ಹ್ಯಾಕ್ ಆಯ್ತು ಕಾಫಿ ನಾಡು ಚಂದುವಿನ ಇನ್ಸ್ಟಾಗ್ರಾಮ್ ಅಕೌಂಟ್ | ಹ್ಯಾಕರ್ಸ್ ಮಾಡಿದ ಎಡವಟ್ಟಾದರೂ ಏನು? ಕಡಿಮೆ ಆಗ್ತಾರಾ ಫ್ಯಾನ್ಸ್?
ಕಾಫಿನಾಡು ಅಂದಾಕ್ಷಣ ಇದೀಗ ನಮಗೆ ತಟ್ ಅಂತ ನೆನಪಿಗೆ ಬರೋದೇ ಚಂದು ಹೆಸರು. ಹೌದು. ಕಾಫಿನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ತನ್ನದೇ ಆದ ಫ್ಯಾನ್ಸ್ ಹೊಂದಿರುವ ಕಾಫಿನಾಡು ಚಂದು ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಐಕಾನ್ ಆಗಿದ್ದಾರೆ.
ಹ್ಯಾಪಿ ಬರ್ತಡೇ ಸಾಂಗ್ ಗಳನ್ನು ಹಾಡುವ ಮೂಲಕ ಎಲ್ಲರಿಗೆ ಪರಿಚಯವಾದ ಕಾಫಿನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ ಇದೀಗ ಮಿಂಚುತ್ತಿರುವ ಯುವಕ. ಸಾಂಗ್ ಮಾತ್ರವಲ್ಲ, ಡ್ಯಾನ್ಸ್ , ಡೈಲಾಗ್ ಗಳನ್ನು ಹೇಳುವ ಮೂಲಕ ಸ್ಟಾರ್ ಆಗಿರುವ ಕಾಫಿನಾಡು ಚಂದ್ರುವಿಗೆ ಶಿವಣ್ಣನನ್ನು ಮೀಟ್ ಮಾಡುವ ಬಯಕೆ ಇತ್ತು. ಅದನ್ನೂ ಜೀ ಕನ್ನಡ ವೇದಿಕೆಯಲ್ಲಿ ನೆರವೇರಿಸಿಕೊಂಡಿದ್ದಾನೆ.
ಇಷ್ಟೆಲ್ಲಾ ಹೆಸರು ಮಾಡಿ ಅಭಿಮಾನಿ ಬಳಗವನ್ನೇ ಕಟ್ಟಿಕೊಂಡ ಚಂದುವಿನ ಮೇಲೆ ಹೇಟರ್ಸ್ ಗಳ ಕಣ್ಣು ಬಿದ್ದಿದೆ. ಹೌದು. ಹಾಡುಗಳನ್ನು ಹಾಡುವ ಮೂಲಕ ನೆಟ್ಟಿಗರಿಗೆ ನಾನ್ ಸ್ಟಾಪ್ ಮನೋರಂಜನೆ ನೀಡುತ್ತಿರುವ ಕಾಫಿ ನಾಡು ಚಂದು ಈಗ ಹ್ಯಾಕರ್ಗಳಿಗೆ ಬಿಗ್ ಟಾರ್ಗೇಟ್. ಹೀಗಾಗಿ, ಕಾಫಿ ನಾಡು ಚಂದು ಇನ್ಸ್ಟಾಗ್ರಾಂ (Instagram Hack) ಖಾತೆ ಹ್ಯಾಕ್ ಮಾಡಲಾಗಿದೆ.ಸ್ಟೋರಿಯಲ್ಲಿ ಕೆಲವು ಅಸಂಬದ್ಧ ಲಿಂಕ್ಗಳನ್ನು ಹಂಚಿಕೊಳ್ಳಲಾಗಿದೆ. ಇದರಿಂದ ಕಾಫಿ ನಾಡು ಚಂದು ಇಮೇಜ್ಗೆ ತೊಂದರೆ ಆಗಿದೆ.
ಮೊದಲ ಸ್ಟೋರಿಯಲ್ಲಿ ಫ್ರೀ ಸಿನಿಮಾಗಳನ್ನು ನೋಡಲು ಲಿಂಕ್ ಶೇರ್ ಮಾಡಲಾಗಿತ್ತು. ಆನಂತರ ಎರಡು ಸ್ಟೋರಿಗಳಲ್ಲಿ 150ಕ್ಕೂ ಹಾಟ್ ಹಾಟ್ ವಿಡಿಯೋ ನೋಡಲು ಲಿಂಕ್ ಇಲ್ಲಿದೆ ಎಂದು ಎರಡು ಲಿಂಕ್ ಶೇರ್ ಮಾಡಲಾಗಿತ್ತು. ಇಷ್ಟೆ ಅಲ್ಲ ಚಂದು ಕರ್ನಾಟಕದ ಶಾಲು ಧರಿಸಿರುವ ವಿಡಿಯೋ ಹಾಕಿ ‘ಚಂದು ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್ ಆಗಿದೆ. ಹ್ಯಾಕ್ ಮಾಡಲು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ಕಿಡಿಗೇಡಿಗಳು ಬರೆದುಕೊಂಡಿದ್ದರು.
ಅಷ್ಟಕ್ಕೂ ಇಂತಹ ಕೆಲಸಕ್ಕೆ ಕಾರಣವೇ ಹೊಟ್ಟೆ ಉರಿ ಹೇಳಬಹುದು. ಯಾಕೆಂದರೆ, ಆರಂಭದಲ್ಲಿ ಎಲ್ಲರಿಗೂ ಫ್ರೀ ಆಗಿ ಬರ್ತಡೇ ವಿಶ್ (Chandu birthday wish) ಮಾಡುತ್ತಿದ್ದ ಚಂದು ಈಗ ಒಂದು ವಿಶ್ಗೆ 500 ರೂಪಾಯಿ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಹೆಣ್ಣು ಮಕ್ಕಳು ವಿಶ್ ಮಾಡುತ್ತಾರೆ ಮತ್ತು ಸೆಲ್ಫಿಗೆ ಫೋಸ್ ಕೊಡುತ್ತಾರೆ ಆದರೆ ಗಂಡು ಮಕ್ಕಳ ಬಗ್ಗೆ ಕೇರ್ ಕೂಡ ಮಾಡುವುದಿಲ್ಲ ಎಂದು ಬೇಸರ ವ್ಯಕ್ತ ಪಡಿಸುತ್ತಿದ್ದರು. ಅಷ್ಟೇ ಅಲ್ಲದೆ, ಈ ಹಿಂದೆ ಆಟೋ ಚಲಾಯಿಸುವಾಗಲೇ ಬರ್ತ್ ಡೇ ವಿಶ್ ಸಾಂಗ್ ಹೇಳುವಂತೆ ಊರಿನವರೇ ಧಮ್ಕಿ ಹಾಕಿದ್ದರು. ಇದೇ ಆರೋಪಗಳಿಂದ ಚಂದು ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ಅನುಮಾನಿಸಲಾಗಿದೆ.