ಕೊತ್ತಂಬರಿ ಸೊಪ್ಪನ್ನು ಹಿಂದಿನ ಕಾಲದಲ್ಲಿ ಯಾಕೆ ಬಳಕೆ ಮಾಡ್ತಾ ಇದ್ದರು ಅನ್ನೋದು ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ!!
ತಾಜಾ ಕೊತ್ತಂಬರಿ ಸೊಪ್ಪನ್ನು ಹಲವಾರು ಬಗೆಯ ಅಡುಗೆಯ ತಯಾರಿಯಲ್ಲಿ ಬಳಸುವುದು ಸಾಮಾನ್ಯ. ಆಹಾರ ಪದಾರ್ಥಗಳಿಗೆ ರುಚಿಯನ್ನು ತುಂಬುವ ಕೊತ್ತಂಬರಿ ಸೊಪ್ಪು ಒಂದು ಪರಿಣಾಮಕಾರಿ ಗಿಡಮೂಲಿಕೆಯಾಗಿದ್ದು, ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿವೆ ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿರಬಹುದು. ಪ್ರತಿಯೊಬ್ಬರ ಮನೆಯ ರೆಫ್ರಿಜಿರೇಟರ್ ನಲ್ಲಿ ಕೊತ್ತಂಬರಿ ಸೊಪ್ಪು ತನ್ನದೇ ಆದ ಪ್ರತ್ಯೇಕ ಸ್ಥಾನವನ್ನು ಅಲಂಕರಿಸಿರುತ್ತದೆ. ಆದರೆ, ನಮ್ಮ ಅಡುಗೆ ಮನೆಯಲ್ಲಿ ಆಹಾರದ ಸ್ವಾದವನ್ನು ಹೆಚ್ಚಿಸಲು ಬಳಕೆ ಮಾಡುವ ಕೊತ್ತಂಬರಿ ಸೊಪ್ಪನ್ನು ಕಂಡು ವಿಶ್ವದ ಒಂದು ಭಾಗದಲ್ಲಿ ಜನರು ದೂರ ಸರಿಯುತ್ತಾರೆ ಎನ್ನುವ ವಿಚಾರ ನಿಮಗೆ ತಿಳಿದಿದೆಯೇ?? ಇದಷ್ಟೇ ಅಲ್ಲದೇ, ಕೊತ್ತಂಬರಿ ಸೊಪ್ಪಿನ ಬಗ್ಗೆ ನಿಮಗೆ ತಿಳಿಯದ ಅನೇಕ ಕುತೂಹಲಕಾರಿ ಮಾಹಿತಿ ನಾವು ಹೇಳ್ತೀವಿ ಕೇಳಿ!!
ಊಟಕ್ಕೆ ಉಪ್ಪಿನಕಾಯಿ ಇದ್ದಂತೆ ಹೆಚ್ಚಿನವರ ಪಾಲಿಗೆ ಅಡುಗೆಮನೆಯಲ್ಲಿ ಕೊತ್ತಂಬರಿ ಸೊಪ್ಪು ಇಲ್ಲದಿದ್ದರೆ ಅಡುಗೆಯೆ ಸಪ್ಪೆ ಎನ್ನುವ ಅಭಿಪ್ರಾಯವಿದೆ. ಆದರೆ, ವಿಶ್ವದ ಒಂದು ಭಾಗದ ಜನರು ಕೊತ್ತಂಬರಿ ಸೊಪ್ಪನ್ನು ದ್ವೇಷಿಸುತ್ತಾರೆ ಎಂದು ಕೇಳಿದಾಗ ಅಚ್ಚರಿಯಾಗೋದು ನಿಶ್ಚಿತ. ಮತ್ತೊಂದು ವಿಶೇಷ ಏನಪ್ಪಾ ಅಂದರೆ ಆ ಜನರು ಫೆಬ್ರವರಿ 24 ಅನ್ನು ಕೊತ್ತಂಬರಿ ದ್ವೇಷಿಗಳ ದಿನವನ್ನಾಗಿ ಕೂಡ ಆಚರಣೆ ಮಾಡುತ್ತಾರೆ. ಅದೇ ರೀತಿ ಕೊತ್ತಂಬರಿ ಸೊಪ್ಪಿನ ಹೆಸರು ಕೂಡ ಬಳುವಳಿಯಾಗಿ ಬಂದುಬಿಟ್ಟಿದೆ.
ಕೊತ್ತಂಬರಿ ಸೊಪ್ಪನ್ನು ಅಡುಗೆಮನೆಯಲ್ಲಿ ಶತಮಾನಗಳಿಂದಲು ಬಳಕೆ ಮಾಡಲಾಗುತ್ತಿದೆ. ಬೈಬಲ್ನಲ್ಲಿ ಕೂಡ ಈ ಕುರಿತಾಗಿ ಉಲ್ಲೇಖವಿದೆ ಎನ್ನಲಾಗಿದೆ. ಇದಲ್ಲದೆ, ಇದರ ಬೀಜಗಳ ಪುರಾವೆಗಳು ಸುಮಾರು 5000 BC ಯಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ. ಕೊತ್ತಂಬರಿ ಹೆಸರು ಗ್ರೀಕ್ ಪದ ಕೊರೊಸ್ ನಿಂದ ಬಂದಿದೆ, ಇದರರ್ಥ ಗಬ್ಬು ಹುಳು. 15-16 ನೇ ಶತಮಾನದಲ್ಲಿ, ಲೈಂಗಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲೆಗಳನ್ನು ಬಳಸಲಾಗುತ್ತಿತ್ತು ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.
