ಬಿಜೆಪಿಯವ್ರಿಗೆ ಮಕ್ಕಳು ಹುಟ್ಟಿಸೋ ಶಕ್ತಿ ಇಲ್ಲ ;ಅವರು ಬೀಜ ಇಲ್ದೆ ಇರುವವರು ; ದೇವೇಗೌಡರ ಬೀಜ ಬಲವಾಗಿದೆ – ಜೆಡಿಎಸ್ ನಾಯಕ ಸಿ ಎಂ ಇಬ್ರಾಹಿಂ ಮಾತು !
ಬಿಜೆಪಿಯವರಿಗೆ ಮಕ್ಕಳು ಹುಟ್ಟಿಸುವ ಶಕ್ತಿ ಇಲ್ಲ. ಈ ಬಿಜೆಪಿಯವರು ಬೀಜ ಇಲ್ಲದೇ ಇರುವವರು. ಇನ್ನೊಬ್ಬರ ಬೀಜ ತೆಗೆದುಕೊಂಡು ನಮ್ಮ ಬೀಜ ಅಂತಿದ್ದಾರೆ. ಅವರಿಗೆ ನಾಚಿಕೆ ಆಗಲ್ವಾ ಎಂದು ಬಿಜೆಪಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ಕೊಳಕಾಗಿ ಮಾತಾಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನಿಂದ ಬಿಜೆಪಿ ಪಕ್ಷಕ್ಕೆ ಕೆಲವರು ಹೋಗುತ್ತಾರೆ ಎಂಬ ವಿಚಾರವಾಗಿ – ” ಆ ಮಕ್ಕಳಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇಲ್ಲ. ನಾವು ಹುಟ್ಟಿಸಿದ ಮಕ್ಕಳನ್ನು ತೆಗೆದುಕೊಂಡು ಹೋಗುತ್ತಾರಲ್ಲ ಅವರೆಂತಹ ಗಂಡಸರು ? ಬಿಜೆಪಿಯವರು ಬೀಜ ಇಲ್ದೆ ಇರುವವರು. ಇನ್ನೊಬ್ಬರ ಬೀಜ ತೆಗೆದುಕೊಂಡು ನಮ್ಮ ಬೀಜ ಅಂತಿದೀರಾ. ನಾಚಿಕೆ ಆಗಲ್ವಾ? ಇದೇನಾ ಮೋದಿ ನಿಮಗೆ ಕಲಿಸಿರುವುದು. ಇನ್ನೂ ನೂರು ಜನರನ್ನು ಕರೆದುಕೊಂಡು ಹೋದರೂ ಹುಟ್ಟಿಸುವ ಶಕ್ತಿ ನಮಗಿದೆ. ಅವರು ನೂರು ಜನ ಇದ್ದಾರೆ. ನೀವು ಒಬ್ಬರೆ ಎನು ಮಾಡುತ್ತೀರಾ? ನಾವು ರೈತರು, ಐವತ್ತು ಆಕಳು ಕಟ್ಟಿದರೇ ಹೋರಿ ಒಂದೇ ಕಟ್ಟುವುದು. ಜನತಾದಳ, ದೇವೇಗೌಡರ ಬೀಜ ಬಲವಾಗಿದೆ ಈ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ” ಎಂದು ಮಾತು ಹೊರ ಹಾಕಿದ್ದಾರೆ.
ಬಿಜೆಪಿಯವರು ಸಿಬಿಐ, ಇಡಿ ಅವರಿಂದ ಹೆದರಿಸುತ್ತಿದ್ದಾರೆ. ಆದರೆ ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಕ್ಷೇತ್ರದಲ್ಲಿಯೂ ಜೆಡಿಎಸ್ ಸ್ಪರ್ಧಿಸುತ್ತಿದೆ. ಜೆಡಿಎಸ್ 123 ಗೆಲ್ಲುವ ಗುರಿ ಹೊಂದಿದ್ದು, ಅಧಿಕಾರಕ್ಕೆ ಬರುತ್ತೇವೆ. ನಮ್ಮದು ನ್ಯಾಷನಲ್ ಪಕ್ಷ ಅ.