Kantara: ‘ಕಾಂತಾರ’ ಚಿತ್ರಕ್ಕೆ ಮೊದಲು ಸೆಲೆಕ್ಟ್ ಆಗಿದ್ದು ಪುನೀತ್ ರಾಜ್ ಕುಮಾರ್ | ಆದರೆ ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದದ್ದಾರೂ ಹೇಗೆ?
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಕರಾವಳಿ ಸೊಗಡನ್ನೇ ಮೈದುಂಬಿಸಿಕೊಂಡಂತಹ ಚಿತ್ರ ‘ಕಾಂತಾರ’ (Kantara Kannada Movie) ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಈಗಾಗಲೇ ಈ ಸಿನಿಮಾದ ಟ್ರೇಲರ್ ನೋಡಿದವರು ಹುಬ್ಬೇರಿಸಿಕೊಂಡಿದ್ದು, ಈ ಟ್ರೇಲರ್ ಬಹಳಷ್ಟು ಟ್ರೆಂಡ್ ಮೂಡಿಸಿದೆ. ಈ ಸಿನಿಮಾ ಹೊಂಬಾಳೆ ಫಿಲ್ಮ್ ಬ್ಯಾನರ್ ಮೂಲಕ ಮೂಡಿಬಂದಿದೆ. ಯಾವುದೇ ಅದ್ಧೂರಿತನಕ್ಕೆ ಕಡಿಮೆ ಇಲ್ಲದೆ ಮೂಡಿ ಬಂದಿರುವ ಈ ಸಿನಿಮಾ, ಹಾಗೂ ಇದು ಸಿನಿಮಾದ ಟ್ರೇಲರ್ ನೋಡಿದಾಗಲೇ ಗೊತ್ತಾಗಿದೆ. ರಿಷಬ್ ಶೆಟ್ಟಿ (Rishab Shetty) ನಟನೆ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರದ ಮೇಲೆ ಸಿನಿಪ್ರಿಯರಿಗೆ ನಿರೀಕ್ಷೆ ಹೆಚ್ಚಿದೆ. ಅಚ್ಚರಿಯ ವಿಷಯ ಏನೆಂದರೆ ಈ ಸಿನಿಮಾದಲ್ಲಿ ಪುನೀತ್ (Puneeth Rajkumar) ಅವರು ಹೀರೋ ಆಗಿ ನಟಿಸಬೇಕಿತ್ತು! ಆದರೆ ಅದು ಸಾಧ್ಯವಾಗಲಿಲ್ಲ.
ಪ್ರೇಕ್ಷಕರು ಬೇರೆ ಬೇರೆ ಪಾತ್ರಗಳಲ್ಲಿ ನೋಡಿರುವ ಪುನೀತ್ ರಾಜ್‌ಕುಮಾರ್ ಅವರನ್ನು ‘ಕಾಂತಾರ’ ರೀತಿಯ ಚಿತ್ರದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಮಿಸ್ ಆಯ್ತು. ಈ ಬಗ್ಗೆ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಪುನೀತ್ ಮಾಡಬೇಕಿದ್ದ ಪಾತ್ರ ನಂತರ ರಿಷಬ್ ಶೆಟ್ಟಿ ಪಾಲಾಯಿತು ಎಂದು ಕಾರ್ತಿಕ್ ಗೌಡ ಹೇಳಿದ್ದಾರೆ.
‘ಅನೇಕರಿಗೆ ಗೊತ್ತಿರದ ಮಾಹಿತಿ ಏನೆಂದರೆ, ಕಾಂತಾರ ಸಿನಿಮಾದಲ್ಲಿ ಅಪ್ಪು ಸರ್ ಅವರೇ ಹೀರೋ ಆಗಬೇಕಿತ್ತು. ನಾವು ನಿರ್ದಿಷ್ಟ ಕಾಲಮಾನದಲ್ಲಿ ಈ ಸಿನಿಮಾವನ್ನು ಚಿತ್ರಿಸಬೇಕಿತ್ತು. ಅದರಿಂದಾಗಿ ಅವರ ಡೇಟ್ ಫ್ಲ್ಯಾಶ್ ಆಯ್ತು. ಹಾಗಾಗಿ ಸ್ವತಃ ಪುನೀತ್ ಅವರೇ ರಿಷಬ್ ಶೆಟ್ಟಿಯ ಹೆಸರು ಸೂಚಿಸಿದರು’ ಎಂದು ಕಾರ್ತಿಕ್ ಗೌಡ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಬರೆದಿದ್ದಾರೆ.
ಹಾಗಾಗಿ ಪುನೀತ್ ನೀಡಿದ ಸಲಹೆಯಂತೆ ರಿಷಬ್ ಶೆಟ್ಟಿ ಅವರು ‘ಕಾಂತಾರ’ಕ್ಕೆ ಹೀರೋ ಆದರು. ಅವರು ಈ ಪಾತ್ರಕ್ಕೆ ಖಂಡಿತವಾಗಿಯೂ ನ್ಯಾಯ ಸಲ್ಲಿಸಿದ್ದಾರೆ ಎಂಬುವುದು ಟ್ರೇಲರ್ ನಲ್ಲಿಯೇ ಕಾಣುತ್ತಿದೆ.
ಅಂದ ಹಾಗೇ ಸೆಪ್ಟೆಂಬರ್ 30ರಂದು ‘ಕಾಂತಾರ’ ಸಿನಿಮಾ ಬಿಡುಗಡೆ ಆಗಲಿದೆ.
ಕಾಂತಾರಾ ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಲಿದೆ ಎಂದು ಕೂಡಾ ಅವರು ಹೇಳಿದ್ದಾರೆ. ಈ ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ರಿಷಬ್ ಶೆಟ್ಟಿ ಜೊತೆ ಸಪ್ತಮಿ ಗೌಡ, ಕಿಶೋರ್ ಮುಂತಾದವರು ನಟಿಸಿದ್ದಾರೆ.