ಕರಾವಳಿ ಬಿಜೆಪಿಯಲ್ಲಿ ತಲ್ಲಣ | ವಿಧಾನ ಸಭಾ ಚುನಾವಣೆಗೆ ಇಳಿಯುತ್ತಾ ‘ಹಿಂದೂ ಮಹಾ ಸಭಾ ‘ ?
ಕರಾವಳಿಯಲ್ಲಿ ಇನ್ನೊಂದು ವರ್ಷದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು ಇದೀಗ ಹಿಂದೂ ಮುಖಂಡರೊಬ್ಬರು ನೀಡಿದ ಹೇಳಿಕೆ ದೊಡ್ಡ ಸಂಚಲನ ಸೃಷ್ಟಿಸಿದೆ. ಹಿಂದುಗಳ ಓಟನ್ನು ಪಡೆದು ಗೆಲ್ಲುತ್ತಾ ಬಂದಿರುವ ಬಿಜೆಪಿಯ ದಾರಿಗೆ ಇದು ಮುಳ್ಳಾಗಿ ಚುಚ್ಚಲಿದೆಯಾ ? ಕಾರಣ ಹಿಂದೂ ಮಹಾಸಭಾ ಕರಾವಳಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದೆ !!
ಕರಾವಳಿ ಸಂಘಪರಿವಾರದ ಪ್ರಯೋಗಶಾಲೆ. ಇಲ್ಲಿ ಇಡೀ ಕರ್ನಾಟಕದಲ್ಲಿಯೇ ಅತಿ ಹೆಚ್ಚು ದೊಡ್ಡ ಓಟು ಬ್ಯಾಂಕ್ ಮತ್ತು ಡಿಪಾಸಿಟ್ ಇರುವುದು ಬಿಜೆಪಿಗೆ. ಅಲ್ಲಿ ಬಿಜೆಪಿ ಮತ್ತು ಸಂಘದ ಕ್ಯಾಡರ್ ಜೋರಾಗಿದೆ. ಅಲ್ಲಿ ಹೆಚ್ಚಿನ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದಾರೆ.
ಈ ನಡುವೆ ಬಿಜೆಪಿಯ ವಿರುದ್ದ ಹಿಂದೂ ಪರ ಕಾರ್ಯಕರ್ತರು ಮುನಿಸಿಕೊಂಡು ಕಿಡಿಕಾರುತ್ತಿದ್ದು, ಹಿಂದೂಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹತ್ಯೆ ಆಗುತ್ತಿದ್ದರೂ ಬಿಜೆಪಿ ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ ಅಂತ ಕಿಡಿಕಾರುತ್ತಿದ್ದಾರೆ.
ಈಗ ಅಖಿಲ ಭಾರತ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಅವರು ಈ ಬಾರಿ ಕರಾವಳಿ ಕರ್ನಾಟಕದಲ್ಲಿ ನಾವು ಕಣಕ್ಕೆ ಇಳಿಯಲಿದ್ದೇವೆ ಅಂತ ಹೇಳಿದ್ದಾರೆ.
ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡುವಾಗ ಅಖಿಲ ಭಾರತ ಹಿಂದೂ ಮಹಾಸಭಾ ನೇತಾರ ಧರ್ಮೇಂದ್ರ, ಈ ಬಾರಿ ಕರಾವಳಿ ಕರ್ನಾಟಕದಲ್ಲಿ ನಾವು ಚುನಾವಣೆಗೆ ಇಳಿಯಲಿದ್ದೇವೆ ಎಂದು ಹೇಳಿದ್ದಾರೆ. ಈಗ ಬಿಜೆಪಿಯಲ್ಲಿ ನಡುಕ ಹುಟ್ಟಿಕೊಂಡಿದೆ.