CBSE ಯಿಂದ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್
ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) ನೋಟಿಸ್ ಒಂದನ್ನು ನೀಡಿದೆ. ಇದರ ಪ್ರಕಾರ, ಡಿಜಿಲಾಕರ್ನಲ್ಲಿ ಲಭ್ಯವಿರುವ ಸಿಬಿಎಸ್ಇ 12ನೇ ತರಗತಿ ಅಂಕಪಟ್ಟಿ ಮತ್ತು ವಲಸೆ ಪ್ರಮಾಣಪತ್ರವನ್ನು ಸ್ವೀಕರಿಸಲು ವಿಶ್ವವಿದ್ಯಾಲಯಗಳಿಗೆ ನೋಟಿಸ್ ನೀಡಿದೆ
ಡಿಜಿಲಾಕರ್ ನಲ್ಲಿ ನೀಡಲಾದ ಡಿಜಿಟಲ್ ಸಹಿ ಕ್ಯೂ ಆರ್ ಕೋಡ್ ಅಂಕಪಟ್ಟಿಯನ್ನು ಕಾನೂನುಬದ್ದ ಎಂದು ಗುರುತಿಸಲಾಗಿದೆ ಎಂದು ಸಿಬಿಎಸ್ಸಿ ಮಂಡಳಿ ಹೇಳಿದೆ. ಇನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಅವುಗಳನ್ನು ತೆಗೆದುಕೊಳ್ಳಲು ನಿರಾಕರಿಸುವಂತಿಲ್ಲ ಮತ್ತು ಪ್ರವೇಶಕ್ಕಾಗಿ ಪ್ರಿಂಟ್ ಔಟ್ ಪ್ರತಿಗಳನ್ನು ಕೇಳುವಂತಿಲ್ಲ ಎಂದು ತಿಳಿಸಿದೆ.
ವಲಸೆ ಪ್ರಮಾಣಪತ್ರಗಳನ್ನು ಮುದ್ರಿತ ರೂಪದಲ್ಲಿ ಸಲ್ಲಿಸುವಂತೆ ಕೆಲವು ವಿಶ್ವವಿದ್ಯಾಲಯಗಳು ಕೇಳಿದೆ.
ವಿದ್ಯಾರ್ಥಿಗಳಿಗೆ ಡಿಜಿಟಲ್ ಆಗಿ ನೀಡಲಾದ ಡಿಜಿಟಲ್ ಅಂಕಪಟ್ಟಿ ಪಾಸಿಂಗ್ ಸರ್ಟಿಫಿಕೇಟ್ ಮತ್ತು ವಲಸೆ ಪ್ರಮಾಣಪತ್ರವನ್ನು ಪರೀಕ್ಷಾ ನಿಯಂತ್ರಕರು ಸರಿಯಾಗಿ ಸಹಿ ಮಾಡಿರುತ್ತಾರೆ ಮತ್ತು ಮಾನ್ಯ ಮಾಡಿರುತ್ತಾರೆ ಎಂದು ಸಿಬಿಎಸ್ಇ ನೋಟಿಸ್ನಲ್ಲಿ ತಿಳಿಸಿದೆ.
ಸಿಬಿಎಸ್ಇ ಯುಜಿಸಿ ಕಾರ್ಯದರ್ಶಿ ಅವರು ಕ್ಯೂಆರ್ ಕೋಡ್ಗಳು ಮತ್ತು ಡಿಜಿಟಲ್ ಸಹಿಗಳೊಂದಿಗೆ ದಾಖಲೆಗಳ ಡಿಜಿಟಲ್ ಪ್ರತಿಗಳನ್ನು ಸ್ವೀಕರಿಸುವಂತೆ ಎಲ್ಲಾ ಉನ್ನತ ಸಂಸ್ಥೆಗಳಿಗೆ ನಿರ್ದೇಶಿಸುವಂತೆ ಡಾ. ರಜನೀಶ್ ಜೈನ್ ಅವರನ್ನು ನೋಟಿಸ್ ಮೂಲಕ ವಿನಂತಿಸಿದ್ದಾರೆ.
ಕೇಂದ್ರ ಮಂಡಳಿಯು ಇನ್ನು ಕೆಲವೇ ದಿನಗಳಲ್ಲಿ ಸಿಬಿಎಸ್ಇ 12ನೇ ತರಗತಿ ಅಂಕಪಟ್ಟಿ ಮತ್ತು ವಲಸೆ ಪ್ರಮಾಣಪತ್ರದ ಮುದ್ರಿತ ಪ್ರತಿಯನ್ನು ಬಿಡುಗಡೆ ಮಾಡಲಿದೆ. ಅಲ್ಲಿಯವರೆಗೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆಗಾಗಿ ಡಿಜಿಲಾಕರ್ನಲ್ಲಿ ಲಭ್ಯವಿರುವ ತಮ್ಮ ಡಿಜಿಟಲ್ ದಾಖಲೆಗಳನ್ನು ಬಳಸಬಹುದಾಗಿದೆ.
ಡಿಜಿಲಾಕರ್ನಲ್ಲಿ ಲಭ್ಯವಿರುವ ಅಂಕಪಟ್ಟಿಗಳು ಮತ್ತು ವಲಸೆ ಪ್ರಮಾಣಪತ್ರಗಳ ಆಧಾರದ ಮೇಲೆ, ಅಭ್ಯರ್ಥಿಗಳಿಗೆ ಪ್ರವೇಶ ಪಡೆಯಲು ಅವಕಾಶ ನೀಡಬೇಕು. ಮುದ್ರಿತ ಪ್ರತಿಗಳನ್ನು ಮಂಡಳಿಯು ಕೆಲವೇ ಸಮಯದಲ್ಲಿ ವಿತರಿಸುತ್ತದೆ ಎಂದು ಮಾಹಿತಿ ನೀಡಿದೆ.