ದಕ್ಷಿಣ ಕನ್ನಡ : ಬಿಂದು ಫಿಜ಼್ ಜೀರಾ ಮಸಾಲ ತನ್ನ ತೆಕ್ಕೆಗೆ ಹಾಕಲು ಮುಂದಾಗಿದ್ದ ಮುಕೇಶ್ ಅಂಬಾನಿಗೆ ಭಾರೀ ನಿರಾಸೆ
ಮಂಗಳೂರು: ‘ ಬಿಂದು’ ಪ್ರಾಡಕ್ಟ್ ಈ ಹೆಸರು ದಕ್ಷಿಣ ಭಾರತದಾದ್ಯಂತ ಹೆಸರುವಾಸಿ. 2002ರಿಂದ ಆರಂಭವಾದ ಬಿಂದು ಫಿಜ್ ಜೀರಾ ಮಸಾಲ ಭಾರೀ ಜನಪ್ರಿಯತೆ ಗಳಿಸಿದೆ. ದಕ್ಷಿಣ ಕನ್ನಡದ ಪುತ್ತೂರು ಮತ್ತು ಆಂಧ್ರ ಪ್ರದೇಶದಲ್ಲಿ ಉತ್ಪಾದನಾ ಘಟಕ ಹೊಂದಿರುವ ಬಿಂದು ಮಿನರಲ್ ವಾಟರ್, ಬಿಂದು ಫಿಜ್ ಜೀರಾ ಮಸಾಲ ಸೇರಿದಂತೆ 50 ಕ್ಕೂ ಅಧಿಕ ಆಹಾರ ಹಾಗೂ ಪಾನೀಯ ಉತ್ಪನ್ನಗಳನ್ನು ಹೊಂದಿವೆ.
ಇತ್ತೀಚೆಗೆ ರಿಲಯನ್ಸ್ ಸಮೂಹ ‘ಬಿಂದು’ ಖರೀದಿಗೆ ಆಸಕ್ತಿ ತೋರಿಸಿತ್ತು. ಆದರೆ ನಮಗೆ ಕಂಪನಿಯನ್ನು ಮಾರಾಟ ಮಾಡುವ ಉದ್ದೇಶ ಇಲ್ಲ ಎಂದು ಪ್ರಖ್ಯಾತ ‘ಬಿಂದು ಫಿಜ್ ಜೀರಾ ಮಸಾಲ’ ಉತ್ಪನ್ನವನ್ನು ತಯಾರಿಸುವ ಎಸ್.ಜಿ. ಕಾರ್ಪೊರೇಟ್ಸ್‌ನ ಆಡಳಿತ ನಿರ್ದೇಶಕ ಸತ್ಯಶಂಕರ್ ಸ್ಪಷ್ಟಪಡಿಸಿದ್ದಾರೆ. ಬೆರಳೆಣಿಕೆಯಷ್ಟು ಕಾರ್ಮಿಕರಿಂದ ಆರಂಭಗೊಂಡ ಈ ಸಂಸ್ಥೆ ಇಂದು 500 ಕೋಟಿ ರೂ. ವ್ಯವಹಾರ ಮಾಡುತ್ತಿದೆ. ಸದ್ಯಕ್ಕೆ ದೇಶದ ಶೇ. 60 ರಷ್ಟು ಭೌಗೋಳಿಕಾ ಪ್ರದೇಶದಲ್ಲಿ ಕಂಪನಿ ಮಾರುಕಟ್ಟೆಯನ್ನು ಹೊಂದಿದೆ.
‘ಬಿಂದು’ ಬ್ರ್ಯಾಂಡ್ ಖ್ಯಾತಿಯ ಮೇಘ ಫ್ರುಟ್ ಪ್ರೊಸೆಸಿಂಗ್ ಪೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಮಾರಾಟ ಮಾಡುವ ಉದ್ದೇಶ ಇಲ್ಲ ಎಂದು ಮಾತೃ ಸಂಸ್ಥೆ ಎಸ್.ಜಿ. ಕಾರ್ಪೊರೇಟ್ ನ ಆಡಳಿತ ನಿರ್ದೇಶಕ ಸತ್ಯಶಂಕರ್ ಸ್ಪಷ್ಟಪಡಿಸಿದ್ದಾರೆ. ‘ಕ್ಯಾಂಪಾ ಕೋಲಾ’ ಖರೀದಿ ಬಳಿಕ ರಿಲಯನ್ಸ್ ಬಿಂದು ಸೇರಿದಂತೆ ಹಲವು ಬ್ಯಾಂಡ್‌ಗಳನ್ನು ಖರೀದಿಸಲು ಮುಂದಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರುಈ ಪ್ರತಿಕ್ರಿಯೆ ನೀಡಿದ್ದಾರೆ.
ಕಂಪನಿಯು ಬಿಂದು ಪ್ಯಾಕೇಜ್ ಡ್ರಿಂಕಿಂಗ್ ವಾಟರ್, ಬಿಂದು ಫಿಚ್ ಜೀರಾ ಮಸಾಲಾ, ಬಿಂದು ಲೆಮೆನ್, ಸಿಪ್ ಆನ್ ಬ್ಯಾಂಡ್‌ನಲ್ಲಿ ಮ್ಯಾಂಗೊ, ಮ್ಯಾಂಗೋ ಮಿಲ್ಕ್ಶೇಕ್, ಲೆಮನ್ ವಿದ್ ಮಿಂಟ್, ಆ್ಯಪಲ್, ಪೇರಳೆ, ಲಿಚ್ಚಿ, ದಾಳಿಂಬೆ, ಪುನರ್ಪುಳಿ, ಸ್ಟ್ರಾಬರಿ, ಪ್ರೋಜನ್ ಬ್ಯಾಂಡ್‌ನಲ್ಲಿ ಆ್ಯಪಲ್, ಆರೆಂಜ್, ಶುಂಠಿ, ಸ್ಟ್ರಾಬರಿ ಝಿವೋ ಬ್ಯಾಂಡ್‌ನಲ್ಲಿ ಸೋಡಾ, ಕೋಲಾ ಹಾಗೂ ಬ್ಲ್ಯಾಕ್ ಅಪ್‌ನಲ್ಲಿ 15 ತರಹದ ತಿಂಡಿಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದೆ.