BOB Recruitment 2022: ಬ್ಯಾಂಕ್​ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ, ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ

BOB Recruitment 2022: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬ್ಯಾಂಕ್‌ ಆಫ್‌ ಬರೋಡದಲ್ಲಿ ಉದ್ಯೋಗವಕಾಶಗಳಿವೆ. ಹುದ್ದೆಯ ಬಗ್ಗೆ ಈ ಕೆಳಗಡೆ ಮಾಹಿತಿ ನೀಡಲಾಗಿದೆ. ಆಸಕ್ತರು ಡಿ.20,2022 ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಜಯಪುರ, ಬಾಗಲಕೋಟೆ, ರಾಯಚೂರಿನಲ್ಲಿ ಪೋಸ್ಟಿಂಗ್‌ ಮಾಡಲಾಗುತ್ತದೆ.

ಸಂಸ್ಥೆ : ಬ್ಯಾಂಕ್ ಆಫ್ ಬರೋಡಾ
ಹುದ್ದೆ : ಬ್ಯುಸಿನೆಸ್ ಕರೆಸ್ಪಾಂಡೆಂಟ್ ಸೂಪರ್​ವೈಸರ್
ಒಟ್ಟು ಹುದ್ದೆ : 3
ವೇತನ ಮಾಸಿಕ : ₹10,000-15,000
ಉದ್ಯೋಗದ ಸ್ಥಳ : ವಿಜಯಪುರ, ಬಾಗಲಕೋಟೆ, ರಾಯಚೂರು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 20/12/2022

ವಿದ್ಯಾರ್ಹತೆ : ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಂಪ್ಯೂಟರ್ಸ್​/ಐಟಿಯಲ್ಲಿ ಬಿಇ, ಎಂಎಸ್ಸಿ, ಎಂಸಿಎ, ಎಂಬಿಎ ಪೂರ್ಣಗೊಳಿಸಿರಬೇಕು.

ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 45 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ : ರೀಜನಲ್ ಮ್ಯಾನೇಜರ್
ಬ್ಯಾಂಕ್ ಆಫ್ ಬರೋಡಾ
ರೀಜನಲ್ ಆಫೀಸ್- ಗುಲ್ಬರ್ಗಾ
ನಂ-881-1-883-884
1st ಫ್ಲೋರ್
ಹಳೇ ಜೇವರ್ಗಿ ರಸ್ತೆ
ಸ್ಟೇಷನ್ ವಾರ್ಡ್
ಗುಲ್ಬರ್ಗಾ-585102
ಕರ್ನಾಟಕ

Leave A Reply

Your email address will not be published.