ಸರ್ಕಾರಿ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ!
ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಈಗಿಲ್ಲ. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಸೇರಿದಂತೆ ಹಲವು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸಿಹಿ ಸುದ್ದಿಯಿದೆ. ನೀವು ಈ ಯಾವುದೇ ಸರ್ಕಾರಿ ಬ್ಯಾಂಕ್‌ಗಳಲ್ಲಿ ಖಾತೆಯನ್ನು ಹೊಂದಿದ್ದರೆ, ಈ ಪ್ರಮುಖ ವಿಷಯದ ಬಗ್ಗೆ ತಿಳಿದಿರುವುದು ಅವಶ್ಯಕ. SBI, PNB, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾದ ಠೇವಣಿ ರೇಟಿಂಗ್‌ಗಳ ಬಗ್ಗೆ ಮಹತ್ವದ ಮಾಹಿತಿ ಬಹಿರಂಗವಾಗಿದೆ.ಮೂಡೀಸ್ ಬ್ಯಾಂಕ್ ಠೇವಣಿ ರೇಟಿಂಗ್ ತನ್ನ ವಿದೇಶಿ ಮತ್ತು ದೇಶೀಯ ಕರೆನ್ಸಿ ಠೇವಣಿ ಜವಾಬ್ದಾರಿಗಳನ್ನು ಸಮಯಕ್ಕೆ ಪೂರೈಸುವ ಬ್ಯಾಂಕಿನ ಸಾಮರ್ಥ್ಯವನ್ನೂ ಪ್ರದರ್ಶಿಸುತ್ತದೆ. ಚಿಲ್ಲರೆ ಸಾಲಗಳು ಉತ್ತಮವಾಗಿ ಕಾರ್ಯನಿರ್ವಹಿಸುವ ಜೊತೆಗೆ ಕಂಪನಿಗಳ ಆರ್ಥಿಕ ಬೆಳವಣಿಗೆ ಸುಧಾರಿಸುವುದರೊಂದಿಗೆ ಭಾರತದಲ್ಲಿ ಕ್ರೆಡಿಟ್ ಪರಿಸ್ಥಿತಿಗಳು ಕ್ರಮೇಣ ಸುಧಾರಿಸುವ ಬಗ್ಗೆ ಮೂಡೀಸ್ ಮಾಹಿತಿ ನೀಡಿದೆ. ಆದರು ಕೂಡ, ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಬ್ಯಾಂಕ್‌ಗಳ ಆಸ್ತಿ ಗುಣಮಟ್ಟಕ್ಕೆ ಅಪಾಯ ಉಂಟು ಮಾಡುವುದನ್ನು ಅಲ್ಲಗಳೆಯುವಂತಿಲ್ಲ ಎಂದು ಅಂದಾಜಿಸಲಾಗಿದೆ.
ಎಸ್‌ಬಿಐ ರೇಟಿಂಗ್ ಎಷ್ಟು ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡದಿರದು. ಇದಕ್ಕೆ ಉತ್ತರ ನಾವು ಹೇಳ್ತೀವಿ ಕೇಳಿ!!!ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ದೀರ್ಘಾವಧಿಯ ರೇಟಿಂಗ್‌ಗಳು ಸ್ಥಿರವಾಗಿರಲಿದೆ ಎಂದು ಮಾಹಿತಿ ನೀಡಿದೆ. ಮೂಡೀಸ್ SBI ಯ ದೀರ್ಘಾವಧಿಯ ಸ್ಥಳೀಯ ಮತ್ತು ವಿದೇಶಿ ಕರೆನ್ಸಿ ಬ್ಯಾಂಕ್ ಠೇವಣಿ ರೇಟಿಂಗ್‌ಗಳನ್ನು Baa3 ನಲ್ಲಿ ಉಳಿಸಿಕೊಂಡಿದ್ದು ಆದರೆ ಇತರ ಮೂರು PSB ಗಳು ತಮ್ಮ ದೀರ್ಘಾವಧಿಯ ಠೇವಣಿ ರೇಟಿಂಗ್‌ಗಳನ್ನು ಬದಲಾಯಿಸಿದೆ.
