ಮಂಗಳೂರು : ದೀಪಾವಳಿಯ ಭರ್ಜರಿ ಆಫರ್ ಗೆ ಮಾರುಹೋದ ವ್ಯಕ್ತಿ | ಗೇಮಿಂಗ್ ಲ್ಯಾಪ್ ಟಾಪ್ ಆರ್ಡರ್ ಮಾಡಿದವನಿಗೆ ಬಂದಿದ್ದು ಏನು ಗೊತ್ತೇ?
ಮಂಗಳೂರು: ಹಬ್ಬದ ಸಂದರ್ಭದಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ವಿವಿಧ ಇ- ಕಾಮರ್ಸ್ ಜಾಲತಾಣಗಳು ತಮ್ಮಲ್ಲಿ ಮಾರಾಟವಾಗುವ ನಾನಾ ಪರಿಕರಗಳ ಮೇಲೆ ನಾನಾ ರೀತಿಯ ಆಫರ್ ಗಳು, ರಿಯಾಯಿತಿಗಳನ್ನು ನೀಡುತ್ತದೆ. ಇ ಕಾಮರ್ಸ್ ನಲ್ಲಿ ಈ ದೀಪಾವಳಿಯಲ್ಲಂತೂ ಭರ್ಜರಿ ಆಫರ್ ಗಳು, ರಿಯಾಯಿತಿಗಳು, ಆಕರ್ಷಕ ಡಿಸ್ಕೌಂಟ್ ಗಳು ದೊರೆಯುತ್ತದೆ. ಆದರೆ, ಇದರ ನಡುವೆಯೇ, ಈ ಆಫರ್ ಗಳಿಗೆ ಮಾರುಹೋಗಿರುವ ಕೆಲವು ಗ್ರಾಹಕರು ಮೋಸ ಹೋಗಿದ್ದಾರೆ (Online fraud).
ಇಂಥದ್ದೇ ಒಂದು ಘಟನೆ ಮಂಗಳೂರಿನ ಓರ್ವ ವ್ಯಕ್ತಿಗೆ ಆಗಿದೆ. ಚಿನ್ಮಯ ರಮಣ ಎಂಬುವರು ಜನಪ್ರಿಯ ಇ-ಕಾಮರ್ಸ್ ಜಾಲತಾಣವೊಂದರಲ್ಲಿ ತಮ್ಮ ಸ್ನೇಹಿತರೊಬ್ಬರಿಗಾಗಿ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದರು. ಅವರು ಆರ್ಡರ್ ಮಾಡಿದ್ದು ಗೇಮಿಂಗ್ ಲ್ಯಾಪ್ ಟಾಪ್. ಎಲ್ಲರಿಗೂ ತಿಳಿದಿರುವ ಹಾಗೇ, ಸಹಜವಾಗಿ ಗೇಮಿಂಗ್ ಲ್ಯಾಪ್ ಟಾಪ್ ಗಳು ಸಾಮಾನ್ಯ ಲ್ಯಾಪ್ ಟಾಪ್ ಗಳಿಗಿಂತ ಹೆಚ್ಚಿನ ರ‍್ಯಾಮ್ ಹಾಗೂ ಸಂಗ್ರಹಣ ಸಾಮರ್ಥ್ಯ, ಹೈ ಪವರ್ ಹೊಂದಿರುವ ಪ್ರಾಸೆಸರ್ ಗಳನ್ನು ಹೊಂದಿರುತ್ತವೆ.
ಇಷ್ಟು ಮಾತ್ರವಲ್ಲ, ಗೇಮಿಂಗ್ ಲ್ಯಾಪ್ ಗಳ ಬೆಲೆಯೂ ಹೆಚ್ಚೇ ಆಗಿರುತ್ತದೆ. ಹೆಚ್ಚಾಗಿರುತ್ತದೆ. ಹಾಗಾಗಿ, ಈ ಗೇಮಿಂಗ್ ಲ್ಯಾಪ್ ಟಾಪ್ ಗಾಗಿ ಚಿನ್ಮಯ ಅವರು ಹೆಚ್ಚಿನ ಮೊತ್ತವನ್ನೂ ಆನ್ ಲೈನ್ ಮೂಲಕ ಪಾವತಿಸಿದ್ದಾರೆ. ನಂತರ ಹೊಸ ಲ್ಯಾಪ್ ಟಾಪ್ ಗಾಗಿ ಕಾಯಲಾರಂಭಿಸಿದ್ದರು. ಅವರು ಆರ್ಡರ್ ಮಾಡಿದ್ದು ಏಸಸ್ ಕಂಪನಿಯ ಗೇಮಿಂಗ್ ಲ್ಯಾಪ್ ಟಾಪ್.
ಆರ್ಡರ್ ಮಾಡಿದ ಕೆಲವೇ ದಿನದಲ್ಲಿ ಇ-ಕಾಮರ್ಸ್ ಕಂಪನಿಯಿಂದ ಬಾಕ್ಸ್ ಒಂದು ಅವರ ಮನೆಗೆ ಬಂದಿದೆ. ಬಾಕ್ಸ್ ತೆಗೆದು ನೋಡಿದಾಗ ಚಿನ್ನಯ್ ಅವರಿಗೆ ಇದೇನು ಎಂಬಂತೆ ಶಾಕ್ ಆಗಿದೆ. ಏಕೆಂದರೆ, ಅದರಲ್ಲಿ ಇದ್ದಿದ್ದು ಕಲ್ಲು ಮತ್ತು ಕಸ!
ತಕ್ಷಣವೇ ಅವರು ತಾವು ಆರ್ಡರ್ ಮಾಡಿದ್ದ ಇ-ಕಾಮರ್ಸ್ ಜಾಲತಾಣದ ಗ್ರಾಹಕರ ಕುಂದುಕೊರತೆ ವಿಭಾಗಕ್ಕೆ (customer care) ಫೋನಾಯಿಸಿ, ತಮಗಾಗಿರುವ ಮೋಸವನ್ನು ವಿವರಿಸಿದ್ದಾರೆ.
ತಕ್ಷಣವೇ ಎಚ್ಚೆತ್ತುಕೊಂಡ ಆ ಸಂಸ್ಥೆ, ಚಿನ್ಮಯ್ ಅವರಿಗೆ ಅವರು ಲ್ಯಾಪ್ ಟಾಪ್ ಗಾಗಿ ಪಾವತಿಸಿದ್ದ ಪೂರ್ತಿ ಹಣವನ್ನು ಮರುಪಾವತಿ ಮಾಡಿದೆ. ಸರಿ, ಇವರಿಗೆ ಹಣವೇನೋ ಬಂತು. ಆದರೆ, ಲ್ಯಾಪ್ ಟಾಪ್ ನ ಅಗತ್ಯತೆ ಮಾತ್ರ ಪೂರೈಕೆಯಾಗಲಿಲ್ಲ. ಇಡೀ ವಿದ್ಯಮಾನವನ್ನು ಅವರು, ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಆನ್ಲೈನ್ ಮೋಸದ ಜಾಲಕ್ಕೆ ಇನ್ನೆಷ್ಟು ಜನ ಬೀಳುತ್ತಾರೋ ಗೊತ್ತಿಲ್ಲ.