‘ ನನ್ನ ಹೃದಯ ಕದ್ದಿದ್ದೀಯಾ, ಜೋಪಾನವಾಗಿಡು ಕಳ್ಳ’ ಎಂದು ಪತಿಗೆ ಹೇಳಿದ ನಟಿ ಮಹಾಲಕ್ಷ್ಮಿ, ಹೊಟ್ಟೆ ಉರ್ಕೊಂಡ ತಮಿಳ್ ಹುಡ್ಗರು

ಈ ದಶಕದ ಮೋಸ್ಟ್ ಅನ್ ಮ್ಯಾಚ್ಡ್ ಜೋಡಿ ಎಂದೇ ಮದುವೆ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅತ್ತ ಹೂವ ಹೂವ ಥರದ ಸುಕೋಮಲ ದೇಹಿ ಮಹಾಲಕ್ಷ್ಮಿ ಒಂದೆಡೆಯಾದರೆ, ವಿಪರೀತ ಸ್ಥೂಲಕಾಯದ ರವೀಂದ್ರನ್ ಇನ್ನೊಂದೆಡೆ. ಅಷ್ಟೇ ಅಲ್ಲದೆ ಅವರಿಬ್ಬರ ಮಧ್ಯೆ 20 ಕ್ಕೂ ಮಿಕ್ಕಿದ ಸಂವತ್ಸರಗಳ ಅಂತರ. ಇವರಿಬ್ಬರ ಮದ್ವೆಯ ಸುದ್ದಿ, ಅವರ ಫೋಟೋಗಳು ಪತ್ರಿಕೆಗಳಲ್ಲಿ ಮತ್ತು ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದ ಕೂಡಲೇ ತಮಿಳು ಹುಡುಗರು ಬಾಯಿ ಬಾಯಿ ಬಡ್ಕೊಂಡಿದ್ದರು. ಎಲ್ಲಾ ಇದ್ದೂ, ತಮಗೆ ಒಂದು ಸಾಧಾರಣ ಕಲರಿನ ಹುಡುಗಿ ಸಿಕ್ತಿಲ್ಲ, ಈ ಪಯ್ಯ ಹೋಗಿ ಬಂಗಾರವನ್ನು ಹೊಡ್ಕೊಂಡ್ ಬಂಡ್ನಲ್ಲೋ ಎಂದು ಮರುಗಿ ತನ್ನಿ, ಸಾಪಾಟ್ ಎಲ್ಲವನ್ನೂ ಬಿಟ್ಟು ‘ ತನ್ನಿ ‘ ಹಾಕಲು ಶುರುಮಾಡಿದ್ದರು. ವಿವಾಹದ ನಂತರ ಈಗ ಈ ಅತೃಪ್ತ ಹುಡುಗರನ್ನು ನೋಯಿಸಲೇನೋ ಎಂಬಂತೆ ಮದುಮಗಳು ಮಹಾಲಕ್ಷ್ಮಿ ಸ್ಟೇಟ್ ಮೆಂಟ್ ಒಂದನ್ನು ನೀಡಿದ್ದಾಳೆ. ತಾವಿಬ್ಬರೂ ಮೊದಲಿಗೆ ಹೇಗೆ ಜೊತೆಯಾದರು ಎನ್ನುವ ಬಗ್ಗೆ ನಟಿ ಮಹಾಲಕ್ಷ್ಮಿ ರೊಮ್ಯಾಂಟಿಕ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮೊದಲು ಯಾರು, ಯಾರ ಹೃದಯ ಕದ್ದರು ಎನ್ನುವುದನ್ನೂ ಅವರು ಬಹಿರಂಗ ಪಡಿಸಿದ್ದಾರೆ. ಕದ್ದ ಹೃದಯವನ್ನು ಜೋಪಾನವಾಗಿ ಕಾಪಾಡಿಕೊಳ್ಳುವಂತೆಯೂ ತನ್ನ ಪತಿಗೆ ತಿಳಿಸಿದ್ದಾರೆ.

