BCWD ಇಲಾಖೆಯಲ್ಲಿ ಉದ್ಯೋಗ | ಒಟ್ಟು 40 ಹುದ್ದೆಗಳ ಭರ್ತಿಗೆ ಅಧಿಸೂಚನೆ ಶೀಘ್ರ ಪ್ರಕಟ

Share the Article

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳ ಭರ್ತಿ ಮಾಡಲು ಅವಕಾಶ ಶೀಘ್ರದಲ್ಲೇ ಬರಲಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಕಚೇರಿಗಳಿಗೆ ಹೊಸದಾಗಿ ಮಂಜೂರಾಗಿರುವ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸದರಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಅನುಮತಿ ನೀಡಿದ್ದಾರೆ. ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸಹಮತಿ ನೀಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.
ಹುದ್ದೆಗಳ ವಿವರ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 40 ಪತ್ರಾಂಕಿತ ವ್ಯವಸ್ಥಾಪಕರು / ತಾಲ್ಲೂಕು ಕಲ್ಯಾಣಾಧಿಕಾರಿಗಳ ಹುದ್ದೆಗಳನ್ನು (21 ಉಳಿಕೆ ಮೂಲ ವೃಂದ + 19 ಕಲ್ಯಾಣ ಕರ್ನಾಟಕ ವೃಂದ) ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಿಕೊಳ್ಳಲು ಸಹಮತಿಸಲಾಗಿದೆ. ಈ ಹುದ್ದೆಗಳ ಭರ್ತಿಗೆ ಶೀಘ್ರದಲ್ಲಿಯೇ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಿದ್ದು, ಈ ಕುರಿತು ಯಾವುದೇ ಅಧಿಕೃತ ದಿನಾಂಕಗಳ ಮಾಹಿತಿ ಹೊರಬಿದ್ದಿಲ್ಲ.

ನೇಮಕಾತಿ ವಿಧಾನ : ನೇರ ನೇಮಕಾತಿ
ನೇರ ನೇಮಕಾತಿ ವಿಧಾನದಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ವರ್ಗಾವಾರು ಮೀಸಲಾತಿಗೆ ಅನುಗುಣವಾಗಿ ಮೆರಿಟ್ ಲಿಸ್ಟ್‌ ಸಿದ್ಧಪಡಿಸಿ, ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

Leave A Reply