IAF Recruitment 2023: ಪಿಯುಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ | ಮಾಸಿಕ ವೇತನ ರೂ.27,000

ಭಾರತೀಯ ವಾಯುಪಡೆ(Indian Air Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ. ಫೆಬ್ರವರಿ 8, 2023 ರಂದು ಸಂದರ್ಶನ(Interview) ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಅಧಿಸೂಚನೆ ಬಿಡುಗಡೆಯಾದ ದಿನಾಂಕ: 02/01/2023
ನೇಮಕಾತಿಯ ಪರೀಕ್ಷೆ ನಡೆಯುವ ದಿನ: ಫೆಬ್ರವರಿ 8, 2023

ಸಂಸ್ಥೆ : ಭಾರತೀಯ ವಾಯುಪಡೆ
ಹುದ್ದೆ : ಮೆಡಿಕಲ್ ಅಸಿಸ್ಟೆಂಟ್
ವೇತನ : ಮಾಸಿಕ ₹14,600-26,900
ವಿದ್ಯಾರ್ಹತೆ :ಪಿಯುಸಿ, ಡಿಪ್ಲೋಮಾ, ಬಿಎಸ್ಸಿ
ಉದ್ಯೋಗದ ಸ್ಥಳ : ಭಾರತ

ವಿದ್ಯಾರ್ಹತೆ: ಭಾರತೀಯ ವಾಯು ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ, ಡಿಪ್ಲೋಮಾ, ಫಾರ್ಮಸಿಯಲ್ಲಿ ಬಿಎಸ್ಸಿ ಪೂರ್ಣಗೊಳಿಸಿರಬೇಕು.

ಮೆಡಿಕಲ್ ಅಸಿಸ್ಟೆಂಟ್ ಟ್ರೇಡ್ (ಡಿಪ್ಲೋಮಾ/ ಫಾರ್ಮಸಿಯಲ್ಲಿ ಬಿಸ್ಸಿ): ಅವಿವಾಹಿತ ಅಭ್ಯರ್ಥಿಗಳು ಜೂನ್​ 27, 1999 ರಿಂದ ಜೂನ್​ 27, 2004 ರೊಳಗೆ ಜನಿಸಿರಬೇಕು.
ವಿವಾಹಿತ ಅಭ್ಯರ್ಥಿಗಳು ಜೂನ್​ 27, 1999 ರಿಂದ ಜೂನ್​ 27, 2002 ರೊಳಗೆ ಜನಿಸಿರಬೇಕು.

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಹೊಂದಿಕೊಳ್ಳುವಿಕೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸಂದರ್ಶನ ನಡೆಯುವ ಸ್ಥಳ:
ಏರ್​ಫೋರ್ಸ್​ ಸ್ಟೇಷನ್
ತಂಬರಮ್
ಚೆನ್ನೈ
ತಮಿಳುನಾಡು

Leave A Reply

Your email address will not be published.