ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಹುದ್ದೆ | ಆಸಕ್ತರು ಅರ್ಜಿ ಸಲ್ಲಿಸಿ, ಮಾಸಿಕ ವೇತನ ರೂ.50ಸಾವಿರ

KEA Recruitment 2023: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(Karnataka Examinations Authority) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಇದು ಕರ್ನಾಟಕ ಸರಕಾರದ ಉದ್ಯೋಗವಾಗಿದ್ದು ಬೆಂಗಳೂರಿನಲ್ಲಿ ವೃತ್ತಿ ಮಾಡಲು ಬಯಸುವವರಿಗೆ ಒಳ್ಳೆಯ ಅವಕಾಶ ಎಂದೇ ಹೇಳಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 14, 2023 ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಕೂಡಲೇ ಇ-ಮೇಲ್ ಮಾಡಬಹುದು.

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 05/01/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: 14/01/2023
ಪ್ರಾಯೋಗಿಕ ಪರೀಕ್ಷೆ ನಡೆಯುವ ದಿನಾಂಕ: ಜನವರಿ 17, 2023

ಸಂಸ್ಥೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಹುದ್ದೆ : ಪ್ರೋಗ್ರಾಮರ್
ಒಟ್ಟು ಹುದ್ದೆ : 2
ವೇತನ ಮಾಸಿಕ : ₹ 25,000-50,000
ಉದ್ಯೋಗದ ಸ್ಥಳ : ಬೆಂಗಳೂರು

ಹುದ್ದೆಯ ಮಾಹಿತಿ : ಪ್ರೋಗ್ರಾಮರ್ -1, ಪ್ರೋಗ್ರಾಮರ್ (ಫ್ರೆಶರ್)- 1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು -ಬಿಇ/ಬಿ.ಟೆಕ್ CSE/ITಯಲ್ಲಿ ಎಂಟೆಕ್, ಎಂಎಸ್ಸಿ, ಎಂಸಿಎ ತೇರ್ಗಡೆ ಹೊಂದಿರಬೇಕು. ಪ್ರೋಗ್ರಾಮರ್ (ಫ್ರೆಶರ್) ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಸಿಎ ಮಾಡಿರಬೇಕು. ಅಭ್ಯರ್ಥಿಗಳು ವೆಬ್ಲಾಜಿಕ್ ಸರ್ವರ್‌ನಲ್ಲಿ ನಮೂನೆಗಳು ಮತ್ತು ವರದಿಗಳೊಂದಿಗೆ Oracle 12 C ನಲ್ಲಿ 02 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿರಬೇಕು.

ವಯೋಮಿತಿ : ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು ಎಂಬುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸಿಲ್ಲ.

ವೇತನ: ಪ್ರೋಗ್ರಾಮರ್ -ಮಾಸಿಕ ₹ 50,000, ಪ್ರೋಗ್ರಾಮರ್ (ಫ್ರೆಶರ್)- ಮಾಸಿಕ ₹ 25,000 ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ keaopportunities@gmail.com ಗೆ ಜನವರಿ 14ರೊಳಗೆ ಕಳುಹಿಸಲು ಸೂಚಿಸಲಾಗಿದೆ.

Leave A Reply

Your email address will not be published.