MRPL : ಎಂಆರ್‌ಪಿಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಒಟ್ಟು 96 ಹುದ್ದೆ
ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಒಂದು ಷೆಡ್ಯೂಲ್ ‘ಎ’ ಮಿನಿ ರತ್ನ ಕೇಂದ್ರೀಯ ಸಾರ್ವಜನಿಕ ಕ್ಷೇತ್ರದ ಉದ್ದಿಮೆ ಮತ್ತು ಭಾರತದ ಅಗ್ರ ತೈಲ ಕಂಪೆನಿ. ಅಲ್ಲದೆ ಒಎನ್‌ಜಿಸಿ ಅಂಗಸಂಸ್ಥೆಯಾಗಿದೆ. ಇಲ್ಲಿ ಪ್ರತಿಭಾನ್ವಿತ, ಕ್ರಿಯಾಶೀಲ ಹಾಗೂ ಮಹತ್ವಾಕಾಂಕ್ಷಿ ವೃತ್ತಿಪರರಿಗೆ ಈ ಕೆಳಕಂಡ ಮ್ಯಾನೇಜ್ಮೆಂಟ್ ಕೇಡರ್ E2 ದರ್ಜೆಯ ವಿವಿಧ ವಿಷಯಗಳಿಗೆ ಅರ್ಹ ಭಾರತೀಯ ಪ್ರಜೆಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿಗಳನ್ನು ಸಲ್ಲಿಸಲು ಆನ್‌ಲೈನ್ ಪೋರ್ಟಲ್ ತೆರೆಯುವ ದಿನಾಂಕ : 17-12-2022 ರ 10-00 ಗಂಟೆಗೆ.
ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 15-01-2023 ರ ಸಂಜೆ 06 ಗಂಟೆವರೆಗೆ.
ಹುದ್ದೆಗಳ ವಿವರ (ಇಂಜಿನಿಯರ್ ಅರ್ಹತೆಯುಳ್ಳವರಿಗೆ)
ಕೆಮಿಕಲ್ ಇಂಜಿನಿಯರಿಂಗ್ : 28
ಮೆಕ್ಯಾನಿಕಲ್ ಇಂಜಿನಿಯರಿಂಗ್: 24
ಸಿವಿಲ್ ಇಂಜಿನಿಯರಿಂಗ್: 2
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ : 7
ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್: 11
ಕಂಪ್ಯೂಟರ್ ಸೈನ್ಸ್ ಮತ್ತು ಇನ್‌ಫಾರ್‌ಮೇಶನ್ ಟೆಕ್ನಾಲಜಿ : 5
ಕೆಮಿಸ್ಟ್ರಿ : 1
ಆಯ್ಕೆ ವಿಧಾನ : ಈ ಮೇಲಿನ ಇಂಜಿನಿಯರಿಂಗ್ ವಿಭಾಗದ ಹುದ್ದೆಗಳನ್ನು 2022 ರ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (ಗೇಟ್) ಅಂಕಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ತಾಂತ್ರಿಕೇತರ ವಿಭಾಗದ ಹುದ್ದೆಗಳು (ಪದವಿ ಅರ್ಹತೆಯುಳ್ಳವರಿಗೆ)
ಮಾರ್ಕೆಟಿಂಗ್ : 12
ಲೈಬ್ರರಿ ಮತ್ತು ಇನ್‌ಫಾರ್‌ಮೇಷನ್ ಸೈನ್ಸ್ : 1
ಫೈನಾನ್ಸ್ / ಇಂಟರ್ನಲ್ ಆಡಿಟ್ : 4
ಸೆಕ್ರೇಟರಿಯಲ್ : 1
ಆಯ್ಕೆ ವಿಧಾನ ಹಾಗೂ ಅರ್ಹತೆ
- ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ ಪಾಸ್ ಮಾಡಿರಬೇಕು.
- ಮಾರ್ಕೆಟಿಂಗ್, ಲೈಬ್ರರಿ ಮತ್ತು ಇನ್‌ಫಾರ್‌ಮೇಷನ್ ಸೈನ್ಸ್ ವಿಭಾಗದ ಹುದ್ದೆಗಳನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ-ಎನ್‌ಇಟಿ) (ಡಿಸೆಂಬರ್ 2021ಮತ್ತು ಜೂನ್ 2022 ರ ಅವಧಿ) ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
- ಫೈನಾನ್ಸ್ / ಇಂಟರ್ನಲ್ ಆಡಿಟ್, ಸೆಕ್ರೇಟರಿಯಲ್ ಹುದ್ದೆಗಳನ್ನು ಎಂಆರ್‌ಪಿಎಲ್ ನಡೆಸುವ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಆಸಕ್ತ ಅಭ್ಯರ್ಥಿಗಳು ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್ ವಿಳಾಸ https://www.mrpl.co.in/careers ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.