ಬಾವಿ, ಕೊಳವೆ ಬಾವಿ ಕೊರೆಸಲು ನೋಂದಣಿ ಸಹಿತ ಶುಲ್ಕ ಕಡ್ಡಾಯ!

ಕೇಂದ್ರ ಮತ್ತು ರಾಜ್ಯ ಅಂತರ್ಜಲ ಮಂಡಳಿ ವ್ಯಾಪ್ತಿಯಲ್ಲಿ ಬಾವಿ, ಕೊಳವೆ ಬಾವಿ ಕೊರೆಸಲು ನೋಂದಣಿ ಸಹಿತ ಶುಲ್ಕ ಕಡ್ಡಾಯವಾಗಿದ್ದು, 10,000 ಲೀಟರ್ ಗಿಂತ ಅಧಿಕ ಅಂತರ್ಜಲ ಬಳಕೆಗೆ ಶುಲ್ಕ ವಿಧಿಸಲಾಗುವುದು.

 

ಕೃಷಿ, ಗೃಹಬಳಕೆ, ಗ್ರಾಮೀಣ ಕುಡಿಯುವ ನೀರು, ಸರ್ಕಾರಿ ವ್ಯವಸ್ಥೆ ಹೊರತುಪಡಿಸಿ ವಾಣಿಜ್ಯ ಕೈಗಾರಿಕೆಗಳಿಗೆ ಇದು ಅನ್ವಯವಾಗಲಿದೆ. ಕೇಂದ್ರ ಅಂತರ್ಜಲ ಮಂಡಳಿ ವ್ಯಾಪ್ತಿಯಲ್ಲಿರುವ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳಲ್ಲಿ ಬಾವಿ ಕೊಳವೆ ಬಾವಿ ಕೊರೆಸಲು ನೋಂದಣಿ ಸಹಿತ 10,000 ರೂ. ಶುಲ್ಕ ಪಾವತಿಸಬೇಕಿದೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೋಂದಣಿ ಶುಲ್ಕ 3500 ರೂ. ನೀಡಬೇಕಿದೆ ಎಂದು ಹೇಳಲಾಗಿದೆ. ಎನ್.ಒ.ಸಿ. ಪಡೆಯದೆ ಅಂತರ್ಜಲ ಬಳಕೆ ಮಾಡಿದಲ್ಲಿ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎನ್ನಲಾಗಿದೆ.

0 -50 ಸಾವಿರ ಲೀಟರ್ ಗೆ 1 ರೂ., 51,000 ಲೀಟರ್ ನಿಂದ 2 ಲಕ್ಷ ಲೀಟರ್ ಗೆ 3 ರೂ., 2 ಲಕ್ಷ ಲೀಟರ್ ನಿಂದ 10 ಲಕ್ಷ ಲೀಟರ್ ಗೆ 5 ರೂಪಾಯಿ, 10 ಲಕ್ಷ ಲೀಟರ್ ನಿಂದ 50 ಲಕ್ಷ ಲೀಟರ್ ಗೆ 8 ರೂಪಾಯಿ ಮತ್ತು 50 ಲಕ್ಷ ಲೀಟರ್ ಮೇಲ್ಪಟ್ಟು ಅಂತರ್ಜಲ ಬಳಕೆಗೆ 10 ರೂಪಾಯಿ ಶುಲ್ಕ ವಿಧಿಸಲಾಗುವುದು.

Leave A Reply

Your email address will not be published.