 

ತಮಿಳು ಸಿನಿಮಾ ರಂಗದಲ್ಲಿ ನಿರ್ಮಾಪಕ ರವೀಂದ‍ರ್ ಮತ್ತು ನಟಿ ಮಹಾಲಕ್ಷ್ಮಿ ಮದುವೆ ವಿಚಾರ ಸಖತ್ ಸದ್ದು ಮಾಡಿದ ಮದುವೆ. ಮಹಾಲಕ್ಷ್ಮಿ ಅವರು ದುಡ್ಡಿನ ಆಸೆಗೆ ಗಟ್ಟಿ ಕುಳ ರವೀಂದರ್ ಅವರನ್ನು ಮದುವೆಯಾಗಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಮಹಾಲಕ್ಷ್ಮಿ ಅವರೇ ಪ್ರಪೋಸ್ ಮಾಡಿರಬಹುದು ಎನ್ನುವ ಅನುಮಾನ ಕೂಡ ವ್ಯಕ್ತವಾಗಿತ್ತು. ಇವೆಲ್ಲವಕ್ಕೂ ಉತ್ತರ ಕೊಟ್ಟಿರುವ ನಟಿ, ಮೊದಲು ಪ್ರಪೋಸ್ ಮಾಡಿದ್ದು ರವೀಂದರ್ ಎಂದು ಹೇಳಿ ‘ನನ್ನ ಹೃದಯವನ್ನು ಮೆಲ್ಲನೆ ಕದ್ದಿದ್ದೀರಿ. ಅದನ್ನು ಜೋಪಾನವಾಗಿ ನೋಡಿಕೊಳ್ಳಿ’ ಎಂದು ಕಾಮೆಂಟ್ ಮಾಡಿ ಕೇಳಿಕೊಂಡಿದ್ದಾರೆ.

ಈ ಜೋಡಿಗೆ ಅತಿಯಾಗಿ ನೆಗೆಟಿಗ್ ಕಾಮೆಂಟ್ ಗಳು ಹರಿದು ಬರುತ್ತಿವೆ. ಇದೊಂದು ದುಡ್ಡಿನ ಆಸೆಗೆ ಆಗಿರುವ ವಿವಾಹ ಎಂದು ಸುದ್ದಿ ಹರಡಿದೆ. ಏನೇ ಗಾಸಿಪ್ ಗಳು ಬಂದರೂ, ದಂಪತಿ ಮಾತ್ರ ಖುಷಿ ಖುಷಿಯಾಗಿ ಇದ್ದಾರೆ ಅಂತೆ. ಪ್ರೊಡ್ಯೂಸರ್ ರವೀಂದ್ರ ಅಂತೂ ತುಂಬಾ ಖುಷಿಯಲ್ಲಿದ್ದಾರೆ. ಒಳ್ಳೆ ಫಿಗರ್ ನ ಬುಟ್ಟಿಗೆ ಹಾಕ್ಕೊಂಡ್ರೆ ಖುಷಿಯಾಗದೆ ಇರತ್ತಾ ಅಂತ ಸೋಷಿಯಲ್ ಮೀಡಿಯಾ ಗುಲ್ಲೆಬ್ಬಿಸುತ್ತಿದೆ. ಹೊಸ ಜೋಡಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಹನಿಮೂನ್ ಗೆ ಪ್ಲಾನ್ ಮಾಡಿದೆ. ರವೀಂದ್ರನ್ ನ ಮುಂದೆ ಗುಬ್ಬಚ್ಚಿಮರಿಯನ್ನು ನೆನಪಿಸಿಕೊಂಡು ತಮಿಳು ಹುಡುಗರು ಪರಿತಪಿಸುತ್ತಿದ್ದಾರೆ.

Leave A Reply

Your email address will not be published.