UPSC Recruitment: ಯುಪಿಎಸ್ಸಿ ನೇಮಕಾತಿ, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪೂರ್ತಿ ಮಾಹಿತಿ ಇಲ್ಲಿದೆ
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ಸೈಟ್ upsc.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರಕಾರಿ ಉದ್ಯೋಗ ಅರಸುವವರಿಗೆ ಇದು ಸೂಕ್ತ ಅವಕಾಶ.
ನೇಮಕಾತಿ : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್
ಹುದ್ದೆಗಳ ವಿವರ : ಸೈಂಟಿಸ್ಟ್ ಬಿ : 2 ಹುದ್ದೆಗಳು
ಡೆಪ್ಯುಟಿ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ : 4 ಹುದ್ದೆಗಳು
ಜಂಟಿ ಸಹಾಯಕ ನಿರ್ದೇಶಕರು : 3 ಹುದ್ದೆಗಳು
ಸಹಾಯಕ ಕಾರ್ಮಿಕ ಆಯುಕ್ತರು: 1 ಪೋಸ್ಟ್
ಒಟ್ಟು ಹುದ್ದೆಗಳು : 10
ವೇತನ : ಸರ್ಕಾರಿ ವೇತನ ನಿಯಮಾನುಸಾರ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ : 13-01-2023
ಅಧಿಕೃತ ವೆಬ್ಸೈನ್ : upsc.gov.in
ಅರ್ಜಿ ಶುಲ್ಕವನ್ನು ಪಾವತಿಸಲು ಜನವರಿ 13 ಕೊನೆಯ ದಿನವಾಗಿದೆ. SC/ST/PWBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಇತರೆ ಅಭ್ಯರ್ಥಿಗಳು ಎಸ್‌ಬಿಐನ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಂಡು ಅಥವಾ ವೀಸಾ/ಮಾಸ್ಟರ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಅರ್ಜಿ ಶುಲ್ಕವನ್ನು ಪಾವತಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು https://upsc.gov.in/ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಂಡು ಎಲ್ಲಾ ಮಾನದಂಡಗಳನ್ನು ಪೂರೈಸುತ್ತದೆಯೇ ಎಂದು ತಿಳಿದು ಅರ್ಜಿ ಸಲ್ಲಿಸಬಹುದು.