ಕ್ರೀಡಾ ಕೋಟಾದಡಿ ಉದ್ಯೋಗ | ಸರಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಅವಕಾಶ, ಅರ್ಹರಿಗೆ ಅವಕಾಶ

ನೈರುತ್ಯ ರೈಲ್ವೆ ಸ್ಪೋರ್ಟ್ಸ್​ ಕ್ಯಾಟಗೆರಿಯಲ್ಲಿ ಹುದ್ದೆಗಳ (Sports Quota Railway Jobs) ಭರ್ತಿಗೆ ಮುಂದಾಗಿದೆ. ಕ್ರೀಡಾ ಕೋಟಾದಡಿ (Sports Quota) ಕೆಲಸ ಖಾಲಿ ಇದ್ದು, ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ. ಸರ್ಕಾರಿ ಕೆಲಸ ಬೇಕೆಂದು ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಗುಡ್‌ನ್ಯೂಸ್‌ ಎಂದೇ ಹೇಳಬಹುದು. ಡಿಸೆಂಬರ್​ 17ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಜನವರಿ 16 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿದೆ. ಒಟ್ಟು 21 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಸಬೇಕು.

 

ಸಂಸ್ಥೆ: ನೈರುತ್ಯ ರೈಲ್ವೆ ವಿಭಾಗ
ನೇಮಕಾತಿ: ಕ್ರೀಡಾ ಕೋಟಾದಡಿ ನೇಮಕಾತಿ
ಒಟ್ಟು ಹುದ್ದೆ: 21
ಶೈಕ್ಷಣಿಕ ಅರ್ಹತೆ: 10ನೇ ತರಗತಿಯಿಂದ ಪದವಿವರೆಗೆ
ವಯೋಮಿತಿ: 25 ವರ್ಷ ಮೀರಿರಬಾರದು

ವಯೋಮಿತಿ : ಅರ್ಜಿದಾರರ ವಯಸ್ಸು 18-25 ವರ್ಷ ಮೀರಿರಬಾರದು. SSLCಯಿಂದ ಪದವಿವರೆಗಿನ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆ ವಿಧಾನ : ಕ್ರೀಡಾ ಸಾಧನೆಗಳ ಮೌಲ್ಯಮಾಪನ ಮತ್ತು ಶೈಕ್ಷಣಿಕ ಅರ್ಹತೆಯನ್ನು ಆಧರಿಸಿರುತ್ತದೆ.

ಅರ್ಜಿ ಶುಲ್ಕ : ಅಭ್ಯರ್ಥಿಗಳು ಪರೀಕ್ಷಾ ಶುಲ್ಕವಾಗಿ ರೂ.500 ಪಾವತಿಸಬೇಕು.
ಎಸ್‌ಸಿ/ಎಸ್‌ಟಿ/ಮಾಜಿ ಸೈನಿಕ ಅಭ್ಯರ್ಥಿಗಳು/ಮಹಿಳೆಯರು, ಅಲ್ಪಸಂಖ್ಯಾತರು, ಇಬಿಸಿ ಅಭ್ಯರ್ಥಿಗಳು ರೂ.250 ಶುಲ್ಕವನ್ನು ಪಾವತಿಸಬೇಕು.

ರೆಸ್ಯೂಮ್ ಜೊತೆ ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು. ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡ ನಂತರ ಅರ್ಜಿ ಸಲ್ಲಿಸಿ.

Leave A Reply

Your email address will not be published.