ಲ್ಲ ಸ್ಥಳೀಯ ಪಕ್ಷ. ರಾಜ್ಯದ ಜನರಿಗಾಗಿ ಹುಟ್ಟಿರುವ ಪಕ್ಷ. ನಾನು ಅಧ್ಯಕ್ಷ ಆದ ಬಳಿಕ ಸಭೆಗಳಿಗೆ ಜನರನ್ನು ನಾವು ತರುವುದಿಲ್ಲ, ನಾವು ತಂದ ಜನರಿಗೆ ಭಾಷಣ ಮಾಡುವುದಿಲ್ಲ. ಕುಮಾರಸ್ವಾಮಿಯವರೇ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ. ದೇವೆಗೌಡರು ಜೀವಂತವಾಗಿ ಇರುವಾಗಲೇ ರೈತರಿಗಾಗಿ ಇರುವ ಕಾರ್ಯಕ್ರಮ ಈಡೇರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಒಬ್ಬರನ್ನೊಬ್ಬರು ಬೈಯುತ್ತಿದ್ದಾರೆ. ನಲವತ್ತು ಪರ್ಸೆಂಟ್ ಇವರು, ಇಪ್ಪತ್ತು ಪರ್ಸೆಂಟ್ ಅವರು. ರಾಹುಲ್ ಗಾಂಧಿ ನಡೆದುಕೊಂಡು ಬಂದರು, ನಡೆದುಕೊಂಡು ಹೋದರು, ಆದರೆ ಏನು ಸಂದೇಶ ಕೊಟ್ಟರು? ನಾವು ಕಾಂಗ್ರೆಸ್‌ಗೂ ಬೈಯುತ್ತಿಲ್ಲ, ಬಿಜೆಪಿಗೂ ಬೈಯುತ್ತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಅಂತಾ ಹೇಳುತ್ತಿದ್ದೇವೆ. ನಿಮಗೆ ಕೊಟ್ಟ ಭರವಸೆ ಐದು ವರ್ಷದಲ್ಲಿ ಈಡೇರಿಸದಿದ್ದರೆ, ರಾಜೀನಾಮೆ ನೀಡಿ ನಿಮ್ಮ ಮುಂದೆ ಬರುವುದಿಲ್ಲ ಅಂತಾ ಹೇಳುತ್ತಿದ್ದೇವೆ. ಅವರಿಗೆ ಅನೇಕ ಸಲ ಅಧಿಕಾರ ಕೊಟ್ಟಿದೀರಿ ನಮಗೆ ಒಂದು ಸಲ ಅಧಿಕಾರ ಕೊಡಿ ಅಂತಾ ಕೇಳುತ್ತಿದ್ದೇವೆ. ಜಿಲ್ಲೆ, ಜಿಲ್ಲೆಯಲ್ಲಿ ಫೈನಲ್ ಆಗಿದ್ದವರೇ ನಮ್ಮ ಅಭ್ಯರ್ಥಿಗಳು. ನಮ್ಮಲ್ಲಿ ಹೈಕಮಾಂಡ್‌ಗೆ ಬ್ಯಾಗ್ ಕೊಡಬೇಕಾಗಿಲ್ಲ, ಚೀಲ ಕೊಡಬೇಕಾಗಿಲ್ಲ ಎಂದು ಅವರು ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ವ್ಯಂಗ್ಯವಾಡಿದ್ದಾರೆ.
ಪoಚರತ್ನ ಕಾರ್ಯಕ್ರಮವನ್ನು ಜೆಡಿಎಸ್ ಪಕ್ಷ ಆರಂಭಿಸಲಿದೆ. ಎಲ್‌ಕೆಜಿಯಿಂದ ಪಿಜಿವರೆಗೂ ಉಚಿತ ಶಿಕ್ಷಣ, ಪ್ರತಿ ಪಂಚಾಯಿತಿಯಲ್ಲಿ ಹೈಟೆಕ್ ಆಸ್ಪತ್ರೆಗಳು, ಪ್ರತಿಯೊಬ್ಬರಿಗೂ ವಾಸಿಸಲು ಮನೆ, ರಾಜ್ಯದ ಎಲ್ಲಾ ನೀರಾವರಿ ಯೋಜನೆ ಪೂರ್ಣ, ಮಹಿಳಾ ಸಬಲೀಕರಣ ಈ ಎಲ್ಲ ಯೋಜನೆಗಳನ್ನು ಜೆಡಿಎಸ್ ಅಧಿಕಾರಕ್ಕೆ ಬಂದ ಐದು ವರ್ಷದಲ್ಲಿಯೇ ಈಡೇರಿಸುತ್ತೇವೆ ಭರವಸೆ ನೀಡಿದ್ದಾರೆ. ಇoದು ನಾಳೆ ಬೆಳಗಾವಿ, ಚಿಕ್ಕೋಡಿಯಲ್ಲಿ ಕಾರ್ಯಕರ್ತರ ಜೊತೆಗೆ ಸಭೆ ನಡೆಸುತ್ತಿದ್ದೇವೆ. ಮರಾಠ ಮತ್ತು ಲಿಂಗಾಯತ ಸಮಾಜದ ಜನರನ್ನು ನಮ್ಮೊಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ಟಿಕೆಟ್ ಹಂಚಿಕೆಯಲ್ಲಿ ಮರಾಠ, ಲಿಂಗಾಯತ, ಹಿಂದೂಳಿದವರಿಗೆ ಪ್ರಾಮುಖ್ಯತೆ ಕೊಡುತ್ತೇವೆ ಎಂದು ಸಿ ಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.