ತನಗಿಂತ 5 ವರ್ಷ ದೊಡ್ಡವಳ ಜೊತೆ ಬಾಲಿವುಡ್‌ ಬಾದ್‌ಶ ಮಗನ ಡೇಟಿಂಗ್‌|? ಫೋಟೋ ವೈರಲ್‌

Share the Article

ಬಾಲಿವುಡ್‌ ಕೇವಲ ಸಿನಿಮಾಗಳಿಗೆ ಮಾತ್ರವಲ್ಲ ಹಲವಾರು ವಿಷಯಗಳಿಗೆ ನಿದರ್ಶನ ನೀಡುತ್ತದೆ. ಇಲ್ಲಿ ಸಿನಿಮಾದಷ್ಟೇ ಫೇಮಸ್‌ ಡೇಟಿಂಗ್‌, ಲವ್‌, ರಿಲೇಷನ್‌ಶಿಪ್.‌ ಅದು ಕೂಡಾ ವಯಸ್ಸಿನ ಅಂತರವಿಲ್ಲದೆ ನಡೆಯುವ ಕ್ರಶಸ್‌…ಲವ್‌…ಇಲ್ಲಿ ಹುಡುಗನಿಗೆ ಹೆಚ್ಚು ಪ್ರಾಯವಿದ್ದು ಹುಡುಗಿಗೆ ಕಡಿಮೆ ಪ್ರಾಯವಿದ್ದರೆ ಏನೂ ವಿಶೇಷತೆ ಇಲ್ಲ. ಆದರೆ ವಯಸ್ಸಿನ ಅಂತರದಲ್ಲಿ ಹುಡುಗಿ ದೊಡ್ಡವಳಾಗಿದ್ದರೆ ಹಲವು ಕುತೂಹಲದ ಕಣ್ಣುಗಳು ಇತ್ತ ನೋಡುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ತಾಜಾ ಉದಾಹರಣೆ ಇತ್ತೀಚಿನ ಲವ್‌ಬರ್ಡ್ಸ್‌ ಅರ್ಜುನ್‌ ಕಪೂರ್‌ ಮತ್ತು ಮಲೈಕಾ ಅರೋರಾ ಜೋಡಿ. ಇದಕ್ಕೆ ಇನ್ನೊಂದು ಹೊಸ ಜೋಡಿಯ ಹೆಸರೊಂದು ಸೇರ್ಪಡೆಯಾಗಲಿದೆ ಎಂದೆನಿಸುತ್ತದೆ. ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ ಮಗನಾದ ಆರ್ಯನ್‌ ಖಾನ್‌ ಈ ಸಾಲಿಗೆ ಸೇರುತ್ತಿದ್ದಾನಾ ಎಂದು ಬಿಟೌನ್‌ನಲ್ಲಿ ಕೇಳಿ ಬರುತ್ತಿದೆ. ತನಗಿಂತ 5 ವರ್ಷ ದೊಡ್ಡವಳಾದ ನಟಿ ನೋರಾ ಫತೇಹಿ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ.

ಬಾಲಿವುಡ್ ಅಂಗಳ ಖ್ಯಾತ ಡ್ಯಾನ್ಸರ್ ಕಮ್ ನಟಿ ನೋರಾ ಫತೇಹಿ (Nora Fatehi) ಜೊತೆಗೆ ಆರ್ಯನ್ ಖಾನ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಹಬ್ಬಿದೆ. ಹಾಗೆ ನೋಡಿದರೆ ನೋರಾ ಫತೇಹಿ ಮತ್ತು ಆರ್ಯನ್ ಖಾನ್ ನಡುವೆ ವಯಸ್ಸಿನ ಅಂತರ ಇದೆ. ಹಾಗಿದ್ದರೂ ಕೂಡ ಇಬ್ಬರ ನಡುವೆ ಡೇಟಿಂಗ್ ಮಾಡುವ ವಿಚಾರ ನಿಜಕ್ಕೂ ಅಚ್ಚರಿ ಮೂಡಿಸಿದೆ.

ಈ ಸುದ್ದಿಗೆ ಪುಷ್ಠಿ ನೀಡಿದ್ದೇ, ದುಬೈನಲ್ಲಿ ಅದ್ಧೂರಿಯಾಗಿ ಹೊಸ ವರ್ಷ ಆಚರಣೆ ಮಾಡಿದ್ದು. ದುಬೈನಲ್ಲಿ ಆರ್ಯನ್ ಖಾನ್, ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ರು ಈ ಫೋಟೋಗಳು ಇದೀಗ ವೈರಲ್ ಆಗಿದೆ. ನಟಿ ನೋರಾ ಫತೇಹಿ ಕೂಡ ಹೊಸ ವರ್ಷದ ಸಂದರ್ಭದಲ್ಲಿ ದುಬೈನಲ್ಲಿ ಇದ್ದರು. ಅವರು ಹಂಚಿಕೊಂಡ ಫೋಟೋದ ಬ್ಯಾಗ್ರೌಂಡ್ ಕೂಡ ಆರ್ಯನ್ ಖಾನ್ ಶೇರ್ ಮಾಡಿದ ಫೋಟೋದ ರೀತಿಯೇ ಇದೆ. ಇಬ್ಬರು ದುಬೈಗೆ ಹೋಗಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದು, ಆ ಕಾರಣದಿಂದ ಇಬ್ಬರ ಡೇಟಿಂಗ್ ಬಗ್ಗೆ ಅನುಮಾನ ಶುರುವಾಗಿದೆ.

30 ವರ್ಷದ ನೋರಾ ಫತೇಹಿ 25 ವರ್ಷದ ಆರ್ಯನ್‌ ಖಾನ್‌ ಜೊತೆ ಡೇಟಿಂಗ್‌ ಮಾಡುವುದಕ್ಕಿಂತಲೂ ತನಗಿಂತ ದೊಡ್ಡ ವಯಸ್ಸಿನ ಮಹಿಳೆಯೊಂದಿಗೆ ಶಾರುಖ್‌ ಖಾನ್‌ ಮಗ ಡೇಟಿಂಗ್‌ ಮಾಡುವುದೇ ದೊಡ್ಡ ಸುದ್ದಿಯಾಗಿದೆ ಎಂದರೆ ತಪ್ಪಾಗಲಾರದು. ಈ ಊಹಾಪೋಹ ಸುದ್ದಿಗಳಿಗೆ ಇನ್ನಷ್ಟೇ ರೆಕ್ಕೆಪುಕ್ಕ ಸೇರಿ ಇದು ನಿಜನಾ ಅಥವಾ ಸುಳ್ಳ ಎಂಬುವುದು ಸದ್ಯದಲ್ಲಿ ತಿಳಿಯಬಹುದು. ಏನೂ ಇಲ್ಲ ಏನೂ ಇಲ್ಲ ಎಂದುಕೊಂಡೇ ಇದೆ ಎನ್ನುವುದು ನಂತರ ಸಾಬೀತಾದ ಹಲವಾರು ಘಟನೆ ಬಾಲಿವುಡ್‌ನಲ್ಲಿ ನಡೆದಿದೆ. ಯಾರಿಗ್ಗೊತ್ತು ಬಹುಶಃ ಕಿಂಗ್‌ಖಾನ್‌ ಮಗನ ಲವ್‌ಸ್ಟೋರಿಯ ಸುದ್ದಿ ಕೂಡಾ ನಿಜ ಇರಬಹುದು. ಕಾದು ನೋಡೋಣ ಏನಂತೀರಿ?

Leave A Reply