ಆಹಾರ ಪದಾರ್ಥಗಳ ರುಚಿ ಹೆಚ್ಚಿಸುವ ನಿಟ್ಟಿನಲ್ಲಿ ನಾವು ತರಕಾರಿ, ಅವಲಕ್ಕಿ ಹಾಗೂ ಉಪ್ಪಿಟ್ಟಿನಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸೋದು ಕಾಮನ್. ಆದರೆ ಈ ಸೊಪ್ಪಿನ ಇತಿಹಾಸದಲ್ಲಿ ಅಪಾರ ರೋಚಕ ಸಂಗತಿಗಳು ಅಡಕವಾಗಿವೆ. ಈ ಹೆಸರು ಕೊರೊಸ್ ಎಂಬ ಗ್ರೀಕ್ ಪದದಿಂದ ಬಂದಿದ್ದು, ಇದರ ಅರ್ಥ ಬೆಡ್ಬಗ್ ಅಥವಾ ಸ್ಟಿಂಕ್ ಬಗ್ ಎನ್ನಲಾಗಿದೆ. ಅನೇಕ ಸ್ಥಳಗಳಲ್ಲಿ ಇದನ್ನು ಗಬ್ಬು ನಾರುವ ಮೂಲಿಕೆ ಎನ್ನಲಾಗುತ್ತದೆ.
ಕೊತ್ತಂಬರಿ ಸೊಪ್ಪನ್ನು ಹಿಂದಿನ ಕಾಲದಲ್ಲಿ ನಾನಾ ರೀತಿಯಲ್ಲಿ ಉಪಯೋಗ ಮಾಡಲಾಗುತ್ತಿತ್ತು. ಹಿಂದಿನ ಕಾಲದಲ್ಲಿ ಇದನ್ನು ತರಕಾರಿಗಳಲ್ಲಿ ಮಸಾಲೆಯಾಗಿ ಅಥವಾ ಸಾರುಗಳಲ್ಲಿ ಅಲಂಕಾರ ಮಾಡಲು ಬಳಕೆ ಮಾಡಲಾಗುತ್ತಿತ್ತು. ಇದರ ಜೊತೆಗೆ ಕೊತ್ತಂಬರಿ ಸೊಪ್ಪನ್ನು ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಗಿಡಮೂಲಿಕೆಯಾಗಿಯೂ ಬಳಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. 15 ನೇ-16 ನೇ ಶತಮಾನದ ನಡುವೆ, ಯುರೋಪ್ನಲ್ಲಿ, ಕೊತ್ತಂಬರಿ ಎಲೆಗಳನ್ನು ವೈನ್ ನೊಂದಿಗೆ ಚಿಮುಕಿಸಲಾಗುತ್ತಿತ್ತು ಎನ್ನಲಾಗುತ್ತದೆ. ಇದರಿಂದ ಲೈಂಗಿಕ ಸಂಬಂಧಗಳ ಬಯಕೆಯು ಜಾಗೃತವಾಗುತ್ತದೆ ಎಂಬುದು ಆಗಿನವರ ನಂಬಿಕೆಯಾಗಿತ್ತು. ಹೀಗಾಗಿ, ಕೊತ್ತಂಬರಿ ಸೊಪ್ಪನ್ನು ಕಾಮೋತ್ತೇಜಕ ಆಹಾರದ ವರ್ಗಕ್ಕೆ ಸೇರಿಸಲಾಗಿದೆ.
ಆಸ್ಟ್ರೇಲಿಯಾದ ಹೆಚ್ಚಿನ ಜನರು ಕೊತ್ತಂಬರಿ ಸೊಪ್ಪಿನ ವಾಸನೆ ಮೂಗಿಗೆ ಬಡಿದರೆ ಸಾಕು ಮಾರು ದೂರ ಹೋಗುತ್ತಾರೆ. ಕೊತ್ತಂಬರಿ ಸೊಪ್ಪು ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ದ್ವೇಷಿಸಲ್ಪಡುವ ತರಕಾರಿಯಾಗಿ ಗುರುತಿಸಿಕೊಂಡಿದೆ. ಹೀಗಾಗಿ, ಐ ಹೇಟ್ ಕೋರಿಎಂಡರ್ ಡೇ ಅನ್ನು 14 ವರ್ಷಗಳ ಹಿಂದೆ ಪ್ರಾರಂಭ ಮಾಡಲಾಗಿದೆ. ಅಲ್ಲದೆ, ಕೊತ್ತಂಬರಿ ಸೊಪ್ಪಿನ ವಾಸನೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಜನರು ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಾರೆ ಎನ್ನಲಾಗಿದೆ.