ಹಾಗಾದ್ರೆ, ಕೆನರಾ ಮತ್ತು PNB ರೇಟಿಂಗ್ ಎಷ್ಟಿದೆ??SBI ಯ ದೀರ್ಘಾವಧಿ ಠೇವಣಿ ರೇಟಿಂಗ್ ಅನ್ನು BAA3 ನಲ್ಲಿ ಉಳಿಸಿಕೊಳ್ಳುವುದು ಮತ್ತು ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್ ಮತ್ತು PNB ಗಳ ದೀರ್ಘಾವಧಿಯ ಠೇವಣಿ ರೇಟಿಂಗ್ ಅನ್ನು BAA1 ನಿಂದ BAA3 ಗೆ ಅಪ್‌ಗ್ರೇಡ್ ಮಾಡಿರುವುದರಿಂದ ಭಾರತದ ಸ್ಥೂಲ ಆರ್ಥಿಕ ದೃಷ್ಟಿಕೋನದಲ್ಲಿನ ಸುಧಾರಣೆಯನ್ನು ಕಾಣಲು ಸಾಧ್ಯವಾಗುತ್ತದೆ. ಇದು ಅಗತ್ಯದ ಸಮಯದಲ್ಲಿ ಬ್ಯಾಂಕುಗಳಿಗೆ ಹೆಚ್ಚಿನ ಮಟ್ಟದ ಸರ್ಕಾರದ ಬೆಂಬಲದ ಗ್ರಹಿಕೆಯನ್ನು ಪ್ರತಿಬಿಂಬಿಸುತ್ತದೆ.
ರೇಟಿಂಗ್ ಏಜೆನ್ಸಿಯ ನಿರೀಕ್ಷೆಯನ್ನು ಗಮನಿಸಿದರೆ, ಅನುಕೂಲಕರ ಕಾರ್ಯಾಚರಣಾ ವಾತಾವರಣದ ಜೊತೆಗೆ ಕಂಪನಿಗಳ ಬ್ಯಾಲೆನ್ಸ್ ಶೀಟ್‌ಗಳನ್ನು ಸುಧಾರಣೆ ಮಾಡುವ ಮುಖಾಂತರ ಮುಂದಿನ ಒಂದೂವರೆ ವರ್ಷಗಳಲ್ಲಿ ಬ್ಯಾಂಕ್‌ಗಳ ಆಸ್ತಿ ಗುಣಮಟ್ಟವು ಉತ್ತಮವಾಗಿ ಉಳಿಯುತ್ತದೆ ಎಂದು ರೇಟಿಂಗ್ ಏಜೆನ್ಸಿ ನಿರೀಕ್ಷಿಸುತ್ತದೆ. ಏರುತ್ತಿರುವ ದರಗಳು ಮತ್ತು ಜಾಗತಿಕ ಆರ್ಥಿಕ ಹಿಂಜರಿತದಿಂದ ಭಾರತದ ಆರ್ಥಿಕ ಏಳಿಗೆಯ ಮೇಲೆ ಪ್ರಭಾವ ಬೀರುವುದರಲ್ಲಿ ಸಂಶಯವಿಲ್ಲ. ಆದರೆ ಭಾರತದ ಆರ್ಥಿಕತೆಯು ಇತರ ಉದಯೋನ್ಮುಖ ಮಾರುಕಟ್ಟೆಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮೂಡೀಸ್ ತಿಳಿಸಿದ್ದು ಈ ಅಂಶಗಳ ಜೊತೆಗೆ ಬ್ಯಾಂಕ್‌ಗಳಿಗೆ ಕಾರ್ಯಾಚರಣಾ ವಾತಾವರಣ ಪೂರಕವಾಗಿ ನೆರವಾಗುತ್ತದೆ ಎಂದು ತಿಳಿಸಿದೆ.