ವಿಶ್ವದ ಶ್ರೀಮಂತರ ಟಾಪ್ 3 ಸ್ಥಾನಕ್ಕೆ ಏರಿದ ಗೌತಮ್ ಅದಾನಿ, ಕಾಲೇಜ್ ಡ್ರಾಪ್ ಔಟ್ ಈಗ ಏಷ್ಯಾದ ನಂ.1

ಭಾರತೀಯ ಉದ್ಯಮಿ, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಇದೀಗ ಮತ್ತಷ್ಟು ಶ್ರೀಮಂತ. ಎಲ್ಲಾ ಘಟಾನುಘಟಿಗಳನ್ನು ಸೈಡ್ ಗೆ ಸರಿಸಿ ಈಗ ಅದಾನಿ ವಿಶ್ವದ ಮೂರನೇ ಅತ್ಯಂತ ಸಿರಿವಂತ ಎನಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ ಮೊದಲ ಏಷ್ಯಾ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

ತನ್ನ ಕಾಲೇಜನ್ನು ಅರ್ಧಕ್ಕೇ ನಿಲ್ಲಿಸಿ, ವಜ್ರದ ವ್ಯಾಪಾರ ಪ್ರಾರಂಭಿಸಿದ ಅದಾನಿ ಈಗ ವಿಶ್ವದ 3ನೇ ಶ್ರೀಮಂತ ವ್ಯಕ್ತಿ ಮಾತ್ರವಲ್ಲದೇ ಈ ಸ್ಥಾನಕ್ಕೆ ಏರಿದ ಏಷ್ಯಾದ ಮೊದಲ ವ್ಯಕ್ತಿಯೂ ಆಗಿದ್ದಾರೆ.

ಹೌದು. ಇತ್ತೀಚಿನ ಬ್ಲೂಮ್‌ ಬರ್ಗ್ ಬಿಲಿಯನೇರ್ಸ್ ಡೇಟಾ ಪ್ರಕಾರ ಅದಾನಿ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 137 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ, ಎಲೋನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಅವರಿಗಿಂತ ಪಟ್ಟಿಯಲ್ಲಿ ಹಿಂದಿದ್ದಾರೆ. ಅವರೆಲ್ಲರನ್ನೂ ಹಿಂದಿಕ್ಕಿ ವಿಶ್ವದ ಮೂರನೇ ಶ್ರೀಮಂತರಾಗಿದ್ದಾರೆ.

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಏಷ್ಯಾದ ವ್ಯಕ್ತಿಯೊಬ್ಬರು ವಿಶ್ವದ ಅಗ್ರ ಮೂರು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು. ಟೆಲ್ಸಾ ಮುಖ್ಯಸ್ಥ ಮಸ್ಕ್ 251 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದರೆ, ಅಮೆಜಾನ್ ಸಂಸ್ಥಾಪಕ ಮತ್ತು CEO ಜೆಫ್ ಬೆಜೋಸ್ ಒಟ್ಟು 153 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿದ್ದಾರೆ. ಗೌತಮ್ ಅದಾನಿ ಅವರು ಎಲ್ವಿಎಂಹೆಚ್ ಮೊಯೆಟ್ ಹೆನ್ನೆಸ್ಸಿ ಲೂಯಿಸ್ ವಿಟಾನ್‌ನ ಸಹ-ಸಂಸ್ಥಾಪಕ, ಐಷಾರಾಮಿ ಫ್ಯಾಷನ್‌ನಲ್ಲಿ ವಿಶ್ವ ನಾಯಕರಾಗಿರುವ ಎಲ್‌ವಿಎಂಹೆಚ್ ಎಂದು ಕರೆಯಲ್ಪಡುವ ಫ್ರೆಶ್ ಬಿಸಿನೆಸ್ ಮ್ಯಾಗ್ನೇಟ್ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಮೀರಿಸಿದ್ದಾರೆ.

ಗೌತಮ್ ಅದಾನಿ ಅವರು ಅದಾನಿ ಗ್ರೂಪ್‌ನ ಸಹ ಸಂಸ್ಥಾಪಕರಾಗಿದ್ದಾರೆ. ಇದು ದೇಶದ ಅತಿದೊಡ್ಡ ಪೋರ್ಟ್ ಆಪರೇಟರ್ ಆಗಿದೆ. 60 ವಯಸ್ಸಿನ ಅದಾನಿ ಅವರು ಕಳೆದ ಕೆಲವು ವರ್ಷಗಳಿಂದ ಕಲ್ಲಿದ್ದಲು, ಬಂದರುಗಳ ಉದ್ಯಮಗಳನ್ನು ವಿಸ್ತರಿಸುತ್ತಿದ್ದಾರೆ. ಡೇಟಾ ಕೇಂದ್ರಗಳಿಂದ ಹಿಡಿದು ಸಿಮೆಂಟ್, ಮಾಧ್ಯಮ ಮತ್ತು ಅಲ್ಯೂಮೀನಿಯಂ ವರೆಗಿನ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅದಾನಿ ಗ್ರೂಪ್ ಈಗ ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರು, ವಿಮಾನ ನಿಲ್ದಾಣ ನಿರ್ವಾಹಕ, ಅನಿಲ ವಿತರಕ ಮತ್ತು ಕಲ್ಲಿದ್ದಲು ಗಣಿಗಾರಿಕೆ ಮಾಡುತ್ತಿದೆ. ಮಾರ್ಚ್ 31, 2021 ರ ವರ್ಷದಲ್ಲಿ ಅದಾನಿ ಎಂಟರ್‌ಪ್ರೈಸಸ್ 5.3 ಬಿಲಿಯನ್ ಡಾಲರ್ ಆದಾಯ ವರದಿ ಮಾಡಿದೆ.

Leave A Reply

Your email address will not be published.