ಪಾರ್ಟ್ ಟೈಂ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ 40,000 ಸಂಬಳ
UAS Dharwad Recruitment 2022: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ(University of Agricultural Sciences ) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆ ಶಿರಸಿಯಲ್ಲಿ ಪೋಸ್ಟಿಂಗ್ ಮಾಡಲಾಗುತ್ತದೆ. ಹಾಗಾಗಿ ಆಯ್ಕೆಯಾದ ಅಭ್ಯರ್ಥಿಗಳು ಶಿರಸಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಡಿ.13,2022 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಸಲಿದೆ. ಆಸಕ್ತರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು.
5 ಪಾರ್ಟ್ ಟೈಂ ಟೀಚರ್(Part-Time Teacher) ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 29/11/2022
ಸಂದರ್ಶನ ನಡೆಯುವ ದಿನಾಂಕ: 13/12/2022
ಸಂಸ್ಥೆ : ಧಾರವಾಡ ಕೃಷಿ ವಿಶ್ವವಿದ್ಯಾಲಯ
ಹುದ್ದೆ : ಪಾರ್ಟ್ ಟೈಂ ಟೀಚರ್
ಒಟ್ಟು ಹುದ್ದೆ : 5
ವೇತನ ಮಾಸಿಕ : ₹40,000
ಉದ್ಯೋಗದ ಸ್ಥಳ : ಶಿರಸಿ
ಹುದ್ದೆಯ ಮಾಹಿತಿ:
ಇನ್ಫರ್ಮೇಶನ್ & ಕಮ್ಯುನಿಕೇಷನ್ ಟೆಕ್ನಾಲಜಿ- 1
ಕಮ್ಯುನಿಕೇಷನ್ ಸ್ಕಿಲ್ಸ್ ಇನ್ ಇಂಗ್ಲಿಷ್ & ಪರ್ಸನಾಲಿಟಿ ಡೆವಲಪ್ಮೆಂಟ್- 1
ಕನ್ನಡ ಕೃಷಿ/ ಕನ್ನಡ ಭಾಷೆ ಭಾಗ-1- 1
ಹ್ಯೂಮನ್ ವ್ಯಾಲ್ಯೂಸ್ & ಎತ್ನಿಕ್ಸ್-1
ಸ್ಟ್ಯಾಟಿಸ್ಟಿಕಲ್ ಮೆಥಡ್ಸ್ ಫಾರ್ ಅಪ್ಲೈಡ್ ಸೈನ್ಸಸ್- 1
ವಿದ್ಯಾರ್ಹತೆ:
ಇನ್ಫರ್ಮೇಶನ್ & ಕಮ್ಯುನಿಕೇಷನ್ ಟೆಕ್ನಾಲಜಿ- ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ
ಕಮ್ಯುನಿಕೇಷನ್ ಸ್ಕಿಲ್ಸ್ ಇನ್ ಇಂಗ್ಲಿಷ್ & ಪರ್ಸನಾಲಿಟಿ ಡೆವಲಪ್ಮೆಂಟ್- ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ
ಕನ್ನಡ ಕೃಷಿ/ ಕನ್ನಡ ಭಾಷೆ ಭಾಗ-1- ಕನ್ನಡದಲ್ಲಿ ಸ್ನಾತಕೋತ್ತರ ಪದವಿ
ಹ್ಯೂಮನ್ ವ್ಯಾಲ್ಯೂಸ್ & ಎತ್ನಿಕ್ಸ್- ಸೋಷಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ
ಸ್ಟ್ಯಾಟಿಸ್ಟಿಕಲ್ ಮೆಥಡ್ಸ್ ಫಾರ್ ಅಪ್ಲೈಡ್ ಸೈನ್ಸಸ್- ಅಗ್ರಿಕಲ್ಚರಲ್ ಸ್ಟ್ಯಾಟಿಸ್ಟಿಕ್ಸ್/ ಸ್ಟ್ಯಾಟಿಸ್ಟಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಸಂದರ್ಶನ ನಡೆಯುವ ಸ್ಥಳ: ಡೀನ್ ಕಚೇರಿ (ಫಾರೆಸ್ಟ್), ಫಾರೆಸ್ಟ್ ಯೂನಿವರ್ಸಿಟಿ, ಶಿರಸಿ-581401,ಉತ್ತರ ಕನ್ನಡ ಜಿಲ್ಲೆ.ಕರ್ನಾಟಕ