CET ಪರಿಷ್ಕೃತ RANK ಪಟ್ಟಿ ನಾಳೆ ಮಧ್ಯಾಹ್ನ ಪ್ರಕಟ :  ಅಶ್ವತ್ಥನಾರಾಯಣ ಘೋಷಣೆ

Share the Article

ಸಿಇಟಿ ( CET)  ಪರಿಷ್ಕೃತ ರಾಂಕಿಂಗ್ ಪಟ್ಟಿಯನ್ನು ಶನಿವಾರ (ಅಕ್ಟೋಬರ್ 1) ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ. ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ karresults.nic.in ನಲ್ಲಿ ನೋಡಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾಳೆ ಅಂದರೆ ಶನಿವಾರ (ಅಕ್ಟೋಬರ್ 1) ಮಧ್ಯಾಹ್ನ 2 ಗಂಟೆಗೆ kea.kar.nic.in ವೆಬ್ಸೈಟ್ ನಲ್ಲಿ  ಪರಿಷ್ಕೃತ ರಾಂಕಿಂಗ್ ಪಟ್ಟಿಯನ್ನು ನೋಡಬಹುದು. ಕೆಸಿಇಟಿ 2022 ರ ಫಲಿತಾಂಶವನ್ನು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದಾಗಿದೆ.

CET ಪರಿಷ್ಕೃತ ರಾಂಕಿಂಗ್ ಪರಿಶೀಲಿಸಲು ಹಂತಗಳು

ಮೊದಲಿಗೆ kea.kar.nic.in ಗೆ ಭೇಟಿ ನೀಡಿ.
ಕೆಸಿಇಟಿ ಪರಿಷ್ಕೃತ ಫಲಿತಾಂಶ 2022 ಲಿಂಕ್ ಮೇಲೆ ಕ್ಲಿಕ್ ಮಾಡಿ.
ನೋಂದಣಿ ಸಂಖ್ಯೆಯನ್ನು ನಮೂದಿಸಿ.
Submit ಮೇಲೆ ಕ್ಲಿಕ್ ಮಾಡಿ.
ಕರ್ನಾಟಕ ಸಿಇಟಿ ಪರಿಷ್ಕೃತ ರಾಂಕಿಂಗ್ 2022 ಪರದೆಯ ಮೇಲೆ ಕಾಣಿಸುತ್ತದೆ.
ನಂತರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

Leave A Reply

Your email address will not be published.