Viral Video | ಪಿಜ್ಜಾ ಆರ್ಡರ್ ಮಾಡಿ, ಡೆಲಿವರಿ ಮಹಿಳೆಗೆ ದುಡ್ಡು ಪಾವತಿಸಿ ಪಿಜ್ಜಾ ತೆಗೆದುಕೊಂಡ ಚಿಂಪಾಂಜಿ !

ಚಿಂಪಾಂಜಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ಇಂಟರ್ನೆಟ್ ಬೆಚ್ಚಿಬಿದ್ದಿದ್ದಾರೆ.

ಈ ವಿಸ್ಮಯಕಾರಿ ವೀಡಿಯೋ ಕ್ಲಿಪ್ ಇದುವರೆಗೆ 17 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಮತ್ತು 2 ಲಕ್ಷ 50 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿದೆ.

ಚಿಂಪಾಂಜಿ ಒಂದು ಪಿಜ್ಜಾ ಆರ್ಡರ್ ಮಾಡಿದೆ. ಪಿಜ್ಜಾ ಡೆಲಿವರಿ ಮಹಿಳೆ ಪಿಜ್ಜಾದ ಬಾಕ್ಸ್ ಎತ್ತಿಕೊಂಡು ಮನೆಗೆ ಬಂದಿದ್ದಾಳೆ. ಕಾಲಿಂಗ್ ಬೆಲ್ ಒತ್ತಿದ ನಂತರ ಪಿಜ್ಜಾ ಪಡೆಯಲು ಹಣದ ಸಮೇತ ಪ್ರತ್ಯಕ್ಷ ಆಗಿದೆ ಚಿಂಪಾಂಜಿ. ಪಿಜ್ಜಾ ಪಡೆಯಲು ಪ್ರತಿಯಾಗಿ ಮಹಿಳೆಗೆ ಹಣ ಪಾವತಿಸುವುದನ್ನು ವಿದೇಳಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು.

ವೀಡಿಯೊದಲ್ಲಿ, ಪಿಜ್ಜಾ ಡೆಲಿವರಿಗೆ ಬಂದ ಮಹಿಳೆ ಮನೆಯ ಬಾಗಿಲು ಬಡಿಯುತ್ತಿದ್ದಂತೆ ಟಿ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿರುವ ಚಿಂಪಾಂಜಿ ಬಾಗಿಲು ತೆರೆದು ಹೊರ ಬಂದಿದೆ. ಈ ವೇಳೆ ಮೊದಲಿಗೆ ಮಹಿಳೆ ಗಾಬರಿಗೊಂಡ ಹಾಗೆ ಕಾಣಿಸುತ್ತಿದೆ. ಆದರೆ ಚಿಂಪಾಂಜಿ ಮಾತ್ರ ಮನುಷ್ಯರಂತೆ ಮಹಿಳೆಗೆ ದುಡ್ಡು ನೀಡಿ ಪಿಜ್ಜಾ ಬಾಕ್ಸ್ ಮಹಿಳೆಯ ಕೈಯಿಂದ ಪಡೆದು, ರಿವರ್ಸ್ ಗೆರಿನಲ್ಲಿ ಮನೆಯೊಳಗೆ ಹೋಗುವ ದೃಶ್ಯ ಕಂಡುಬಂದಿದೆ. ಇದೀಗ ಈ ವೀಡಿಯೋ ಗೆ ಇಂಟರ್ನೆಟ್ ಅಚ್ಚರಿಗೊಂಡಿದೆ.

https://twitter.com/i/status/1576922005865054209

Leave A Reply

Your email address will not be published.