ನೌಕರರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗವಕಾಶ : ಜ.13ಕ್ಕೆ ನೇರ ಸಂದರ್ಶನ

ESIC Karnataka Recruitment 2023: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ(Employees State Insurance Corporation Karnataka) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನಲ್ಲಿ (Bengaluru) ಪೋಸ್ಟಿಂಗ್‌ ಇರುತ್ತದೆ. ಇದೇ ಜನವರಿ 13, 2023 ರಂದು ಸಂದರ್ಶನ(Interview) ನಡೆಯಲಿದೆ, ಆಸಕ್ತರು ಭಾಗವಹಿಸಬಹುದು.

 

ಸಂಸ್ಥೆ : ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ
ಹುದ್ದೆ : ಸೀನಿಯರ್ ರೆಸಿಡೆಂಟ್
ಒಟ್ಟು ಹುದ್ದೆ : 3
ವೇತನ : ನಿಯಮಾನುಸಾರ
ಉದ್ಯೋಗದ ಸ್ಥಳ : ಬೆಂಗಳೂರು

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 07/01/2023
ಸಂದರ್ಶನ ನಡೆಯುವ ದಿನ: ಜನವರಿ 13, 2023

ವಿದ್ಯಾರ್ಹತೆ : ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಬಿಬಿಎಸ್, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಜನವರಿ13, 2023ಕ್ಕೆ ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಜನವರಿ 13, 2023 ರಂದು ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು.

ಸಂದರ್ಶನ ನಡೆಯುವ ಸ್ಥಳ: ESIC ಆಸ್ಪತ್ರೆ, ಪೀಣ್ಯ, 55-1-11, ಪ್ಲಾಟ್ ನಂ-1, 5ನೇ ಮುಖ್ಯ ರಸ್ತೆ, ಸರ್ವೆ ಎನ್-11, ಯಶವಂತಪುರ, ಬೆಂಗಳೂರು-22

Leave A Reply

Your email address will not be published.