ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗೆ ಬಿತ್ತು ಭಾರೀ ದಂಡ | ಕಾರಣವೇನು ಗೊತ್ತೇ?

ವಿಶ್ವದ ಪ್ರಖ್ಯಾತ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಕಂಪನಿ ಫೌಂಡರ್ಸ್‌ನಲ್ಲಿ ಮುಖ್ಯರಾದ ನಾರಾಯಣ ಮೂರ್ತಿ ಅವರ ಅಳಿಯನಾದ ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್ ಭಾರತೀಯ ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಅಲ್ಲದೆ, ಯಕೆ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ತಮ್ಮ ನಡವಳಿಕೆಯಿಂದ ಹೆಚ್ಚು ಗಮನ ಸೆಳೆಯುತ್ತಾರೆ. ಇವರ ಕುರಿತಾದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಇದೀಗ ರಿಷಿ ಸುನಕ್ ಅವರಿಂದ ರೂಲ್ಸ್ ಬ್ರೇಕ್ ಆದ ಹಿನ್ನೆಲೆ ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

ನಮ್ಮಲ್ಲಿ ರೂಲ್ಸ್ ಬ್ರೇಕ್ ಮಾಡಿದರೆ ಹೇ!!! ಅದೇನು ಮಹಾ ವಿಚಾರ ಎಂದು ಗಣ್ಯ ವ್ಯಕ್ತಿಗಳು ಆಗಿದ್ದಲ್ಲಿ ಅಲ್ಲಿಗೆ ಕೇಸ್ ಅನ್ನು ಮುಚ್ಚಿ ಹಾಕುವವರೇ ಹೆಚ್ಚು. ಆದರೆ ವಿದೇಶದಲ್ಲಿ ರೂಲ್ಸ್ ಬ್ರೇಕ್ ಮಾಡಿದರೆ ಶಿಕ್ಷೆ ಫಿಕ್ಸ್ ಅನ್ನೋದು ಗೊತ್ತಿರುವ ವಿಷಯವೇ!! ಇದೀಗ, ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Britain PM Rishi Sunak) ಅವರಿಗೆ ಪೊಲೀಸರು ದಂಡ ವಿಧಿಸಿರುವ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ (Social Media Video) ಮಾಡುತ್ತಿರುವ ಸಂದರ್ಭ ಚಲಿಸುತ್ತಿದ್ದ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ರಿಷಿ ಸುನಕ್ ಸೀಟ್ ಬೆಲ್ಟ್ ಹಾಕಿರಲಿಲ್ಲ ಎಂದು ತಿಳಿದು ಬಂದಿದೆ.ತಮ್ಮ ತಪ್ಪಿಗೆ ಕ್ಷಮೆ ಕೇಳಿದರೂ ಕೂಡ ಲಂಕಾಶೈರ್ ಪೊಲೀಸರು ದಂಡ ವಿಧಿಸಿದ್ದಾರೆ.

ವಾಯುವ್ಯ ಇಂಗ್ಲೆಂಡಿನಲ್ಲಿ ವಾಹನ ಚಾಲನೆ ಮಾಡುವ ವೇಳೆ ವಿಡಿಯೋ ಚಿತ್ರೀಕರಣಕ್ಕಾಗಿ ರಿಷಿ ಸುನಕ್ ಅವರು ಸೀಟ್ ಬೆಲ್ಟ್ ತೆಗೆದಿರುವುದಾಗಿ ಸುನಕ್ ಹೇಳಿಕೊಂಡಿದ್ದು, ಈ ವಿಚಾರವಾಗಿ ಕ್ಷಮೆಯನ್ನೂ ಯಾಚಿಸಿದ್ದಾರೆ ಎನ್ನಲಾಗಿದೆ. ಗುರುವಾರ ನಡೆದ ಬೆಳವಣಿಗೆಯ ಬಳಿಕ ಲಂಕಾಶೈರ್ ಪೊಲೀಸರಿಗೆ ಮಾಹಿತಿ ತಿಳಿದುಬಂದಿದೆ ಎಂದು ಲಂಕಾಶೈರ್ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ರಿಷಿ ತಪ್ಪಿತಸ್ಥರೆಂದು ಎಂದು ಪೊಲೀಸರು ಖಾತರಿ ಪಡಿಸಿದರೆ ಅವರಿಗೆ 100 ಬ್ರಿಟಿಷ್ ಪೌಂಡ್ ದಂಡ ವಿಧಿಸಬಹುದು ಎನ್ನಲಾಗಿದೆ.

