ಉಡುಪಿ:ಕೋಟಿ ವಂಚನೆಯ ಆರೋಪ!! ಠೇವಣಿದಾರರ ಎದುರಲ್ಲೇ ಮಹಿಳಾ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ!!

Share the Article

ಉಡುಪಿ:ಸಹಕಾರಿ ಸಂಘವೊಂದರಲ್ಲಿ ಠೇವಣಿ ಇರಿಸಲಾಗಿದ್ದ ಹಣವನ್ನು ವಂಚಿಸಿದ ಆರೋಪವೊಂದು ಕೇಳಿಬಂದಿದ್ದು, ತಮ್ಮ ಹಣಕ್ಕಾಗಿ ಠೇವಣಿದಾರರು ಬ್ಯಾಂಕ್ ಕದ ತಟ್ಟಿದಾಗ ಮಹಿಳಾ ಸಿಬ್ಬಂದಿಯೊಬ್ಬರು ಠೇವಣಿದಾರರ ಎದುರಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಇಲ್ಲಿನ ಸಹಕಾರಿ ಸಂಘವೊಂದರಲ್ಲಿ ಹಿರಿಯ ನಾಗರಿಕರ ಸಹಿತ ಹಲವರು ಶೇ.12% ಬಡ್ಡಿ ಸಿಗುವ ಆಸೆಯಿಂದ ಮೊತ್ತವನ್ನು ಠೇವಣಿ ಇರಿಸಿದ್ದರು. ಕಳೆದ ಎರಡು ತಿಂಗಳುಗಳಿಂದ ವಂಚನೆಯ ಬಗ್ಗೆ ಅನುಮಾನವೊಂದು ಮೂಡಿದ್ದು, ಕೂಡಲೇ ಠೇವಣಿದಾರರು ಸೊಸೈಟಿ ಕದ ತಟ್ಟಿದ್ದಾರೆ.

ಅತ್ತ ಹಣ ಪಡೆದುಕೊಂಡವ ಬ್ಯಾಂಕ್ ಬಾಗಿಲಿಗೆ ಇಂದು ರಜೆ ಎನ್ನುವ ಬೋರ್ಡ್ ನೇತು ಹಾಕಿ ಪರಾರಿಯಾಗಿ ತಮ್ಮನ್ನು ಸತಾಯಿಸುತ್ತಿದ್ದಾನೆ ಎನ್ನುವ ಆರೋಪ ಮಾಡಿದ ಠೇವಣಿದಾರರು ಬ್ಯಾಂಕ್ ಒಳಗೆ ಪ್ರವೇಶಿಸಿ ಪ್ರಶ್ನಿಸಿದ್ದು, ಈ ವೇಳೆ ಮಹಿಳಾ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು ಘಟನೆಯ ವಿಡಿಯೋ ವೈರಲ್ ಆಗಿದೆ.

Leave A Reply