CISF Recruitment 2022: ಉದ್ಯೋಗಾಕಾಂಕ್ಷಿಗಳೇ ನಿಮಗೆ ಗುಡ್ ನ್ಯೂಸ್ | ಸರ್ಕಾರಿ ಕೆಲಸ ನಿಮಗಾಗಿ- ತಿಂಗಳಿಗೆ ₹69,100 ಸಂಬಳ

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಂತಸದ ಸುದ್ದಿ ನೀಡಿದೆ. ಕಾನ್ಸ್​​ಟೇಬಲ್ ಹುದ್ದೆಗಳಿಗೆ (CISF Recruitment) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 

ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ cisfrectt.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ನವೆಂಬರ್ 21ರಿಂದ ಆರಂಭವಾಗಿದ್ದು, ಡಿಸೆಂಬರ್ 20ಕ್ಕೆ ಮುಕ್ತಾಯವಾಗಲಿದೆ. ಈ ನೇಮಕಾತಿಯ ಮೂಲಕ 787 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಅರ್ಜಿ ಸಲ್ಲಿಕೆ ಕೊನೆ ದಿನಾಂಕ  : ಡಿಸೆಂಬರ್​ 20, 2022

ಸಂಸ್ಥೆಯ ಹೆಸರು : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ
ಹುದ್ದೆ : ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಕಾನ್ಸ್‌ಟೇಬಲ್
ಒಟ್ಟು ಹುದ್ದೆಗಳ ಸಂಖ್ಯೆ : 787

ವಯೋಮಿತಿ : 18 ರಿಂದ 23 ವರ್ಷಗಳು
ವಿದ್ಯಾರ್ಹತೆ : 10 ನೇ ತರಗತಿ ಅಥವಾ ಅದಕ್ಕೆ ಸಮಾನವಾದ ಕೋರ್ಸ್‌ನಲ್ಲಿ ಉತ್ತೀರ್ಣ

ಅರ್ಹತೆಯ ಮಾನದಂಡಗಳು : ಒಬ್ಬರು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ಅದಕ್ಕೆ ಸಮಾನವಾದ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.

ಆಗಸ್ಟ್ 1, 2022 ರಂತೆ ಅಭ್ಯರ್ಥಿಗಳ ವಯಸ್ಸು 18 ರಿಂದ 23 ವರ್ಷಗಳ ನಡುವೆ ಇರಬೇಕು

ನೇಮಕಾತಿ ವಿಧಾನ: ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್/ದೈಹಿಕ ದಕ್ಷತೆ ಪರೀಕ್ಷೆ, ದಾಖಲೀಕರಣ, ವೈದ್ಯಕೀಯ ಪರೀಕ್ಷೆಯಂತಹ ಬಹು ಹಂತದ ನೇಮಕಾತಿ ಪ್ರಕ್ರಿಯೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಶುಲ್ಕ ವಿವರ: UR, OBC, EWS ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕ 100 ರೂ. ಪಾವತಿಸಬೇಕು. ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST), ಮಾಜಿ ಸೈನಿಕರು (ESM) ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ವೇತನ ಮತ್ತು ಸೌಲಭ್ಯ : ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ 21,700 ರಿಂದ 69,100 ರೂ. ಪಡೆಯುತ್ತಾರೆ. ಜನವರಿ 1, 2004 ರಂದು ಅಥವಾ ನಂತರ ಕೇಂದ್ರ ಸರ್ಕಾರಕ್ಕೆ ಸೇರಿದ ಎಲ್ಲಾ ಉದ್ಯೋಗಿಗಳು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.

ಅಪ್ಲಿಕೇಶನ್ ಸಲ್ಲಿಸುವ ವಿಧಾನ : ಮೊದಲು CISF ಅಧಿಕೃತ ವೆಬ್‌ಸೈಟ್ http://https://cisfrectt.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

Leave A Reply

Your email address will not be published.