ಸುನಕ್‌ನ ಡೌನಿಂಗ್ ಸ್ಟ್ರೀಟ್ ವಕ್ತಾರರು ಗುರುವಾರ ಮಾತನಾಡಿ ಅವರು ತಮ್ಮ ಸೀಟ್‌ಬೆಲ್ಟ್ ಅನ್ನು ತಾತ್ಕಾಲಿಕವಾಗಿ ಬಿಚ್ಚಿಟ್ಟಿದ್ದಾರೆ ಮತ್ತು ಅವರು ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸೀಟ್‌ಬೆಲ್ಟ್ (Seat Belt) ಧರಿಸದಿದ್ದ ಹಿನ್ನಲೆ ನಿಗದಿತ ದಂಡದ ಅನುಸಾರ ಷರತ್ತುಬದ್ಧ ಪ್ರಸ್ತಾಪದೊಂದಿಗೆ 42 ವರ್ಷದ ಲಂಡನ್ ವ್ಯಕ್ತಿಗೆ ನೋಟಿಸ್ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. ಬ್ರಿಟನ್‌ನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದರೆ 100 ಪೌಂಡ್‌ಗಳ ದಂಡವನ್ನು ವಿಧಿಸಲಾಗುತ್ತದೆ. ಆದರೆ ಈ ವಿಚಾರವು ನ್ಯಾಯಾಲಯಕ್ಕೆ ಹೋದಲ್ಲಿ ಈ ದಂಡವು £ 500 ಕ್ಕೆ ಏರುವ ಸಾಧ್ಯತೆಗಳಿವೆ. ಇದರ ಜೊತೆಗೆ ಮಾನ್ಯ ವೈದ್ಯಕೀಯ ಕಾರಣಗಳಿಗಾಗಿ ಸೀಟ್ ಬೆಲ್ಟ್‌ಗಳಿಗೆ ವಿನಾಯಿತಿ ನೀಡುವ ಸಂದರ್ಭ ಕೂಡ ಇದೆ ಎನ್ನಲಾಗಿದೆ.

ದೇಶದಾದ್ಯಂತ 100 ಕ್ಕೂ ಹೆಚ್ಚು ಯೋಜನೆಗಳಿಗೆ ಧನಸಹಾಯ ಮಾಡಲು ‘ಲೆವೆಲಿಂಗ್ ಅಪ್ ಫಂಡ್’ ಅನ್ನು ಘೋಷಿಸಲು ಸುನಕ್ ಈ ವಿಡಿಯೋವನ್ನು ಮಾಡುತ್ತಿದ್ದರುಎನ್ನಲಾಗಿದೆ. ವಿಡಿಯೋದಲ್ಲಿ, ಮೋಟಾರು ಸೈಕಲ್‌ಗಳಲ್ಲಿ ಬಂದ ಪೊಲೀಸ್ ಸಿಬ್ಬಂದಿ ಅವರ ಕಾರನ್ನು ಸುತ್ತುವರೆದು ಪ್ರಶ್ನೆಗಳ ಸುರಿಮಳೆ ಗೈಯುವುದು ಕಂಡುಬರುತ್ತಿದೆ. ಈ ವಿಚಾರದ ಕುರಿತಾಗಿ ಸುನಕ್ ಅವರ ವಕ್ತಾರರು ಸ್ಪಷ್ಟನೆ ನೀಡಿದ್ದು “ಸುನಕ್ ಅವರಿಂದ ಸಣ್ಣ ಲೋಪವಾಗಿದ್ದು, ಸಣ್ಣ ವಿಡಿಯೋ ಮಾಡಲು ಪ್ರಧಾನ ಮಂತ್ರಿ ಅವರು ತಮ್ಮ ಸೀಟ್ ಬೆಲ್ಟ್ ಅನ್ನು ತೆಗೆದುಹಾಕಿದ್ದಾರೆ. ಅವರು ತಮ್ಮ ತಪ್ಪನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಕ್ಷಮೆಯಾಚಿಸುತ್ತಾರೆ.” ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಧರಿಸಬೇಕು ಎಂದು ಪ್ರಧಾನಿ ಮನವಿಯಾಗಿದೆ ಎಂದು ವಕ್ತಾರರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.