ಕೇವಲ 8 ನೇ ತರಗತಿ ಪಾಸ್ ಆದವರಿಗೆ 69000 ರೂಪಾಯಿ ಸಂಬಳ ಪಡೆಯುವ ಅವಕಾಶ | ಅರ್ಜಿ ಹಾಕಲು ಕೊನೆಯ ದಿನಾಂಕ ಗಮನಿಸಿ

Share the Article

ಯುವಕರಿಗೆ ಒಂದು ಭರ್ಜರಿ ಉದ್ಯೋಗಾವಕಾಶ ದೊರಕಿದೆ. ಕೇವಲ 8ನೇ ತರಗತಿ ಪಾಸ್‌ ಆಗಿದ್ರೆ ಸಾಕು, ಬರೊಬ್ಬರಿ 60 ಸಾವಿರ ಸಂಬಳ ಎಣಿಸಿ ಕೊಳ್ಳುವ ಉದ್ಯೋಗ ಪಡೆಯಬಹುದು. ಅಂತಹ ಅವಕಾಶ ಇದೀಗ ಒದಗಿ ಬಂದಿದೆ.

ಇದು ಡಿಫೆನ್ಸ್ ಸಂಬಂಧಿ ಜಾಬ್. ಸಿಆರ್‌ಪಿಎಫ್‌ ಇದೀಗ ತನ್ನ ಅಧೀಕೃತ ವೆಬ್ಸೈಟ್‌ನಲ್ಲಿ ನೇಮಕಾತಿ ಕುರಿತು ಅಧಿಸೂಚನೆ ಹೊರಡಿಸಿದೆ. ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಯುವಕರಿಗೆ ಸಿಆರ್‌ಪಿಎಫ್‌ನಲ್ಲಿ (CRPF) ಉತ್ತಮ ಅವಕಾಶವಿದೆ.

ಸಿಆರ್‌ಪಿಎಫ್ ನೇಮಕಾತಿ 2022 (CRPF Recruitment 2022) ಈ ನೇಮಕಾತಿಯಲ್ಲಿ ಭಾಗವಹಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು (CRPF) ನ ಅಧಿಕೃತ ವೆಬ್‌ಸೈಟ್ crpf.gov.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ವಿವರಗಳು:
ಸ್ಥಳ: ಬಿಜಾಪುರ್ : 128 ಹುದ್ದೆಗಳು
ದಂತೇವಾಡ :144 ಹುದ್ದೆಗಳು
ಸುಕ್ಮಾ : 128 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ- 400

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದಲ್ಲದೇ, ಅಭ್ಯರ್ಥಿಯು ಛತ್ತೀಸ್ಗಢದ ಸ್ಥಳೀಯ ಭಾಷೆಯನ್ನು ಬರೆಯುವ ಅಥವಾ ಮಾತನಾಡುವ ಜ್ಞಾನವನ್ನು ಇರಬೇಕು.

ದಿನಾಂಕ: ನೇಮಕಾತಿ ನಡೆಯುವ ದಿನಾಂಕ- ಅಕ್ಟೋಬರ್ 10 ರಿಂದ 22 ವರೆಗೆ ನೇಮಕಾತಿ ರ್ಯಾಲಿ ನಡೆಯಲಿದೆ.

ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 28 ವರ್ಷಗಳ ನಡುವೆ ಇರಬೇಕು.

ವೇತನ: ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ. 21,700 ಪ್ರಾರಂಭಿಕ ಸಂಬಳ ಇದ್ದು ಅಲ್ಲಿಂದ ರೂ. 69,100 ತನಕ ವೇತನ ನೀಡಲಾಗುತ್ತದೆ.

Leave A Reply