1075 ಕೋಟಿಗಳ ಬೃಹತ್ ಅನುದಾನ ತಂದವನು ಬಿಲ್ಡಪ್ ಕೊಟ್ಟೆ ಕೊಡ್ತಾನೆ | ಪುತ್ತೂರು ಶಾಸಕ ಸಂಜೀವ ಮಠಂದೂರು ಹೆಮ್ಮೆಯ ಹೇಳಿಕೆ !

ಪುತ್ತೂರು ಶಾಸಕ ಸಂಜೀವ ಮಠಂದೂರು ಮೊನ್ನೆ ಗರಂ ಆಗಿದ್ದರು. ಸದಾ ಶಾಂತವಾಗಿ ವರ್ತಿಸುವ ಅವರು ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಕಾಂಗ್ರೆಸ್ ಗೆ ಮಾತಿನಲ್ಲೇ ಸರಿಯಾಗಿ ಚಾಟಿ ಬೀಸಿದೆ ಹೊಡೆದಿದ್ದಾರೆ.
ನಮ್ಮ ಹಿಂದಿನ ಶಾಸಕರು ಮತ್ತು ಬಾಕಿ ಜನಪ್ರತಿನಿಧಿಗಳು ಎಲುಬಿಲ್ಲದ ನಾಲಗೆಯಲ್ಲಿ ಏನು ಬೇಕಾದರೂ ಮಾತನಾಡುವಂತಹ ಕೆಲಸ ಮಾಡುತ್ತಿದ್ದಾರೆ ಅಂದು ಅವರು ಬೇಸರದ ಜತೆಗೆ ಆಕ್ರೋಶ ಹೊರಹಾಕಿದ್ದಾರೆ.

ಇದೆಲ್ಲಾ ಶುರುವಾದದ್ದು ‘ ಸಂಜೀವ ಮಠಂದೂರು ಅವರು ಬಿಲ್ಡಪ್ ಕೊಟ್ಟು ಕೊಂಡು ಬರ್ತಿದ್ದಾರೆ ‘ ಎಂಬ ಮಾಜಿ ಶಾಸಕರೊಬ್ಬರ ಮಾತು.

” ಸಂಜೀವ ಮಠ0ದೂರು ಬಿಲ್ಡಪ್ ಕೊಡುವ ವ್ಯಕ್ತಿ ಅಂತ ಹೇಳ್ತಾ ಇದ್ರು. ಒಬ್ಬ ಗಂಡಸು ಯಾವಾಗಲೂ ಬಿಲ್ಡಪ್ ಕೊಡುತ್ತಾನೆ. ಕೆಲಸ ಮಾಡಿ ತೋರಿಸಿದವರು ಬಿಲ್ಡಪ್ ಕೊಡದೆ ಇನ್ನೇನು ಕೊಡ್ತಾರೆ ? ನಾನು ಈ ಕ್ಷೇತ್ರದಲ್ಲಿ ಹಿಂದೆ ಎಂದು ಆಗದರುವಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ. ಅದೇ ಕಾರಣಕ್ಕೆ ಹೆಮ್ಮೆಯಿಂದ ನಾನು ಬಿಲ್ಡಪ್ ಕೊಡಬಲ್ಲೆ ” ಎಂಬ ಅರ್ಥದಲ್ಲಿ ಕಾಂಗ್ರೆ್ಸಿಗರಿಗೆ ಟಾಂಗ್ ನೀಡಿದ್ದಾರೆ. ನಂತರ ಅವರು ಮಾತನಾಡಿ ಪುತ್ತೂರಿನಲ್ಲೂ ಇತ್ತೀಚಿಗೆ ಕಂಡ ಅಭಿವೃದ್ಧಿಗಳ ದೊಡ್ಡಪಟ್ಟಿ ನೀಡಿದ್ದಾರೆ.

