SSLC, PUC ಪಾಸಾದ ಅಭ್ಯರ್ಥಿಗಳೇ ಗಮನಿಸಿ | ಸರ್ಕಾರದಿಂದ ಪೈಲಟ್ ತರಬೇತಿಗೆ ಅರ್ಜಿ ಆಹ್ವಾನ
ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು. ಹೌದು ಈ ವಿದ್ಯಾರ್ಥಿಗಳಿಗೆ ಸಿಪಿಎಲ್ ತರಬೇತಿ ನೀಡಲಾಗುತ್ತಿದೆ. ಪಿಯುಸಿಯಲ್ಲಿ ಕಡ್ಡಾಯವಾಗಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಅಧ್ಯಯನವನ್ನು ಈ ತರಬೇತಿ ಪಡೆಯಲು ವಿದ್ಯಾರ್ಥಿಗಳು ಮಾಡಿರಬೇಕು. ಇನ್ನು ಪಿ.ಪಿ.ಎಲ್ ತರಬೇತಿಗೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸರ್ಕಾರಿ ವೈಮಾನಿಕ ತರಬೇತಿ ಶಾಲೆ, ಜಕ್ಕೂರು ವಿಮಾನ ನಿಲ್ದಾಣ ಬೆಂಗಳೂರು, ವಾಣಿಜ್ಯ ಪೈಲಟ್ ಲೈಸೆನ್ಸ್ ಹಾಗೂ ಖಾಸಗಿ ಪೈಲಟ್ ಲೈಸೆನ್ಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್‌ಸೈಟ್ dyes.karnataka.gov.in ಗೆ ಭೇಟಿ ನೀಡಬೇಕು. ಅನಂತರ ಅರ್ಜಿ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅರ್ಜಿ ಭರ್ತಿ ಮಾಡಿ ಅಂಚೆ ಮೂಲಕ ಅಥವಾ ನೇರವಾಗಿ ಅರ್ಜಿಗಳನ್ನು ಅರ್ಜಿ ಶುಲ್ಕದೊಂದಿಗೆ ದಿನಾಂಕ 31-10-2022 ರೊಳಗೆ ನಿರ್ದೇಶಕರು, ಸರ್ಕಾರಿ ವೈಮಾನಿಕ ತರಬೇತಿ ಶಾಲೆ, ಜಕ್ಕೂರು ವಿಮಾನ ನಿಲ್ದಾಣ, ಯಲಹಂಕ ಅಂಚೆ, ಬೆಂಗಳೂರು – 560064 ಇವರಿಗೆ ಕಳುಹಿಸಬೇಕು.
ಸುಮಾರು 20-25 ವಿದ್ಯಾರ್ಥಿಗಳಿಗೆ ಮಾತ್ರ ಸಿಪಿಎಲ್ (ಕಮರ್ಷಿಯಲ್ ಪೈಲಟ್ ಲೈಸನ್ಸ್ ) ಕೋರ್ಸ್‌ಗೆ ಪ್ರತಿ ಬ್ಯಾಚ್‌ಗೆ ಅವಕಾಶ ನೀಡಲಾಗುತ್ತದೆ. ಈ ಕೋರ್ಸ್‌ನ ಒಟ್ಟು ಅವಧಿ 24 ತಿಂಗಳು. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸುಮಾರು 200 ಗಂಟೆಗಳ ಕಾಲ ಕಡ್ಡಾಯ ತರಬೇತಿಯನ್ನು ನೀಡಲಾಗುತ್ತದೆ. ಪಿಪಿಎಲ್ (ಪ್ರೈವೆಟ್ ಪೈಲೆಟ್ ಲೈಸೆನ್ಸ್ ) ಕೋರ್ಸ್‌ನ ಅವಧಿ 12 ತಿಂಗಳಾಗಿದ್ದು, ಕನಿಷ್ಟ 40 ಗಂಟೆಗಳ ಹಾರಾಟದ ತರಬೇತಿಯನ್ನು ನೀಡಲಾಗುತ್ತದೆ.
ವಾಣಿಜ್ಯ ಪೈಲಟ್ ಲೈಸೆನ್ಸ್ ಹಾಗೂ ಖಾಸಗಿ ಪೈಲಟ್ ಲೈಸೆನ್ಸ್ ತರಬೇತಿಗಾಗಿ, ಸರ್ಕಾರಿ ವೈಮಾನಿಕ ತರಬೇತಿ ಶಾಲೆ, ಜಕ್ಕೂರು ವಿಮಾನ ನಿಲ್ದಾಣ ಬೆಂಗಳೂರು ಇವರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು ಇ-ಮೇಲ್ ವಿಳಾಸ gfts.kar@gmail.com ಅಥವಾ ದೂರವಾಣಿ ಸಂಖ್ಯೆ 080-29533178 ಗೆ ಸಂಪರ್ಕಿಸಬಹುದಾಗಿದೆ ಎಂದು ನಿರ್ದೇಶಕರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಜಕ್ಕೂರು, ಬೆಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.