Union Bank Recruitment 2022: ಯೂನಿಯನ್ ಬ್ಯಾಂಕ್ನಲ್ಲಿ ಉದ್ಯೋಗವಕಾಶ | ಆಸಕ್ತರಿಂದ ಅರ್ಜಿ ಆಹ್ವಾನ
Union Bank of India Recruitment 2022: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(Union Bank of India) ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ.
ಒಟ್ಟು 33 ಎಕ್ಸ್ಟರ್ನಲ್ ಫ್ಯಾಕಲ್ಟಿ, ಇಂಡಸ್ಟ್ರಿ ಅಡ್ವೈಸರ್ಸ್(Industry Advisors) ಹುದ್ದೆಗಳು ಖಾಲಿ ಇದೆ. ಬ್ಯಾಂಕಿಂಗ್ ಕ್ಷೇತ್ರ(Banking Sector)ದಲ್ಲಿ ಉದ್ಯೋಗ ಅರಸುತ್ತಿರುವವರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಡಿಸೆಂಬರ್ 27, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹೈದರಾಬಾದ್, ಬೆಂಗಳೂರಿನಲ್ಲಿ ಪೋಸ್ಟಿಂಗ್ ಮಾಡಲಾಗುತ್ತದೆ.
ಸಂಸ್ಥೆ : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ : ಎಕ್ಸ್ಟರ್ನಲ್ ಫ್ಯಾಕಲ್ಟಿ, ಇಂಡಸ್ಟ್ರಿ ಅಡ್ವೈಸರ್ಸ್
ಒಟ್ಟು ಹುದ್ದೆ : 33
ಉದ್ಯೋಗದ ಸ್ಥಳ : ಬೆಂಗಳೂರು, ಹೈದರಾಬಾದ್, ಲಕ್ನೋ, ಗುರುಗ್ರಾಮ
ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 07/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 27/12/2022
ಅರ್ಜಿ ಶುಲ್ಕ:
ಎಸ್ಸಿ/ಎಸ್ಟಿ/ PWD ಅಭ್ಯರ್ಥಿಗಳು- 150 ರೂ.
ಸಾಮಾನ್ಯ/ EWS/OBC ಅಭ್ಯರ್ಥಿಗಳು- 750 ರೂ.
ಪಾವತಿಸುವ ಬಗೆ- ಆನ್ಲೈನ್
ಹುದ್ದೆಗಳ ವಿವರ : ಯುಎಲ್ಎ ಹೆಡ್(ಡಿಜಿಟಲ್ ಟ್ರಾನ್ಸ್ಫರ್ಮೇಶನ್)-1
ಯುಎಲ್ಎ ಹೆಡ್ (ಸೇಲ್ಸ್ & ಮಾರ್ಕೆಟಿಂಗ್)- 1
ಅಕಾಡೆಮಿಸಿಯನ್ಸ್- 4
ಇಂಡಸ್ಟ್ರಿ ಅಡ್ವೈಸರ್ಸ್-9
ಎಕ್ಸ್ಟರ್ನಲ್ ಫ್ಯಾಕಲ್ಟಿ- 18
ವಯೋಮಿತಿ:
ಯುಎಲ್ಎ ಹೆಡ್(ಡಿಜಿಟಲ್ ಟ್ರಾನ್ಸ್ಫರ್ಮೇಶನ್)- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 30 ರಿಂದ 60 ವರ್ಷ ವಯೋಮಿತಿ ಇರಬೇಕು.
ಯುಎಲ್ಎ ಹೆಡ್ (ಸೇಲ್ಸ್ & ಮಾರ್ಕೆಟಿಂಗ್)- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 30 ರಿಂದ 60 ವರ್ಷ ವಯೋಮಿತಿ ಇರಬೇಕು.
ಅಕಾಡೆಮಿಸಿಯನ್ಸ್- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 28 ರಿಂದ 60 ವರ್ಷ ವಯೋಮಿತಿ ಇರಬೇಕು.
ಇಂಡಸ್ಟ್ರಿ ಅಡ್ವೈಸರ್ಸ್-ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 28 ರಿಂದ 60 ವರ್ಷ ವಯೋಮಿತಿ ಇರಬೇಕು.
ಎಕ್ಸ್ಟರ್ನಲ್ ಫ್ಯಾಕಲ್ಟಿ- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 28 ರಿಂದ 60 ವರ್ಷ ವಯೋಮಿತಿ ಇರಬೇಕು.
ವಿದ್ಯಾರ್ಹತೆ: ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
ಯುಎಲ್ಎ ಹೆಡ್(ಡಿಜಿಟಲ್ ಟ್ರಾನ್ಸ್ಫರ್ಮೇಶನ್)-ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್.ಡಿ
ಯುಎಲ್ಎ ಹೆಡ್ (ಸೇಲ್ಸ್ & ಮಾರ್ಕೆಟಿಂಗ್)- ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್.ಡಿ
ಅಕಾಡೆಮಿಸಿಯನ್ಸ್- ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್.ಡಿ
ಇಂಡಸ್ಟ್ರಿ ಅಡ್ವೈಸರ್ಸ್-ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್.ಡಿ
ಎಕ್ಸ್ಟರ್ನಲ್ ಫ್ಯಾಕಲ್ಟಿ- ಎಂ.ಫಿಲ್, ಸ್ನಾತಕೋತ್ತರ ಪದವಿ, ಪಿಎಚ್.ಡಿ
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟಿಂಗ್, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