Post Office: ಅಂಚೆ ಕಚೇರಿಯಲ್ಲಿ ನೀವು ಖಾತೆ ಹೊಂದಿದ್ದೀರಾ? ದುಡ್ಡಿನ ವಹಿವಾಟಿನ ಹೊಸ ನಿಬಂಧನೆ ತಿಳಿದುಕೊಂಡರೆ ಉತ್ತಮ
ಗ್ರಾಹಕರೇ, ಪೋಸ್ಟ್ ಆಫೀಸ್ ಖಾತೆಯಿಂದ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅಥವಾ ವರ್ಗಾಯಿಸಲು ನಿಬಂಧನೆಯನ್ನು ಪಾಲಿಸುವುದು ಅಗತ್ಯ. ಆಗಸ್ಟ್ 25 ರಂದು ಸಂವಹನ ಸಚಿವಾಲಯ ಸುತ್ತೋಲೆಯಲ್ಲಿ ಇದನ್ನು ಉಲ್ಲೇಖ ಮಾಡಿದೆ.
ಅಂಚೆ ಕಚೇರಿ ಉಳಿತಾಯ ಖಾತೆ (Post Office Savings Account) ಯಿಂದ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು (Withdrawal) ಅಥವಾ ಅದನ್ನು ಯಾರಿಗಾದರೂ ವರ್ಗಾಯಿಸಲು (Transactions) ಬಯಸಿದರೆ ನೀವು ವಿಶೇಷ ಪರಿಶೀಲನೆ (Special Verification)ಯನ್ನು ಮಾಡಬೇಕಾಗುತ್ತದೆ. ನೀವು ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದಿದ್ದರೆ ಈ ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳುಬಹುದು ಬಹಳ ಮುಖ್ಯ.
ಅನಂತರವೇ ನೀವು 10 ಸಾವಿರ ರೂಪಾಯಿಗಿಂತ ಹೆಚ್ಚಿನ ವಹಿವಾಟು ಮಾಡಲು ಸಾಧ್ಯ. ನೆನಪಿನಲ್ಲಿಟ್ಟುಕೊಳ್ಳಿ, ಯಾವುದೇ ಪರಿಶೀಲನೆ ಇಲ್ಲದೆ ನೀವು 10 ಸಾವಿರಕ್ಕಿಂತ ಹೆಚ್ಚಿನ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. ನೀವು ನಿಯಮಿತವಾಗಿ ಅಂಚೆ ಕಚೇರಿಯಲ್ಲಿನ ಉಳಿತಾಯ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಆದರೆ ಇದೇ ಖಾತೆಯಿಂದ ನೀವು 10 ಸಾವಿರ ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳನ್ನು ನಡೆಸಬೇಕಾದರೆ ಅದಕ್ಕಿರುವ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
ಗ್ರಾಹಕರು 10,000 ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಬಯಸಿದರೆ ಇದಕ್ಕಾಗಿ ಅವರು ವಿಶೇಷ ಪರಿಶೀಲನೆ ಮಾಡಬೇಕಾಗುತ್ತದೆ. ಈ ಬಗ್ಗೆ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಸಿಂಗಲ್ ಹ್ಯಾಂಡ್ ಪೋಸ್ಟ್ ಆಫೀಸ್‌ಗಳಲ್ಲಿ ಹೆಚ್ಚಿನ ಹಿಂಪಡೆಯುವಿಕೆಗಾಗಿ ಪರಿಶೀಲನೆ ಪ್ರಕ್ರಿಯೆಯನ್ನು ತೆಗೆಯಲಾಗಿದೆ.
ಬ್ಯಾಂಕಿಂಗ್‌ಗೆ ಸಂಬಂಧಿಸಿದ ವಂಚನೆ ತಡೆಯಲು ಜಾರಿಗೆ ತಂದಿರುವ ನಿಯಮಗಳ ಹೊರತಾಗಿ ಹಿಂಪಡೆಯುವ ಮಿತಿಯನ್ನೂ ಅಂಚೆ ಇಲಾಖೆ ಹೆಚ್ಚಿಸಿದೆ. ಈ ಹಿಂದೆ ಖಾತೆದಾರರು 5000 ರೂ.ವರೆಗೆ ಮಾತ್ರ ಹಿಂಪಡೆಯಬಹುದಾಗಿತ್ತು. ಆದರೆ ಈಗ ಅದನ್ನು 20,000 ರೂ.ಗೆ ಹೆಚ್ಚಿಸಲಾಗಿದೆ. ಇದಲ್ಲದೇ
ಯಾವುದೇ ಗ್ರಾಹಕರ ಖಾತೆಯಲ್ಲಿ 50 ಸಾವಿರ ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳನ್ನು ಶಾಖೆಯ ಪೋಸ್ಟ್ ಮಾಸ್ಟರ್ ಸ್ವೀಕರಿಸುವುದಿಲ್ಲ.
ಅಂಚೆ ಕಚೇರಿಯಲ್ಲಿ ಬ್ಯಾಂಕಿಂಗ್ ವಂಚನೆ ತಡೆಯಲು ಇಂತಹ ನಿಯಮಗಳನ್ನು ತರಲಾಗಿದೆ. ಇದರಿಂದ ವಂಚನೆ ಪ್ರಕರಣಗಳು ಕಡಿಮೆಯಾಗಲಿವೆ. ಈ ನಿಯಮದೊಂದಿಗೆ ಜನರನ್ನು ವಂಚನೆಗೆ ಬಲಿಯಾಗದಂತೆ ತಡೆಯಬಹುದು.
ಈ ವಿಶೇಷ ಪರಿಶೀಲನೆಗಾಗಿ ನೀವು ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮೊಬೈಲ್ ಸಂಖ್ಯೆಯನ್ನು ಪೋಸ್ಟ್ ಆಫೀಸ್ ಖಾತೆಗೆ ಲಿಂಕ್ ಮಾಡುವುದು ಬಹಳ ಮುಖ್ಯ.
ದೇಶದ ಯಾವುದೇ ಪ್ರಜೆಯು ಅಂಚೆ ಕಛೇರಿಯಲ್ಲಿ ತನ್ನ ಖಾತೆಯನ್ನು ಸುಲಭವಾಗಿ ತೆರೆಯಬಹುದು. ಮಿನಿಮಮ್ ಬ್ಯಾಲೆನ್ಸ್ ಆಗಿ 500 ರೂಪಾಯಿ ಮೂಲಕ ಖಾತೆ ತೆರೆದರೆ ಸಾಕು. ಸದ್ಯ ಈ ಖಾತೆಗೆ ಶೇ.4ರಷ್ಟು ಬಡ್ಡಿ ನೀಡಲಾಗುತ್ತಿದೆ. ಇದು ಇತರ ಉಳಿತಾಯ ಖಾತೆಗಳಿಗಿಂತ ಹೆಚ್ಚು.