನು ಮಾಡಿಕೊಂಡಿರಬೇಕಾಗುತ್ತದೆ. ಇದಲ್ಲದೆ ಈ ಹಿಂದೆ ಅವರು ಮಾಡಿಕೊಂಡಿದ್ದ ಈ ಆಯ್ಕೆಯು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ (ಇಪಿಎಫ್ಒ) ತಿರಸ್ಕೃತಗೊಂಡಿದ್ದ ಉದ್ಯೋಗಿಗಳಿಗೆ ಮಾತ್ರ ಸದ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.

Leave A Reply

Your email address will not be published.