Anganwadi Jobs: ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | 500 ಖಾಲಿ ಹುದ್ದೆಗಳು, 10th ಪಾಸಾದವರು ಅಪ್ಲೈ ಮಾಡಿ

ಅಂಗನವಾಡಿಯಲ್ಲಿ(Anganwadi) ಕೆಲಸ(Job) ಹುಡುಕುತ್ತಿರುವವರಿಗೆ ಇಲ್ಲೊಂದು ಒಳ್ಳೆಯ ಚಾನ್ಸ್(Good Chance)​ ಇದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಅಂಗನವಾಡಿ ಕಾರ್ಯಕರ್ತೆ/ಮಿನಿ ಅಂಗನವಾಡಿ ಕಾರ್ಯಕರ್ತೆ/ ಆಶಾ ಕಾರ್ಯಕರ್ತೆ ಹುದ್ದೆಗಳನ್ನು(Jobs) ಭರ್ತಿ ಮಾಡಲು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

 

ಸಂಸ್ಥೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-ರಾಜಸ್ಥಾನ
ಹುದ್ದೆ: ಅಂಗನವಾಡಿ ಕಾರ್ಯಕರ್ತೆ/ಮಿನಿ ಅಂಗನವಾಡಿ ಕಾರ್ಯಕರ್ತೆ/ ಆಶಾ ಕಾರ್ಯಕರ್ತೆ
ಒಟ್ಟು ಹುದ್ದೆ : 500
ವೇತನ : ನಿಯಮಾನುಸಾರ
ಉದ್ಯೋಗದ ಸ್ಥಳ : ರಾಜಸ್ಥಾನ

ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ 10ನೇ ತರಗತಿ, ಪಿಯುಸಿ ಪಾಸಾಗಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 21 ವರ್ಷ, ಗರಿಷ್ಠ 40 ವರ್ಷ ಆಗಿರಬೇಕು.
SC/ST/ವಿಧವಾ/ ವಿಚ್ಚೇದಿತೆ/ವಿಶೇಷ ಚೇತನರಿಗೆ- 45 ವರ್ಷ

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ತೆರಬೇಕಾಗಿಲ್ಲ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ wcd.rajasthan.gov.in ಗೆ ಭೇಟಿ ನೀಡಬೇಕು. ಈಗಾಗಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.

Leave A Reply

Your email address will not be published.