ಹುಡುಗಿಯನ್ನು ಮೆಚ್ಚಿಸಲು ಮೊದಲ ಚಾಟಿಂಗ್ ‌ನಲ್ಲೇ ಇಂಪ್ರೆಸ್ ಮಾಡೋ ಮಾರ್ಗಗಳು ಯಾವುದು ? ಇಲ್ಲಿದೆ ಉತ್ತರ!

ಹುಡುಗಿಯರೊಂದಿಗೆ ಮೊದಲ ಬಾರಿಗೆ ಮಾತನಾಡುವಾಗ ಅಥವಾ ಸ್ನೇಹ ಬೆಳೆಸುವಾಗ, ಸ್ವಲ್ಪ ಹಿಂಜರಿಯುವುದು ಅಥವಾ ಏನು ಮಾತಾಡಬೇಕು ಎಂದು ತಿಳಿಯದೇ ಮೌನವಾಗಿ ಇರುವವರು ಜಾಸ್ತಿ. ಇಲ್ಲಿ ನಾವು ನಿಮಗೆ ಕೇವಲ ಮೆಸೇಜ್ ಮಾಡೋ ಮೂಲಕ ಹುಡುಗಿಯನ್ನು ಇಂಪ್ರೆಸ್ ಮಾಡೋದು ಹೇಗೆ ಎಂಬುವುದನ್ನು ತಿಳಿಯೋಣ ಬನ್ನಿ.

 

ಫಸ್ಟ್ ಟೈಮ್ ಡೇಟ್ ಮಾಡುವಾಗ ನೀವು ಸ್ವಲ್ಪ ಉದ್ವಿಗ್ನತೆ ಮತ್ತು ಆತಂಕವನ್ನು ಅನುಭವಿಸುವುದು ತುಂಬಾ ಸಾಮಾನ್ಯ. ಕೆಲವೊಮ್ಮೆ ನಿಮ್ಮ ಮಾತುಗಳಿಂದ ಅವರು ಚಾಟ್ ಮಾಡೋದನ್ನೇ ಬಿಡಬಹುದು ಅಥವಾ ಬ್ಲಾಕ್ ಮಾಡಲೂ ಬಹುದು. ಆದ್ದರಿಂದ ಚಾಟ್ ಮಾಡುವಾಗ ನೀವು ತುಂಬಾನೆ ಹುಷಾರಾಗಿರೋದು ಮುಖ್ಯ.

ಚಾಟ್ ಸಮಯದಲ್ಲಿ ಹುಡುಗಿಯರು ಮಾತಾಡಲು ಬಿಡಿ. ಅವರನ್ನು ಹೀಯಾಳಿಸುವುದು ಅಥವಾ ಅವರು ಏನನ್ನಾದರೂ ಹೇಳಲು ಬಂದರೆ ತಡೆಯುವುದು ಮಾಡಬೇಡಿ. ನೀವು ಆ ರೀತಿ ಮಾಡಿದರೆ ಅವರು ಮಾತನಾಡಲು ಹಿಂಜರಿಯುತ್ತಾರೆ. ಹಾಗಾಗಿ ಅವರಿಗೆ ಸಂಪೂರ್ಣವಾಗಿ ಮಾತನಾಡಲು ಅವಕಾಶ ನೀಡಿ, ನೀವು ಸುಮ್ಮನೆ ಅವರು ಹೇಳೋದನ್ನು ತಾಳ್ಮೆಯಿಂದ ಕೇಳಿ.

ಹಾಗೆನೇ, ಎಂಟರ್ಟೇನೆಂಟ್ ವಿಷಯಗಳ ಬಗ್ಗೆ ಮಾತನಾಡಿದರೆ ಉತ್ತಮ. ಹೌದು, ಹುಡುಗಿಯೊಂದಿಗೆ ಚಾಟ್ ಮಾಡುವಾಗ, ಏನು ಮಾತನಾಡೋದು ಎಂದು ಯೋಚಿಸುತ್ತಿದ್ದರೆ, ಮಾತನಾಡಲು ಉತ್ತಮ ವಿಷಯ ಏನೆಂದರೆ ಅದು ಎಂಟರ್ ಟೇನ್ ಮೆಂಟ್ ವಿಷಯ. ಹುಡುಗಿಯ ನೆಚ್ಚಿನ ಟಿವಿ ಶೋಗಳು ಅಥವಾ ಮನರಂಜನಾ ವಿಷಯಗಳ ಬಗ್ಗೆ ಮಾತನಾಡಿ ಹುಡುಗಿಯನ್ನು ಖುಷಿ ಪಡಿಸಬಹುದು.

