ರೈತರೇ ನಿಮಗೊಂದು ಗುಡ್‌ನ್ಯೂಸ್ | ರಸಗೊಬ್ಬರ ಬೆಲೆಯ ಬಗ್ಗೆ ಕೇಂದ್ರದಿಂದ ಮಹತ್ವದ ನಿರ್ಧಾರ
ರೈತರೇ ನಿಮಗೊಂದು ಸಿಹಿ ಸುದ್ದಿ. ಈಗಾಗಲೇ ರಸಗೊಬ್ಬರ ಹಾಗೂ ಕಚ್ಚಾ ವಸ್ತುಗಳ ಬೆಲೆಯೇರಿಕೆಯಿಂದ ಕಂಗಾಲಾಗಿರುವ ರೈತ ವಲಯಕ್ಕೆ ಸಿಹಿ ಸುದ್ದಿ ದೊರಕಿದೆ. ಈ ವರ್ಷದ ರಸಗೊಬ್ಬರ ಸಬ್ಸಿಡಿಯ ಮತ್ತೊಂದು ಕಂತನ್ನು ಸರಕಾರ ಬಿಡುಗಡೆ ಮಾಡಿದೆ. ಮುಂದಿನ ರಸಗೊಬ್ಬರ ಸಬ್ಸಿಡಿ ಫೆಬ್ರವರಿ ಮಾರ್ಚ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅಂದ ಹಾಗೆ ಈ ಬಾರಿ ಸರಕಾರ 2.25 ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಸರಕಾರ ಹೇಳಿದೆ.
ವರದಿಯ ಪ್ರಕಾರ, ರಸಗೊಬ್ಬರ ವಲಯಕ್ಕೆ ತೊಂದರೆಯಾಗಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಹೇಳಿದೆ, ರಸಗೊಬ್ಬರ ಸಬ್ಸಿಡಿಯನ್ನು ಹೆಚ್ಚಿಸುವುದರಿಂದ ರೈತರಿಗೆ ಹೆಚ್ಚಿದ ಬೆಲೆಯಿಂದ ಪರಿಹಾರ ಸಿಗುತ್ತದೆ. ವಿಶ್ವ ಮಾರುಕಟ್ಟೆಯಲ್ಲಿ ಹೆಚ್ಚಿದ ರಸಗೊಬ್ಬರ ಮತ್ತು ಕಚ್ಚಾ ವಸ್ತುಗಳ ಬೆಲೆಗಳ ಒತ್ತಡದಿಂದ ರೈತರಿಗೆ ಪರಿಹಾರ ಸಿಗುತ್ತದೆ. ಬಜೆಟ್ ಅಧಿವೇಶನ ನಡೆಯುವಾಗ ರಸಗೊಬ್ಬರಕ್ಕಾಗಿ ಮತ್ತೊಂದು ದೊಡ್ಡ ಸಬ್ಸಿಡಿಯನ್ನು ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆರ್ಥಿಕ ನೀತಿ ಸಂಪಾದಕ ಲಕ್ಷ್ಮಣ್ ರಾಯ್ ಹೇಳಿದ್ದಾರೆ. ಈ ಕ್ಷೇತ್ರವನ್ನು ನಷ್ಟದಿಂದ ಪಾರು ಮಾಡಲು ಸರ್ಕಾರ ಮತ್ತೊಂದು ಹಂತದ ಸಹಾಯಧನ ಬಿಡುಗಡೆ ಮಾಡಲಿದೆ.
ರಸಗೊಬ್ಬರ, ಕಚ್ಚಾ ವಸ್ತುಗಳ ಬೆಲೆ ಏರಿಕೆಯಾದರೂ, ಸರಕಾರ ರಸಗೊಬ್ಬಗಳ ಬೆಲೆ ಹೆಚ್ಚಳ ಮಾಡುತ್ತಿಲ್ಲ. ಇದು ರಸಗೊಬ್ಬರ ಉತ್ಪಾದಕರಿಗೆ ನಷ್ಟ ಉಂಟು ಮಾಡುತ್ತದೆ. ಮೂಲಗಳ ಪ್ರಕಾರ, ಸರಕಾರ ಈ ಕ್ಷೇತ್ರಕ್ಕೆ ನಷ್ಟವಾಗಲು ಬಿಡುವುದಿಲ್ಲ ಹಾಗೆನೇ ನಷ್ಟವನ್ನು ಭರಿಸುವ ಭರವಸೆ ನೀಡಿದೆ.