ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ | IIFL ವೆಬ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನ

ಭಾರತದ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿಕೊಂಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಉದ್ಯಮಿ ಗೌತಮ್ ಅದಾನಿ ಹಿಂದಿಕ್ಕಿದ್ದಾರೆ. ಸಂಪತ್ತು ನಿರ್ವಹಣಾ ಸಂಸ್ಥೆ ಐಐಎಫ್‌ಎಲ್ ವೆಲ್ತ್ ಸಹಭಾಗಿತ್ವದಲ್ಲಿ ಸಂಶೋಧನಾ ಸಂಸ್ಥೆ ಹುರುನ್ ಇಂಡಿಯಾ ಬಿಡುಗಡೆ ಮಾಡಿದ ಶ್ರೇಯಾಂಕದ ಪ್ರಕಾರ, ಈ ವರದಿ ಹೊರಬಿದ್ದಿದೆ.

 

IIFL ವೆಬ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರಲ್ಲಿ ಗೌತಮ್ ಅದಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಬಿಲಿಯನೇರ್ ಗೌತಮ್ ಅದಾನಿ 10,94,400 ಕೋಟಿ ರೂ.ಗಳ ನಿವ್ವಳ ಮೌಲ್ಯದೊಂದಿಗೆ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ranking ಪ್ರಕಾರ, ಕಳೆದ ವರ್ಷ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮುಖೇಶ್ ಅಂಬಾನಿ 7,94,700 ಕೋಟಿ ರೂ.ಗಳ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಇದು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ 11 ನೇ ವಾರ್ಷಿಕ ಶ್ರೇಯಾಂಕವಾಗಿದೆ. ಸಂಪತ್ತಿನ ಲೆಕ್ಕಾಚಾರಗಳು ಆಗಸ್ಟ್ 30, 2022 ರಂತೆ ಸ್ನ್ಯಾಪ್ಶಾಟ್ ಆಗಿವೆ.

ಅದಾನಿ ಅವರ ಒಟ್ಟಾರೆ ಸಂಪತ್ತು 10,94,400 pe ರೂಪಾಯಿ. ಪ್ರತಿ ದಿನದ ಆದಾಯವೇ 1,612 ಕೋಟಿ ರೂಪಾಯಿ. ಅದಾನಿ ಅವರ ನಿವ್ವಳ ಮೌಲ್ಯ ಈಗ ಮುಖೇಶ್ ಅಂಬಾನಿ ಅವರಿಗಿಂತ 3 ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ. ಸರಕು ವ್ಯಾಪಾರ ಕಂಪನಿಯನ್ನು ಕಲ್ಲಿದ್ದಲು, ಇಂಧನ ವಹಿವಾಟಿಗೆ ಸಂಘಟಿತವಾಗಿ ವಿಸ್ತರಿಸುವ ಮೂಲಕ ಗೌತಮ್ ಅದಾನಿ ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ 1 ಬಂಡವಾಳದೊಂದಿಗೆ ಏಳು ಕಂಪನಿಗಳನ್ನು ನಿರ್ಮಿಸಿದ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ. ಹತ್ತು ವರ್ಷಗಳ ಕಾಲ ಅತ್ಯಂತ ಶ್ರೀಮಂತ ಭಾರತೀಯ ಎಂಬ ಪಟ್ಟವನ್ನು ಮುಖೇಶ್ ಅಂಬಾನಿ ಅವರೇ ಅಲಂಕರಿಸಿದ್ದರು. ಇದೀಗ 7.94 ಲಕ್ಷ ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಕಳೆದ ವರ್ಷ ಅಂಬಾನಿ ಅವರ ಆಸ್ತಿ ಅದಾನಿಗಿಂತ 1 ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಾಗಿತ್ತು. ಆದ್ರೀಗ ಅಂಬಾನಿ ಆಸ್ತಿ ಗಳಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಸೈರಸ್ ಪೂನಾವಾಲಾ ವಿಶ್ವದ ವ್ಯಾಕ್ಸಿನ್ ಎನಿಸಿಕೊಂಡಿದ್ದಾರೆ. 41,700 ಕೋಟಿ ಮೊತ್ತದ ಸಂಪತ್ತು ಅವರ ಬಳಿಯಿದೆ. ಫಾರ್ಮಾ ಉದ್ಯಮಿ ದಿಲೀಪ್ ಶಾಂಘಿ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉದಯ್ ಕೋಟಕ್ ಟಾಪ್ 10 ಪಟ್ಟಿಯಲ್ಲಿದ್ದಾರೆ.

ಮೂರು, ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿ ಸೈರಸ್ ಎಸ್ ಪೂನವಾಲಾ (2,05,400 ಕೋಟಿ ರೂ.), ಶಿವ ನಾಡರ್ (1,85,800 ಕೋಟಿ ರೂ.) ಮತ್ತು ರಾಧಾಕಿಶನ್ ದಮಾನಿ (1,75,100 ಕೋಟಿ ರೂ.) ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಫಾರ್ಮಾ ಉದ್ಯಮಿ ದಿಲೀಪ್ ಸಾಂಘ್ವಿ, ಬ್ಯಾಂಕಿಂಗ್ ಉದ್ಯಮಿ ಉದಯ್ ಕೋಟಕ್ ಸೇರಿದಂತೆ ಹಲವಾರು ಸೇರ್ಪಡೆಗಳು ಕಂಡುಬಂದಿವೆ, ಅವರು ಕೈಗಾರಿಕೋದ್ಯಮಿಗಳಾದ ಜಯ್ ಚೌಧರಿ ಮತ್ತು ಕುಮಾರ್ ಮಂಗಲಂ ಬಿರ್ಲಾ ಅವರ ವೆಚ್ಚದಲ್ಲಿ ಒಂಬತ್ತು ಮತ್ತು ಹತ್ತನೇ ಸ್ಥಾನಗಳಲ್ಲಿ ಅಗ್ರ 10 ಪಟ್ಟಿಯಲ್ಲಿ ಮತ್ತೆ ಪ್ರವೇಶಿಸಿದ್ದಾರೆ.

Leave A Reply

Your email address will not be published.