KSP : 1591 ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ನೇಮಕ: ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ, ಹೆಚ್ಚಿನ ವಿವರ ಇಲ್ಲಿದೆ
ರಾಜ್ಯ ಪೊಲೀಸ್ ಇಲಾಖೆಯಲ್ಲಿ 1137+454 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅಕ್ಟೋಬರ್ 20 ರಿಂದ ಆನ್ಲೈನ್ ಅರ್ಜಿ ಸ್ವೀಕಾರ ಆರಂಭಗೊಂಡಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಇತರೆ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನಂತೆ ನೀಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸ್ವೀಕಾರ ಆರಂಭ ದಿನಾಂಕ : 20-10-2022 ರ ಬೆಳಿಗ್ಗೆ 10 ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 21-11-2022ರ ಸಂಜೆ 06 ಗಂಟೆವರೆಗೆ,
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 23-11-2022
ಹುದ್ದೆಗಳ ವಿವರ :
ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ) (ಪುರುಷ) : 683
ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ) (ಮಹಿಳಾ) : 229
ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ) (ಪುರುಷ)
(ತೃತೀಯ ಲಿಂಗ) : 22
ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ) (ಮಹಿಳಾ)
(ತೃತೀಯ ಲಿಂಗ) : 10
ಸೇವಾನಿರತ ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ)
(ಪುರುಷ) : 134
ಸೇವಾನಿರತ ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ)
(ಮಹಿಳಾ) : 57
ಸೇವಾನಿರತ ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ) (ಪುರುಷ) (ತೃತೀಯ ಲಿಂಗ) : 1
ಸೇವಾನಿರತ ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ)
(ಮಹಿಳಾ) (ತೃತೀಯ ಲಿಂಗ) : 1
ಕಲ್ಯಾಣ ಕರ್ನಾಟಕ ಸಿವಿಲ್ ಪಿಸಿ ಹುದ್ದೆಗಳು : 454
ಒಟ್ಟು ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳು : 1591
ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಪಾಸ್, ಅಥವಾ
ತತ್ಸಮಾನ ವಿದ್ಯಾರ್ಹತೆ ಪಾಸ್ ಆಗಿರಬೇಕು. ಅಧಿಕೃತ ಬ್ಯಾಂಕ್ ಶಾಖೆಗಳ / ಅಂಚೆ ಕಛೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಸ ಬಹುದು.
ವಯೋಮಿತಿ : ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕ 21 11-2022 ಕ್ಕೆ ಅಭ್ಯರ್ಥಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ, ಇತರೆ ಅಭ್ಯರ್ಥಿಗಳಿಗೆ 25 ವರ್ಷ ಗರಿಷ್ಠ ವಯೋಮಿತಿ, ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ : ರೂ.23500-ರೂ.47650.
ತರಬೇತಿ : ನೇಮಕಾತಿ ಹೊಂದಿದ ಅಭ್ಯರ್ಥಿಗಳು ಡಿಜಿ ಮತ್ತು ಐಜಿಪಿ ರವರು ಕಾಲ ಕಾಲಕ್ಕೆ ನಿರ್ದಿಷ್ಟ ಪಡಿಸಿದ ಪೊಲೀಸ್ ತರಬೇತಿ ಶಾಲೆಗಳಲ್ಲಿ ಮೂಲ ತರಬೇತಿಯನ್ನು ಪಡೆಯಬೇಕು.
ತರಬೇತಿಯಲ್ಲಿ ನಿಗದಿಪಡಿಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
ಅನುತ್ತೀರ್ಣರಾದ ಅಭ್ಯರ್ಥಿಗಳನ್ನು ಸೇವೆಯಿಂದ ವಜಾಗೊಳಿಸಲಾಗುವುದು.