HAL Recruitment 2023 : ನೀವು 10ನೇ ತರಗತಿ ಪಾಸಾಗಿದ್ದೀರಾ? HAL ನಲ್ಲಿದೆ ಭರ್ಜರಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ
HAL Recruitment 2023: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿ ಇಲ್ಲಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 10 ಫೈಯರ್ ಮ್ಯಾನ್(Fire Man) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಹಿಂದೂಸ್ತಾನ್ ಏರೋನಾಟಿಕ್ಸ್ನ ಅಧಿಕೃತ ವೆಬ್ಸೈಟ್ hal-india.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ತುಮಕೂರಿನಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಪೋಸ್ಟಿಂಗ್ ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹುದ್ದೆಗಳ ವಿವರಗಳು: ಒಟ್ಟು ಹುದ್ದೆಗಳ ಸಂಖ್ಯೆ- 10 ಹುದ್ದೆಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜನವರಿ 15, 2023
ದೈಹಿಕ ಪರೀಕ್ಷೆ ನಡೆಯುವ ದಿನಾಂಕ- ಜನವರಿ 27, 2023
ಲಿಖಿತ ಪರೀಕ್ಷೆ ನಡೆಯುವ ದಿನಾಂಕ- ಜನವರಿ 29, 2023
ವಿದ್ಯಾರ್ಹತೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಅಥವಾ 12ನೇ ತರಗತಿ ಪಾಸ್ ಆಗಿರಬೇಕು.
ಮಾಸಿಕ ವೇತನ: ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಆರಂಭಿಕ ವೇತನವಾಗಿ 21 ಸಾವಿರ ರೂ. ನೀಡಲಾಗುತ್ತದೆ.
ವಯೋಮಿತಿ: ಹಿಂದೂಸ್ಥಾನ್ ಏರೋನಾಟಿಕ್ಸ್ ಫೈರ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 1, 2022ಕ್ಕೆ ಅನುಗುಣವಾಗಿ 28 ವರ್ಷ ಮೀರಿರಬಾರದು. ಇದಾಗ್ಯೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC/ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿಡಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಈ ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