ITBP ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ ಶ್ರೇಣಿ ರೂ.21,700 ರಿಂದ 69,100 ವರೆಗೆ, SSLC ಪಾಸಾದವರಿಗೆ ಆದ್ಯತೆ

ಇಂಡೊ-ಟಿಬೆಟೀಯನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ), ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

 

ಹುದ್ದೆ : ಅನಿಮಲ್ ಟ್ರಾನ್ಸ್‌ಪೋರ್ಟ್‌ ವಿಭಾಗದ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಪ್ರಕಟಿಸಿದೆ.

ಉದ್ಯೋಗ ಇಲಾಖೆ : ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್
ಹುದ್ದೆಗಳ ವಿವರ: ಕಾನ್ಸ್‌ಟೇಬಲ್ (ಅನಿಮಲ್ ಟ್ರಾನ್ಸ್ ಪೋರ್ಟ್ )
ಹುದ್ದೆಗಳ ಸಂಖ್ಯೆ : 52
ಈ ಹುದ್ದೆಗಳಿಗೆ ಸೆಪ್ಟೆಂಬರ್ 27 ರವರೆಗೆ ಅರ್ಜಿಗೆ ಅವಕಾಶ ನೀಡಲಾಗಿದೆ.

ವಿದ್ಯಾರ್ಹತೆ : ಮೆಟ್ರಿಕ್ಯೂಲೇಷನ್ ಪಾಸ್

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-08-2022
ಅರ್ಜಿ ಸಲ್ಲಿಸಲು, ಶುಲ್ಕ ಪಾವತಿಸಲು ಕೊನೆ ದಿನಾಂಕ: 27-09-2022 ರ ರಾತ್ರಿ 11-59 ಗಂಟೆವರೆಗೆ

ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು.
ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ವೇತನ : ರೂ.21,700-69100 (7ನೇ ವೇತನ ಆಯೋಗದ ಪ್ರಕಾರ ಲೆವೆಲ್ 3 ಪೇ ಮೆಟ್ರಿಕ್ಸ್
ಸಂಭಾವನೆ)

ಅರ್ಜಿ ಶುಲ್ಕ : ಜೆನೆರಲ್ / ಒಬಿಸಿ / ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ.100.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.