ಸ್ಕೈಡೈವಿಂಗ್ ಮಾಡುವಾಗ ದುರಂತ ಸಂಭವಿಸಿ ವಿಶ್ವಖ್ಯಾತಿಗಳಿಸಿದ್ದ ಟಿಕ್ ಟಾಕ್ ಸ್ಟಾರ್ ಸಾವು!

ವಿಶ್ವಖ್ಯಾತಿಗಳಿಸಿದ್ದ ಟಿಕ್ ಟಾಕ್ ತಾರೆ ಹಾಗೂ ಮಾಡೆಲ್ ತಾನ್ಯಾ ಪರ್ದಾಜಿ ಸ್ಕೈಡೈವಿಂಗ್ ಮಾಡುವಾಗ ಬಿದ್ದು ಮೃತಪಟ್ಟಿದ್ದಾರೆ.

 

21 ವರ್ಷದ ತಾನ್ಯಾ ಪರ್ದಾಜಿ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಅವರು ಸ್ಕೈಡೈವಿಂಗ್ ಕ್ಲಾಸಿಗೆ ಸೇರಿಕೊಂಡಿದ್ದು, ಸ್ಕೈಡೈವಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದಾಗ ಅನಾಹುತ ಸಂಭವಿಸಿದೆ. ಆಕಾಶದಿಂದ ನೇರವಾಗಿ ನೆಲಕ್ಕೆ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ.

ಕೆನಡಾದ ಒಂಟಾರಿಯೊದಲ್ಲಿ ಸ್ಕೈಡೈವಿಂಗ್​ ತರಬೇತಿ ಕೇಂದ್ರದಲ್ಲಿ ಕೆಲ ತಿಂಗಳ ಹಿಂದೆ ಸ್ಕೈಡೈವಿಂಗ್​ ತರಬೇತಿ ಪಡೆದಿದ್ದ ತಾನ್ಯಾ, ಇಂದು ಒಬ್ಬರೇ ಸ್ಕೈಡೈವಿಂಗ್ ಮಾಡುತ್ತಿದ್ದರು. ಆಕಾಶದಿಂದ ಕೆಳಕ್ಕೆ ಜಿಗಿಯುವ ಸಂದರ್ಭದಲ್ಲಿ ಅವರ ಪ್ಯಾರಾಚೂಟ್​ ಸರಿಯಾದ ವೇಳೆ ತೆರೆದುಕೊಳ್ಳಲಿಲ್ಲ. ಆದ್ದರಿಂದ ಮೇಲಿನಿಂದ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ತಾನ್ಯಾ ಅವರ ನಿಧನಕ್ಕೆ ತರಬೇತಿ ಕೇಂದ್ರ ‘ಸ್ಕೈಡೈವ್ ಟೊರೊಂಟೊ ಸೌತ್ ಸಿಮ್ಕೊ’ ಸಿಬ್ಬಂದಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ‘ತಾನ್ಯಾ ಪರ್ದಾಜಿ, ಈಚೆಗಷ್ಟೇ ಸ್ಕೈಡೈವಿಂಗ್ ಗುಂಪಿಗೆ ಸೇರಿದ್ದರು. ಅವರನ್ನು ನಾವೆಲ್ಲರೂ ಸ್ವಾಗತದಿಂದ ಬರಮಾಡಿಕೊಂಡಿದ್ದೆವು. ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ 50 ವರ್ಷದಿಂದ ತರಬೇತಿ ನೀಡುತ್ತಾ ಬಂದಿದೆ. ಇಲ್ಲಿಯವರೆಗೆ ಯಾವುದೇ ರೀತಿಯ ಅನಾಹುತ ಆಗಿರಲಿಲ್ಲ. ಇದೊಂದು ದೊಡ್ಡ ದುರಂತ’ ಎಂದಿದ್ದಾರೆ ಸಿಬ್ಬಂದಿ.

ಸ್ಕೈಡೈವ್ ಟೊರೊಂಟೊದ ಹೇಳಿಕೆಯ ಪ್ರಕಾರ, ತಾನ್ಯಾ ಪರ್ದಾಜಿ ಪ್ಯಾರಾಚೂಟ್​  ಅನ್ನು ತುಂಬಾ ನಿಧಾನವಾಗಿ ತೆರೆದಳು. ಆದರೆ ಪ್ಯಾರಾಚೂಟ್​ ಗಾಳಿಯನ್ನು ಹಿಡಿದಿಟ್ಟುಕೊಳ್ಳು ಸಾಧ್ಯವಾಗಲಿಲ್ಲ. ಈ ಘಟನೆಯಿಂದ ನೇರವಾಗಿ ನೆಲಕ್ಕೆ ಬಿದ್ದಿದ್ದಾಳೆ. ಪೊಲೀಸರು ಸ್ಕೈಡೈವ್ ಟೊರೊಂಟೊ ಸೌತ್ ಸಿಮ್ಕೊ ತಂಡದ ಜೊತೆಗೆ ತನಿಖೆ ನಡೆಸಿದ್ದಾರೆ.

ತಾನ್ಯಾ ಪರ್ದಾಜಿ ಅವರು 2017 ರಲ್ಲಿ ಮಿಸ್ ಕೆನಡಾ ಸೌಂದರ್ಯ ಸ್ಪರ್ಧೆಯಲ್ಲಿ ಸೆಮಿ-ಫೈನಲಿಸ್ಟ್ ಆಗಿದ್ದರು ಮತ್ತು ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದರು. ಅವರ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಜೊತೆಗೆ ತಾನ್ಯಾ ಹಾಕಿ ಪೋಸ್ಟ್‌ಗಳನ್ನು ಜನರು ಲೈಕ್​ ಮಾಡುತ್ತಿದ್ದರು. ಆದರೀಗ ಟಿಕ್​ಟಾಕ್ ತಾರೆ ಸಾವನ್ನಪ್ಪಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

Leave A Reply

Your email address will not be published.