ICMR NIP Recruitment: 10th, Second PU ಪಾಸಾದವರಿಗೆ ಉದ್ಯೋಗ | ಮಾಸಿಕ ವೇತನ 60 ಸಾವಿರ ರೂ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಥಾಲಜಿ (NOP)ಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. 16 ಜನವರಿ 2023ರೊಳಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು.

 

ಸಂಸ್ಥೆ : ICMR NIP Recruitment 2022-23
ಒಟ್ಟು ಹುದ್ದೆ – 19
ಕಿರಿಯ ವೈದ್ಯಕೀಯ ಅಧಿಕಾರಿ : ವೇತನ 60,000/- 3 ಹುದ್ದೆಗಳು
ಲ್ಯಾಬ್ ಟೆಕ್ನಿಷಿಯನ್ : ವೇತನ 18,000/- 5 ಹುದ್ದೆಗಳು
ಆರೋಗ್ಯ ಸಹಾಯಕ : ವೇತನ 17,000/- 6 ಹುದ್ದೆಗಳು
ಫೀಲ್ಡ್ ಅಸಿಸ್ಟೆಂಟ್ : ವೇತನ 17,000/- 5 ಹುದ್ದೆಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16 ಜನವರಿ 2023

ವಿದ್ಯಾರ್ಹತೆ/ ಅರ್ಹತೆ : ಕಿರಿಯ ವೈದ್ಯಕೀಯ ಅಧಿಕಾರಿ: ಸಮುದಾಯ ಆರೋಗ್ಯ ರಕ್ಷಣಾ ಸೆಟಪ್‌ನಲ್ಲಿ ಕೆಲಸ ಮಾಡಿದ ಅನುಭವ ಇರಬೇಕು. ಟಿಬಿ ಮತ್ತು ಎಕ್ಸ್-ರೇಗಳನ್ನು ಅರ್ಥೈಸಲು ಸಾಧ್ಯವಾಗುತ್ತದೆ.
ಲ್ಯಾಬ್ ಟೆಕ್ನಿಷಿಯನ್: ವೈದ್ಯಕೀಯ ಲ್ಯಾಬ್ ಟೆಕ್ನಾಲಜಿಯಲ್ಲಿ ಎರಡು ವರ್ಷಗಳ ಡಿಪ್ಲೊಮಾ ಜೊತೆಗೆ 12 ನೇ ತೇರ್ಗಡೆ. ಎರಡು ವರ್ಷಗಳ ಅನುಭವವೂ ಅಗತ್ಯ.
ಆರೋಗ್ಯ ಸಹಾಯಕರು: 10ನೇ ತರಗತಿ ತೇರ್ಗಡೆಯಾಗಿರಬೇಕು. ಅಲ್ಲದೆ, ಸಂಬಂಧಿತ ಕ್ಷೇತ್ರದಲ್ಲಿ ಐದು ವರ್ಷಗಳ ಕೆಲಸದ ಅನುಭವ ಅಥವಾ ಐಟಿಐ ಮಾಡಿರಬೇಕು.
ಫೀಲ್ಡ್ ಅಸಿಸ್ಟೆಂಟ್: 10 ನೇ ಕ್ಲಾಸ್​​ ಪಾಸ್ ಆಗಿರಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.