ಜಲಸಂಪನ್ಮೂಲ ಇಲಾಖೆಯಲ್ಲಿ ಉದ್ಯೋಗ | ವಿವಿಧ 169 ಹುದ್ದೆಗಳಿಗೆ ಅರ್ಜಿ ಆಹ್ವಾನ!!!
ಕೆಪಿಎಸ್ ಸಿ ಸಂಪನ್ಮೂಲ ಇಲಾಖೆಯಲ್ಲಿನ ಹೈದೆರಾಬಾದ್ ಕರ್ನಾಟಕ ವೃಂದದಲ್ಲಿನ ಗ್ರೂಪ್ ಸಿ ಕಿರಿಯ ಇಂಜಿನಿಯರ್ (ಸಿವಿಲ್), (ಮೆಕ್ಯಾನಿಕಲ್) ಹುದ್ದೆಗಳ ಭರ್ತಿಗೆ ಇದೀಗ ಕೆಪಿಎಸ್‌ಸಿ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.
ಜಲ ಸಂಪನ್ಮೂಲ ಇಲಾಖೆಯಲ್ಲಿನ 169 ಹೈದೆರಾಬಾದ್ ಕರ್ನಾಟಕ ವೃಂದದಲ್ಲಿನ ಗ್ರೂಪ್ ಸಿ ಕಿರಿಯ ಇಂಜಿನಿಯರ್ (ಸಿವಿಲ್), (ಮೆಕ್ಯಾನಿಕಲ್) ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಪ್ಲಿಕೇಶನ್ ಸಲ್ಲಿಸಲು ಪ್ರಾರಂಭಿಕ ದಿನಾಂಕ: 19-10-2022
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 17-11-2022
ಅಪ್ಲಿಕೇಶನ್ ಶುಲ್ಕವನ್ನು ಪಾವತಿಸಲು ಅಂತಿಮ ದಿನಾಂಕ: 18-11-2022
ನೇಮಕಾತಿ ಪ್ರಾಧಿಕಾರ : ಕರ್ನಾಟಕ ಲೋಕಸೇವಾ ಆಯೋಗ
ಉದ್ಯೋಗ ಇಲಾಖೆ : ಜಲ ಸಂಪನ್ಮೂಲ ಇಲಾಖೆ
ಹುದ್ದೆಗಳ ಹೆಸರು : ಕಿರಿಯ ಇಂಜಿನಿಯರ್ (ಗ್ರೂಪ್ ಸಿ)
ಹುದ್ದೆಗಳ ಸಂಖ್ಯೆ : 169
ಹುದ್ದೆಗಳ ವಿವರ
ಕಿರಿಯ ಇಂಜಿನಿಯರ್ (ಸಿವಿಲ್) : 166
ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್) : 03
ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ.600.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50.
ಎಸ್‌ಸಿ / ಎಸ್‌ಟಿ / ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ರೂ.35 ರ ಅರ್ಜಿ ಪ್ರಕ್ರಿಯೆ ಶುಲ್ಕವನ್ನು ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಪಾವತಿಸಬೇಕು.
ವೇತನ ಶ್ರೇಣಿ : ರೂ.33,450- 62,600.
ವಿದ್ಯಾರ್ಹತೆ
ಕಿರಿಯ ಇಂಜಿನಿಯರ್ (ಸಿವಿಲ್) : ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್.
ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್) : ಡಿಪ್ಲೊಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್.
ವಯೋಮಿತಿ: ಅರ್ಜಿ ಸಲ್ಲಿಕೆಗೆ ಕನಿಷ್ಠ 18 ವರ್ಷ ಪೂರೈಸಿರಬೇಕು.
ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ವಯೋಮಿತಿ.
ಎಸ್‌ಸಿ / ಎಸ್‌ಟಿ / ಪ್ರ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