ನಾನು ಸಂಸದರ ಜೊತೆ ಸೇರಿ 51 ಕೋಟಿ 96 ಲಕ್ಷ ರೂಪಾಯಿಯ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿ ಬಂದಿದ್ದೇವೆ. ಇಲ್ಲಿ ಇವತ್ತು 1 ಕೋಟಿ 7 ಲಕ್ಷ ರೂಪಾಯಿಯ, 40 ವರ್ಷದ ಬೇಡಿಕೆಯನ್ನು ಈಡೇರಿಸಲು ಕೆಲಸ ಮಾಡುತ್ತಿದ್ದೇವೆ. ಸಂಸದರು ಡಬಲ್ ಇಂಜಿನ್ ಸರ್ಕಾರ ಎಂದು  2-3 ಬಾರಿ ಹೇಳಿದ್ದಾರೆ. ಡಬಲ್ ಇಂಜಿನ್ ಸರ್ಕಾರಕ್ಕೆ ಮಾತ್ರ ಸಾಧ್ಯ, ಬೇರೆ ಯಾರಿಗೂ ಇದು ಸಾಧ್ಯವಿಲ್ಲ. ಹಾಗಾಗಿ ಆ ಕೆಲಸ ಇವತ್ತು ಮಾಡುತ್ತಿದ್ದೇವೆ ಎಂದಿದ್ದಾರೆ.

ಪುತ್ತೂರಿಗೆ 130 ಕೋಟಿಯ ಜಲ ಯೋಜನೆ ಹಾಗೂ ಬಿಳಿಯೂರಲ್ಲಿ 55 ಕೋಟಿಯ ಡ್ಯಾಮ್ ಕಟ್ಟಿದ್ದೇವೆ. ಇವತ್ತು 51 ಕೋಟಿ 96 ಲಕ್ಷದ ರಹಸ್ಯ ಹೆದ್ದಾರಿಯ ತಿರುವು ರಸ್ತೆ , ಬ್ರಿಡ್ಜ್ ಗಳನ್ನು ಮತ್ತೆ ನವೀಕರಣ ಮಾಡುತ್ತಿದ್ದೇವೆ. ಅಷ್ಟೇ ಅಲ್ಲದೆ ಪುತ್ತೂರು ನಗರ ಸಭೆಗೆ 33 ಕೋಟಿ, ವಿಟ್ಲ ಪಂಚಾಯತ್ ಗೆ 5 ಕೋಟಿ, 38 ಕೋಟಿ ನಗರೋತ್ತರದಿಂದ ದುಡ್ಡು ತಂದಿದ್ದೇವೆ. ಇವತ್ತಿನ ಪುತ್ತೂರಿನ ಎಲ್ಲಾ ರಸ್ತೆಗೆ ಪ್ರಧಾನ ಮಂತ್ರಿ ಸಡಕ್ ರಸ್ತೆ 60 ಕೋಟಿಯಲ್ಲಿ, ವಿಶೇಷ ಅನುದಾನ 100 ಕೋಟಿಯಲ್ಲಿ , ಇವತ್ತು ಕುಡಿಯುವ ನೀರಿಗಾಗಿ ಜಲಧಾರೆಯಲ್ಲಿ, ಜೆಜೆಎಮ್ ಅಲ್ಲಿ 70 ಕೋಟಿ ಅನುದಾನ ತರುವ ಕೆಲಸ ಮಾಡಿದ್ದೇವೆ.

ಈ ಅನುದಾನ ಕೊಟ್ಟ ಶಾಸಕ ಬಿಲ್ಡಪ್ ಕೊಡದೆ ಮತ್ತೇನು ಮಾಡಬೇಕು. ನಿಮಗೆ ಸಹಿಸಿಕೊಳ್ಳಲು ಆಗಿದೆ ಇದ್ದರೆ ಬಹುಶಃ ಬಾಯಿಮುಚ್ಚಿ ಕುಳಿತುಕೊಳ್ಳಿ. ನಿಮಗೆ ಈ ಕೆಲಸ ಮಾಡಲಿಕ್ಕೆ ಆಗಲಿಲ್ಲ ಎಂದು ಒಪ್ಪಿಕೊಳ್ಳಿ ಅದು ಬಿಟ್ಟು ಯಾವುದೋ ರಸ್ತೆಯಲ್ಲಿ ನಿಂತು ಈ ರೀತಿಯ ಹೇಳಿಕೆ ಕೊಡುವುದು ನಿಮಗೆ ಯಾರಿಗೂ ಶೋಭೆ ತರುವುದಿಲ್ಲ ಎಂದಿದ್ದಾರೆ.

40 – 50 ವರ್ಷ ಆಗದ್ದನ್ನು ಪುತ್ತೂರು ಕಳೆದ 4.5 ವರ್ಷದಲ್ಲಿ ಸಾಧಿಸಿದೆ. ಇವತ್ತು ಎಪಿಎಂಸಿ ಯ ಆ ಒಂದು ಅಂಡರ್ ಪಾಸ್ ಹಾಗೂ 40 ವರ್ಷದ ಹಾರಾಡಿ ಸೇತುವೆ ಇವತ್ತು ಆಗುತ್ತಿದೆ. ಪುತ್ತೂರು, ಉಪ್ಪಿನಂಗಡಿ ರಸ್ತೆ ಇವತ್ತು ಸಂಜೀವ ಮಠಂದೂರು ಬಂದ ಮೇಲೆ 25 ಕೋಟಿ ಇಟ್ಟು ಚತುಷ್ಪಥ ರಸ್ತೆಯಾಗಿ ಮಾಡುತ್ತಿದ್ದೇವೆ. ಈ ಎಲ್ಲಾ ಕಾಮಗಾರಿ ಆಗಬೇಕಿದ್ದರೆ ಅದಕ್ಕೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ , ಬಸವರಾಜ್ ಬೊಮ್ಮಾಯಿ, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮತ್ತು ಹೆಮ್ಮೆಯ ಸಂಸದ ನಳಿನ್ ಕುಮಾರ್ ಕಟೀಲ್ ಇವರು ಕಾರಣರಾಗಿದ್ದಾರೆ.

ಇವತ್ತು ಪುತ್ತೂರಿನಲ್ಲಿ ಸುಮಾರು 1075 ಕೋಟಿ ರೂಪಾಯಿಯ ಅನುದಾನದಲ್ಲಿ ಕಾಮಗಾರಿಗಳಾಗುತ್ತಿದೆ. ಪಕ್ಕದಲ್ಲಿ 51 ಕೋಟಿ ರೂಪಾಯಿಯ ಕೋರ್ಟ್ ಕಟ್ಟಡ ಇನ್ನು ಕೆಲವೇ ದಿನಗಳಲ್ಲಿ ಆಗಲಿದೆ. ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ, ರಾಜ್ಯದ ಮುಖ್ಯಮಂತ್ರಿ ಇವರು ಈ ಕಾರ್ಯ ನೆರವೇರಿಸುತ್ತಾರೆ. ಅದೇರೀತಿ ವಿಶೇಷವಾಗಿ ಹಾರಾಡಿಯಲ್ಲಿ  ಇನ್ನೊಂದು ರೈಲ್ವೇ ಸೇತುವೆ ಆಗಬೇಕು ಅದರ ಬಗ್ಗೆ ಚರ್ಚೆ ನಡೆದಿದೆ. ಎಲ್ಲಾ ಬ್ರಿಡ್ಜ್ ಗಳನ್ನು 2,3 ವರ್ಷದಲ್ಲಿ ಪೂರ್ತಿಗೊಳಿಸುತ್ತೇವೆ.  ಸಬ್ ಕಾ ಸಾತ್ , ಸಬ್ ಕಾ ವಿಕಾಸ್ , ಎಲ್ಲರನ್ನೂ ವಿಶ್ವಾಸದಲ್ಲಿ ಕೊಂಡೊಯ್ಯುವ ಕೆಲಸ ಪುತ್ತೂರಿನ ವಿಧಾನಸಭಾ ಕ್ಷೇತ್ರದಲ್ಲಿ ಆಗುತ್ತಿದೆ.

ಇವ ನಾರವ, ಇವ ನಾರವ ಎನ್ನದೆ ಇವೆ ನಮ್ಮವ, ಇವ ನಮ್ಮವ ಎಂದು ನಮ್ಮ ಸಂಸದರು ಹೇಳುತ್ತಾರಲ್ಲ, ಆ ರೀತಿಯಾಗಿ ಹೇಳಿದ ಪರಿಣಾಮ ಸತೀಶ್ ನಾಯ್ಕ್, ಲೋಕೇಶ್ ಹೆಗ್ಡೆ, ಗೋಪಾಲಕೃಷ್ಣ ಭಟ್ ಹಾಗೂ ಸ್ವರ್ಣಲತಾ ಹೆಗ್ಡೆ ನಮ್ಮ ಜೊತೆಗಿದ್ದಾರೆ. ಇದನ್ನು ಸಹಿಸಿಕೊಂಡು ಬಾಕಿಯವರು ಮಾತಾಡಿ ಎಂದು ಮಾತಿನಲ್ಲಿ ಹಾಗೂ ಕೆಲಸದಲ್ಲಿ ಕಾಂಗ್ರೆಸ್ ಗೆ ಬಿಸಿ ಮುಟ್ಟಿಸಿದ್ದಾರೆ.

Leave A Reply

Your email address will not be published.