PMKFPO Yojana: ರೈತ ಬಾಂಧವರಿಗೆ ಉಡುಗೊರೆ ನೀಡಿದ PM ಮೋದಿ! ನಿಮ್ಮ ಖಾತೆಗೆ ಸೇರಲಿವೆ 15 ಲಕ್ಷ ರೂ.
PM Kisan FPO Yojana 2022: ರೈತರೇ ನಿಮಗೊಂದು ಬಹುದೊಡ್ಡ ಉಡುಗೊರೆಯೊಂದನ್ನು ಕೇಂದ್ರ ಸರಕಾರ ನೀಡಿದೆ. ಹೌದು, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಖುಷಿಯ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರದ ಮೋದಿ ಸರ್ಕಾರ ರೈತರ ಆದಾಯ ಹೆಚ್ಚಿಸಲು ಈ ಬಾರಿ ದೊಡ್ಡ ಹೆಜ್ಜೆ ಇಟ್ಟಿದೆ. ವಾಸ್ತವದಲ್ಲಿ, ಈ ಹಿಂದೆ ಕಿಸಾನ್ ಯೋಜನೆಯಡಿ 6,000 ರೂ.ಗಳನ್ನು ನೀಡುತ್ತಿದ್ದ ಸರ್ಕಾರವು ಈಗ ಹೊಸ ಕೃಷಿ
ಉದ್ಯಮವನ್ನು ಪ್ರಾರಂಭಿಸಲು ರೈತರಿಗೆ 15 ಲಕ್ಷ ರೂ.ಗಳ ವರೆಗೆ ಧನಸಹಾಯ ಒದಗಿಸಲಿದೆ.
ಲಾಗಿನ್ ಮಾಡುವ ವಿಧಾನ ಇಲ್ಲಿದೆ
- ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್ಸೈಟ್ನಲ್ಲಿ FPO ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಈಗ ಲಾಗಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಈಗ ಲಾಗಿನ್ ಫಾರ್ಮ್ ತೆರೆಯುತ್ತದೆ. ಅದರಲ್ಲಿ ಬಳಕೆದಾರ ಹೆಸರು ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
- ರೀತಿ ನೀವು ಲಾಗಿನ್ ಆಗಬಹುದು
ಇದರ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇಲ್ಲಿ ನೀಡಲಾಗಿದೆ :
- ಇದಕ್ಕಾಗಿ ನೀವು ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
- ನಂತರ FPO ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಇದರ ನಂತರ ‘ನೋಂದಣಿ’ ಆಯ್ಕೆಗೆ ಹೋಗಿ.
- ನೋಂದಣಿ ಫಾರ್ಮ್ ನಲ್ಲಿ ಕೇಳಿದ ಮಾಹಿತಿಯನ್ನು ಭರ್ತಿ ಮಾಡಿ.
- ಈಗ ನಿಮ್ಮ ಖಾತೆಯ ಪಾಸ್ಬುಕ್ ಅಥವಾ ರದ್ದುಪಡಿಸಿದ ಚೆಕ್ ಮತ್ತು ಐಡಿ ಪ್ರೂಫ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಅದನ್ನು ಅಪ್ಲೋಡ್ ಮಾಡಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ಕಿಸಿ.
ಪಿಎಂ ಕಿಸಾನ್ ಎಫ್ಪಿಒ ಯೋಜನೆಯಡಿ, ರೈತರಿಗೆ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ.
ಈ ಮೂಲಕ ರೈತ ಬಾಂಧವರು ಸುಲಭವಾಗಿ ತಮ್ಮ ಹೊಸ ಉದ್ಯಮ ಆರಂಭಿಸ ಬಹುದು. ಈ ಯೋಜನೆಯಡಿ ಸರ್ಕಾರ ರೈತ ಉತ್ಪಾದಕ ಸಂಸ್ಥೆಗೆ 15 ಲಕ್ಷ ರೂ.ಧನಸಹಾಯ ಒದಗಿಸುತ್ತದೆ. ಇದರ ಲಾಭ ಪಡೆಯಲು 11 ರೈತರು ಸೇರಿ ಸಂಸ್ಥೆ ಅಥವಾ ಉದ್ಯಮ ರಚಿಸಬೇಕು. ತನ್ಮೂಲಕ ಕೃಷಿಗೆ ಸಂಬಂಧಿಸಿದ ಉಪಕರಣಗಳು ಅಥವಾ ರಸಗೊಬ್ಬರಗಳು, ಬೀಜಗಳು ಅಥವಾ ಔಷಧಿಗಳನ್ನು ಖರೀದಿಸಲು ಅನುಕೂಲವಾಗುತ್ತದೆ.