ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರಿಗೆ ಗುಡ್ ನ್ಯೂಸ್
ಇತ್ತೀಚೆಗಷ್ಟೇ ಖಾಸಗಿ ವಲಯದ ಬ್ಯಾಂಕ್ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಳ ಮಾಡಲಾಗಿದೆ. ಇದರಿಂದ ಖಾತೆದಾರರಿಗೆ ಅನುಕೂಲವಾಗಲಿದೆ. ಈ ಖಾಸಗಿ ವಲಯದ ಬ್ಯಾಂಕ್ನಲ್ಲಿ ನೀವು ಖಾತೆಯನ್ನು ಹೊಂದಿದ್ದೀರಾ? ಹಾಗಿದ್ದರೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಏಕೆಂದರೆ ಈ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಹೌದು, ಖಾಸಗಿ ವಲಯದ ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾಗಿರುವ ಆರ್ಬಿಎಲ್ ಬ್ಯಾಂಕ್ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಇದರಿಂದ ಬ್ಯಾಂಕ್ ಗ್ರಾಹಕರಿಗೆ ನೆಮ್ಮದಿ ಸಿಗಲಿದೆ ಎನ್ನಬಹುದು.
ಬ್ಯಾಂಕ್ನ ವೆಬ್ಸೈಟ್ ಪ್ರಕಾರ, ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ನಿರ್ಧಾರವು ಜನವರಿ 25 ರಿಂದ ಜಾರಿಗೆ ಬರಲಿದೆ. ಬ್ಯಾಂಕ್ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು 125 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಳಮಾಡಲಾಗಿದೆ. ಇದರೊಂದಿಗೆ, ಬ್ಯಾಂಕ್ ಪ್ರಸ್ತುತ ತನ್ನ ಗ್ರಾಹಕರಿಗೆ ಗರಿಷ್ಠ 6.5 ಶೇಕಡಾ ಬಡ್ಡಿಯನ್ನು ನೀಡುತ್ತಿದೆ.
ದೈನಂದಿನ ಬಾಕಿಯ ಮೇಲೆ 4.25 ಪ್ರತಿಶತದಷ್ಟು ಬಡ್ಡಿ ಬೀಳುತ್ತದೆ. 1 ಲಕ್ಷದಿಂದ 10 ಲಕ್ಷದವರೆಗೆ ಉಳಿತಾಯ ಖಾತೆಯಲ್ಲಿದ್ದರೆ, ಅವರಿಗೆ ಶೇಕಡಾ 5.5 ಬಡ್ಡಿ ದರ ಸಿಗುತ್ತದೆ. ಅಲ್ಲದೆ 10 ಲಕ್ಷ ದಿಂದ 25 ಲಕ್ಷದವರೆಗೆ ಬಾಕಿ ಇದ್ದರೆ, ಆ ಖಾತೆಗಳ ಬಡ್ಡಿ ದರವು 6 ಪ್ರತಿಶತ ಬಡ್ಡಿಯಾಗಿರುತ್ತದೆ.
ಅಲ್ಲದೆ ರೂ. 25 ಲಕ್ಷದಿಂದ 7.5 ಕೋಟಿ ರೂಪಾಯಿವರೆಗಿನ ದೈನಂದಿನ ಬ್ಯಾಲೆನ್ಸ್ ಹೊಂದಿರುವ ಖಾತೆಗಳ ಮೇಲಿನ ಬಡ್ಡಿ ದರವು ಶೇ.6.5 ಆಗಿದೆ. ಇದರರ್ಥ ಬ್ಯಾಂಕ್ ಈ ಖಾತೆಗಳಿಗೆ ಗರಿಷ್ಠ ಬಡ್ಡಿ ದರವನ್ನು ನೀಡುತ್ತಿದೆ. ಆದಾಗ್ಯೂ, 50 ಕೋಟಿಯವರೆಗಿನ ಬ್ಯಾಲೆನ್ಸ್ ಹೊಂದಿರುವ ಖಾತೆಗಳ ಮೇಲಿನ ಬಡ್ಡಿ ದರವು ಶೇಕಡಾ 6.25 ಆಗಿದೆ. 50 ಕೋಟಿಯಿಂದ 100 ಕೋಟಿ ರೂ.ವರೆಗಿನ ದೈನಂದಿನ ಬ್ಯಾಲೆನ್ಸ್ ಹೊಂದಿರುವ ಉಳಿತಾಯ ಖಾತೆಗಳ ಮೇಲೆ ಶೇ.5.25 ಪ್ರತಿಶತ ಬಡ್ಡಿಯಾಗಿರುತ್ತದೆ.
100 ಕೋಟಿಯಿಂದ 200 ಕೋಟಿ ರೂಪಾಯಿ ವರೆಗಿನ ದೈನಂದಿನ ಬ್ಯಾಲೆನ್ಸ್ ಹೊಂದಿರುವ ಖಾತೆಗಳ ಮೇಲಿನ ಬಡ್ಡಿ ದರವು ಶೇಕಡಾ 6 ರಷ್ಟು ಆಗಿದೆ. 200 ಕೋಟಿಯಿಂದ 400 ಕೋಟಿಯವರೆಗಿನ ಬಾಕಿ ಇರುವ ಖಾತೆಗಳಿಗೆ ಬಡ್ಡಿ ದರವು 4 ಪ್ರತಿಶತದಷ್ಟು ಲಭ್ಯವಿದೆ.
ದಿನನಿತ್ಯದ ಬ್ಯಾಲೆನ್ಸ್ 500 ಕೋಟಿ ವರೆಗೆ ಇದ್ದರೆ, ಆ ಖಾತೆಗಳ ಮೇಲಿನ ಬಡ್ಡಿ ದರವು 4 ಪ್ರತಿಶತದಿಂದ 5.25 ಕ್ಕೆ ಏರಿದೆ. ಅಲ್ಲದೆ ಬ್ಯಾಲೆನ್ಸ್ 500 ಕೋಟಿಗಿಂತ ಹೆಚ್ಚಿದ್ದರೆ ಆ ಖಾತೆಗಳ ಮೇಲಿನ ಬಡ್ಡಿ ದರ ಶೇ.4.5ರಿಂದ ಶೇ.5.25ಕ್ಕೆ ಏರಿಕೆಯಾಗಿದೆ. ಇಲ್ಲದಿದ್ದರೆ, ಬ್ಯಾಂಕ್ ಖಾತೆಯಲ್ಲಿನ ಬಾಕಿಯ ದೈನಂದಿನ ಲೆಕ್ಕಾಚಾರದಿಂದ ಬಡ್ಡಿ ಮೊತ್ತವನ್ನು ನಿರ್ಧರಿಸಲಾಗುತ್ತದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಮೊತ್ತವನ್ನು ಪಾವತಿಸಲಾಗುತ್ತದೆ. ಜೂನ್ 30, ಸೆಪ್ಟೆಂಬರ್ 30, ಡಿಸೆಂಬರ್ 31 ಮತ್ತು ಮಾರ್ಚ್ 31 ರಂದು ಬಡ್ಡಿ ಸೇರುತ್ತದೆ. ಈ ಮಧ್ಯೆ, ಆರ್ಬಿಐನ ರೆಪೊ ದರ ಹೆಚ್ಚಳದ ಹಿನ್ನೆಲೆಯಲ್ಲಿ, ಅನೇಕ ಬ್ಯಾಂಕ್ಗಳು ಈಗಾಗಲೇ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿವೆ.