ಮುಖ್ಯಮಂತ್ರಿಯನ್ನು ಕಾರಿಗೆ ಹತ್ತಿಸದ ಪ್ರಧಾನಿ | ಕಾಂಗ್ರೆಸ್ ನಾಯಕರ ವ್ಯಂಗ್ಯ
ಪ್ರಧಾನಿ ನರೇಂದ್ರ ಮೋದಿ ಅಂದ್ರೆ ಆ ಹೆಸರಿಗೆ ಒಂದು ಗೌರವ ಇದೆ. ಎಲ್ಲಾ ವಿಚಾರಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವ ಮೋದಿ. ಇದೆಂತಹ ಚರ್ಚೆಗೆ ಕಾರಣರಾದರೂ ಅಲ್ಲವೇ !
ಗುಜರಾತ್ ನ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಅಲ್ಲಿನ ಮುಖ್ಯಮಂತ್ರಿಯಾದ ಭೂಪೇಂದ್ರ ಪಟೇಲ್ ಅವರನ್ನು ತನ್ನ ಕಾರಿಗೆ ಹತ್ತಲು ಬಿಡದೆ, ಸ್ವಲ್ಪ ದೂರ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ಗುಜರಾತ್ ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಜನರಿಗೆ ಕೈ ಬೀಸಿ ನಂತರ ಕಾರನ್ನು ಹತ್ತಲು ಪ್ರಯತ್ನಿಸಿದ್ದಾರೆ. ಈ ಸಮಯದಲ್ಲಿ ಸಿಬ್ಬಂದಿ ಕಾರಿನ ಡೋರ್ ತೆಗೆದು ಪಟೇಲ್ ಅವರನ್ನು ಹತ್ತಿಸಲು ಮುಂದಾಗಿದ್ದಾರೆ. ಆದರೆ ಕಾರನ್ನು ನಿಲ್ಲಿಸದೇ ಮುಂದಕ್ಕೆ ಕೊಂಡೊಯ್ಯಲಾಗಿದೆ. ಚಲಿಸುತ್ತಿರುವ ಕಾರಿನ ಜೊತೆಗೆ ಪಟೇಲ್ ಅವರು ಸ್ವಲ್ಪ ದೂರ ವೇಗವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋ ಮೂಲಕ ಸೆರೆಯಾಗಿದೆ.
ವಿರೋಧ ಪಕ್ಷದ ವಿರುದ್ಧ ಮಾತೆತ್ತಲು ಎಲ್ಲಿ ಏನು ಸಿಗುತ್ತದೆ ಎಂದು ಕಾಯುವ ಪಕ್ಷದವರು, ಈ ಬಾರಿ ಕಾಂಗ್ರೆಸ್ ನಾಯಕರು ಚೆನ್ನಾಗಿಯೇ ವಿಷಯವನ್ನು ಬಳಸಿಕೊಂಡು , ‘ಗುಜರಾತ್ ಮುಖ್ಯಮಂತ್ರಿ ಹೆಸರು ನೆನಪಾಗುತ್ತಿಲ್ಲವೇ? ಗೂಗಲ್ ಮಾಡಿ ನೋಡಿ, ಗೂಗಲ್ ಸಿಎಂ ಹೆಸರನ್ನು ಹೇಳುತ್ತದೆ. ಅವರೇ ಅಲ್ಲಿರುವ ವಿಡಿಯೊದಲ್ಲಿ ಕಾರಿನೊಳಗೆ ಕೂರಲು ಪ್ರಯತ್ನಿಸುತ್ತಿರುವುದು. ಗಾಡಿ ಯಾರದ್ದು? ನಿಮಗೆ ತಿಳಿದಿದೆಯೇ?’ ಎಂದು ವ್ಯಂಗ್ಯವಾಡಿದ್ದಾರೆ