Karnataka Bank Recruitment 2022 : ಕರ್ನಾಟಕ ಬ್ಯಾಂಕ್‌ನಲ್ಲಿ ಉದ್ಯೋಗವಕಾಶ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರಿನಲ್ಲಿ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 25, 2022 ರ ಮೊದಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

 

ಸಂಸ್ಥೆ : ಕರ್ನಾಟಕ ಬ್ಯಾಂಕ್ ಹುದ್ದೆಯ ಹೆಸರು : ಕಂಪನಿ ಕಾರ್ಯದರ್ಶಿ ಉದ್ಯೋಗ ಸ್ಥಳ :ಮಂಗಳೂರು

ವಯೋಮಿತಿ : ಕರ್ನಾಟಕ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ವಯಸ್ಸು 50 ವರ್ಷ ಮೀರಿರಬಾರದು.

ವಿದ್ಯಾರ್ಹತೆ : ಕರ್ನಾಟಕ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು. ಕೆಲಸದ ಅನುಭವವಿರುವವರಿಗೆ ಹೆಚ್ಚಿನ ಆದ್ಯತೆ

ಆಯ್ಕೆ ಪ್ರಕ್ರಿಯೆ: ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :25 – ಡಿಸೆಂಬರ್-2022

ಅರ್ಜಿ ಸಲ್ಲಿಸುವ ವಿಧಾನ : ಕರ್ನಾಟಕ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಗುರುತಿನ ಚೀಟಿ, ವಯಸ್ಸು,ಶೈಕ್ಷಣಿಕ,ಅರ್ಹತೆ, ಇತ್ಯಾದಿ ದಾಖಲೆ) 25-12- 2022ರ ಮೊದಲು ಕರ್ನಾಟಕ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಆದ karnatakabank.com ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಸೂಚನೆ : ಆಸಕ್ತ ಅಭ್ಯರ್ಥಿಗಳು recruitment@ktkbank.com ಇ- ಮೇಲ್‌ ಐಡಿ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ. ಅಧಿಕೃತ ವೆಬ್ಸೈಟ್‌ ಲಿಂಕ್‌ ಇಲ್ಲಿದೆ

Leave A Reply

Your email address will not be published.