ನೀವು ಮಾತನಾಡಲು ಬಯಸುವ ಹುಡುಗಿ ತನ್ನ ವೀಕೆಂಡ್ ನ್ನು ಹಾಸಿಗೆಯಲ್ಲಿ ಕಳೆಯಲು ಇಷ್ಟಪಡುತ್ತಾಳೆಯೇ, ಅಥವಾ ಸಾಹಸಿ ಪ್ರವೃತ್ತಿ ಹೊಂದಿದವಳೇ ಅಂದರೆ ಚಾರಣ ಈ ರೀತಿಯಾಗಿ ಇವನ್ನೆಲ್ಲಾ ಕಂಡುಹಿಡಿಯಲು ಪ್ರಯತ್ನಿಸಿ. ಅವಳು ಪ್ರಯಾಣಿಸಲು ಇಷ್ಟಪಡುತ್ತಿದ್ದರೆ, ನೀವು ಹೋದ ಎಲ್ಲಾ ಸ್ಥಳಗಳ ಬಗ್ಗೆ ಮಾತನಾಡಬೇಡಿ, ಬದಲಿಗೆ ಅವರು ಹೋದ ಸ್ಥಳಗಳ ಬಗ್ಗೆ ಅವರಿಗೆ ಮಾತನಾಡಲು ಬಿಡಿ.

ತಾಳ್ಮೆ ಮೂಲಕ ನಿಮ್ಮ ಮೊದಲ ಚಾಟ್ ನಲ್ಲಿ ಹುಡುಗಿಯನ್ನು ಇಂಪ್ರೆಸ್ ಮಾಡಬಹುದು.‌ ಹಾಗಾಗಿ ತಾಳ್ಮೆ ಇಲ್ಲಿ ಬಹುಮುಖ್ಯ. ಮುಖ್ಯವಾಗಿ ಅವರನ್ನು ಮಾತನಾಡಲು ಬಿಟ್ಟು, ನೀವು ತಾಳ್ಮೆಯಿಂದ (patiance) ಅದನ್ನು ಆಲಿಸುವುದು ಮುಖ್ಯ. ಇದರಿಂದ ಹುಡುಗಿಯರು ಹೆಚ್ಚು ಇಂಪ್ರೆಸ್ ಆಗ್ತಾರೆ.

ಚಾಟ್ ನ ಆರಂಭದಲ್ಲಿ ಹೆಚ್ಚಿನ ಪುರುಷರು ಮಾಡುವ ದೊಡ್ಡ ತಪ್ಪು ಏನೆಂದರೆ ತಮ್ಮ ಬಗ್ಗೆ ಸುಳ್ಳು ಹೇಳುವುದು. ಇದರಿಂದ ಸಮಸ್ಯೆ ಆಗುವುದೇ ಹೊರತು, ಲಾಭ ಅಂತೂ ಆಗಲ್ಲ. ಇದರಿಂದ ಮುಂದೆ ಸಮಸ್ಯೆಗಳೇ ಹೆಚ್ಚು. ಈ ಒಂದು ಸಣ್ಣ ಸುಳ್ಳು ನಂತರದ ವರ್ಷಗಳಲ್ಲಿ ದೊಡ್ಡ ಸಮಸ್ಯೆಗಳಾಗಿ ಬದಲಾಗಬಹುದು.ಆದ್ದರಿಂದ ಪ್ರಾಮಾಣಿಕ ಮಾರ್ಗವನ್ನು ಆರಿಸಿಕೊಂಡು ಸಂಬಂಧ ಮುಂದುವರೆಸಿದರೆ ಉತ್ತಮ. ವಿಭಿನ್ನ ವಿಷಯಗಳ ಬಗ್ಗೆ ಮಾತನಾಡಲು ಪ್ರಯತ್ನಿಸಿ, ಇದರಿಂದ ನಿಮ್ಮ ಹುಡುಗಿ ಇಂಪ್ರೆಸ್ ಆಗೋದು ಗ್ಯಾರಂಟಿ.

Leave A Reply

Your email address will not be published.