Lecturer Jobs: ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಸರ್ಕಾರಿ ಉಪಕರಣ ಕೊಠಡಿ ಮತ್ತು ತರಬೇತಿ ಕೇಂದ್ರ (Government Tool Room & Training Centre-GTTC) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಜನವರಿ 18, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​/ ಪೋಸ್ಟ್(Post)​ ಮುಖಾಂತರ ಅರ್ಜಿ ಹಾಕಬೇಕು.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 31/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 18, 2023

ಹುದ್ದೆಗಳ ವಿವರ : ಉಪನ್ಯಾಸಕ- 12, ಇನ್​ಸ್ಟ್ರಕ್ಟರ್ (B.E)- 4, ಇನ್​​ಸ್ಟ್ರಕ್ಟರ್​​ (ಡಿಪ್ಲೋಮಾ)- 16, ಟೆಕ್ನಿಷಿಯನ್-8, ಲೈಬ್ರರಿಯನ್- 2

ವಿದ್ಯಾರ್ಹತೆ : ಉಪನ್ಯಾಸಕ- ಮೆಕಾಟ್ರಾನಿಕ್ಸ್/ಮೆಕ್ಯಾನಿಕಲ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ
ಇನ್​ಸ್ಟ್ರಕ್ಟರ್ (B.E)- ಮೆಕ್ಯಾನಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
ಇನ್​​ಸ್ಟ್ರಕ್ಟರ್​​ (ಡಿಪ್ಲೋಮಾ)- ಟೂಲ್ ಅಂಡ್ ಡೈ ಮೇಕಿಂಗ್/ಮೆಕಾಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ
ಟೆಕ್ನಿಷಿಯನ್-ಮಿಲ್ ರೈಟ್​ ಮೆಕ್ಯಾನಿಕ್/ ಎಲೆಕ್ಟ್ರಿಷಿಯನ್/ ಮೆಷಿನಿಸ್ಟ್/ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ನಲ್ಲಿ ಐಟಿಐ
ಲೈಬ್ರರಿಯನ್- B.Lib.Sc

ವಯೋಮಿತಿ: ಸರ್ಕಾರಿ ಉಪಕರಣ ಕೊಠಡಿ ಮತ್ತು ತರಬೇತಿ ಕೇಂದ್ರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 31, 2022ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ: ಉಪನ್ಯಾಸಕ- ತಿಂಗಳಿಗೆ 25,000 ರೂ.
ಇನ್​ಸ್ಟ್ರಕ್ಟರ್ (B.E)- ತಿಂಗಳಿಗೆ 22,000 ರೂ.
ಇನ್​​ಸ್ಟ್ರಕ್ಟರ್​​ (ಡಿಪ್ಲೋಮಾ)- ತಿಂಗಳಿಗೆ 20,000 ರೂ.
ಟೆಕ್ನಿಷಿಯನ್-ತಿಂಗಳಿಗೆ 18,000 ರೂ.
ಲೈಬ್ರರಿಯನ್- ತಿಂಗಳಿಗೆ 22,000 ರೂ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಟ್ರೇಡ್‌ ಟೆಸ್ಟ್‌, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ವ್ಯವಸ್ಥಾಪಕ ನಿರ್ದೇಶಕರು
ಸರ್ಕಾರಿ ಉಪಕರಣ ಕೊಠಡಿ ಮತ್ತು ತರಬೇತಿ ಕೇಂದ್ರ
ರಾಜಾಜಿನಗರ
ಕೈಗಾರಿಕಾ ಪ್ರದೇಶ
ಬೆಂಗಳೂರು-560010

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 080-23384303, 080-23385386 ಗೆ ಕರೆ ಮಾಡಬಹುದು.

Leave A Reply

Your email address will not be published.